ದಾವಣಗೆರೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ. ರೇಣುಕಾಚಾರ್ಯ ಪ್ರಚಾರ ಪ್ರಿಯ, ಟಿಆರ್ ಪಿ ರಾಜಕಾರಣಿ. ಮೊಳಕಾಲುದ್ದದ ನೀರಲ್ಲಿ ಬೋಟ್ ಓಡಿಸಿ ಕುಖ್ಯಾತಿ ಪಡೆದ ವ್ಯಕ್ತಿ. ಅವಕಾಶವಾದಿ ರಾಜಕಾರಣಿ ಎಂದು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ಹಲವು ನಾಯಕರು
ದಾವಣಗೆರೆ(ಜು.20): ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಮುಂದುವರಿದಿದೆ. ಹೌದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಂಡ್ ಟೀಮ್ ವಿರುದ್ಧ ಜಿಎಂ ಸಿದ್ದೇಶ್ವರ್ ಟೀಮ್ ವಾಗ್ದಾಳಿ ನಡೆಸಿದೆ.
ದಾವಣಗೆರೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ. ರೇಣುಕಾಚಾರ್ಯ ಪ್ರಚಾರ ಪ್ರಿಯ, ಟಿಆರ್ ಪಿ ರಾಜಕಾರಣಿ. ಮೊಳಕಾಲುದ್ದದ ನೀರಲ್ಲಿ ಬೋಟ್ ಓಡಿಸಿ ಕುಖ್ಯಾತಿ ಪಡೆದ ವ್ಯಕ್ತಿ. ಅವಕಾಶವಾದಿ ರಾಜಕಾರಣಿ ಎಂದು ರೇಣುಕಾಚಾರ್ಯ ವಿರುದ್ಧ ಮಾಜಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ಹಲವು ನಾಯಕರು ವಾಗ್ದಾಳಿ ನಡೆಸಿದ್ದಾರೆ.
undefined
ಬಿಎಸ್‌ವೈ, ಬಿವೈವಿ ಬಗ್ಗೆ ಹರೀಶ್ ಹಗುರ ಮಾತು ಸಹಿಸಲ್ಲ: ರೇಣುಕಾಚಾರ್ಯ
ಇಂದು(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೀರೇಶ್ ಹನಗವಾಡಿ ಸೇರಿದಂತೆ ಹಲವು ನಾಯಕರು, ರೇಣುಕಾಚಾರ್ಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಜೋಶಿ, ಸಂತೋಷ ಜೀ ಹಲವು ನಾಯಕರ ವಿರುದ್ಧ ಮಾತಾಡಿದ್ದಾರೆ. ನಮ್ಮ ಅಭ್ಯರ್ಥಿ ಹೊನ್ನಾಳಿಗೆ ಹೋದಾಗ ಹಿಂಬಾಲಕರಿಂದ ಗೊಂದಲ ಸೃಷ್ಟಿ ಮಾಡಿದ್ದರು. ನಮಗೆ ನಮ್ಮ ಪಕ್ಷದ ವರಿಷ್ಟರ ಬಗ್ಗೆ ಅಸಮಾಧಾನ ಆಗುತ್ತಿದೆ. ಇಂತವರನ್ನು ಸಹಿಸಿಕೊಂಡಿದ್ದರಲ್ಲ ಅಂತಾ ಕಾರ್ಯಕರ್ತರಿಗೆ ಬೇಸರ ಆಗಿದೆ ಎಂದು ಹೇಳಿದ್ದಾರೆ.
ಮೋದಿ ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಅಭ್ಯರ್ಥಿ 6 ಲಕ್ಷಕ್ಕೂ ಅಧಿಕ ಮತ ಪಡೆದಿದ್ದಾರೆ. ದಾವಣಗೆರೆ ಸೋಲಿಗೆ ಸ್ವಯಂಕೃತ ಅಪರಾಧ ಕಾರಣ ಅಂತಾ ಹೇಳುತ್ತಿದ್ದಿರಿ. ವಿಧಾನಸಭೆ ಚುನಾವಣೆಯಲ್ಲಿ 66 ಸೀಟ್ ಬರಲು ಕಾರಣ ಬೇಡ ಜಂಗಮ ಸರ್ಟಿಫಿಕೇಟ್ ಕಾರಣ. ನಿಮ್ಮ ಮನೆಯಿಂದಲೇ ಬೇಡ ಜಂಗಮ ಸರ್ಟಿಫಿಕೇಟ್ ಪಡೆದು ನಮ್ಮ ಪಕ್ಷದ ನಾಯಕರ ವಿರುದ್ಧ ಸ್ಪರ್ಧೆ. ಸಹಜವಾಗಿ ಪರಿಶಿಷ್ಟ ಜಾತಿಯ ವರ್ಗಗಳು ಬೇಸರ ಆಗಿದ್ದವು. ಇದ್ರಿಂದ ನಮಗೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ರೇಣುಕಾಚಾರ್ಯ ಭೂತನ ಬಾಯಲ್ಲಿ ಭಗವದ್ಗೀತೆ ಕೇಳಿದಂಗೆ ಆಗುತ್ತೆ. ನಮಗೆ ಎಚ್ಚರಿಗೆ ಕೊಡೊ ದೊಡ್ಡ ವ್ಯಕ್ತಿ ನೀನಲ್ಲ ಎಂದು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.