ಬಿಜೆಪಿ ನಾಯಕರ ಬಗ್ಗೆ ಅತೃಪ್ತಿ ಇದೆ: ಮುನೇನಕೊಪ್ಪ

By Kannadaprabha News  |  First Published Aug 29, 2023, 6:30 AM IST

ಸದ್ಯಕ್ಕೆ ಕಾಂಗ್ರೆಸ್‌ ಸೇರುವ, ಲೋಕಸಭೆಗೆ ಸ್ಪರ್ಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ನನ್ನಲ್ಲಿ ಇಲ್ಲ. ಮೇಲಾಗಿ ಕಾಂಗ್ರೆಸ್ಸಿನವರೂ ನನ್ನನ್ನು ಕರೆದಿಲ್ಲ. ಆದಾಗ್ಯೂ ಜನವರಿ ತಿಂಗಳಲ್ಲಿ ಒಂದು ರಾಜಕೀಯ ನಿರ್ಧಾರಕ್ಕೆ ಬರುತ್ತೇನೆ ಎಂದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ 


ಹುಬ್ಬಳ್ಳಿ(ಆ.29):  ಬಿಜೆಪಿ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ, ಪಕ್ಷದ ಕೆಲ ಮುಖಂಡರ ಬಗ್ಗೆ ತೀವ್ರ ಬೇಸರವಿದೆ. ಸದ್ಯ ಬಿಜೆಪಿ ಬಿಡುವ ಆಲೋಚನೆ ಇಲ್ಲ. ಜನವರಿಯಲ್ಲಿ ಹಿತೈಷಿ, ಅಭಿಮಾನಿಗಳೊಂದಿಗೆ ಚರ್ಚಿಸಿ ರಾಜಕೀಯ ನಿರ್ಧಾರ ಕೈಕೊಳ್ಳುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸದ್ಯಕ್ಕೆ ಕಾಂಗ್ರೆಸ್‌ ಸೇರುವ, ಲೋಕಸಭೆಗೆ ಸ್ಪರ್ಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ನನ್ನಲ್ಲಿ ಇಲ್ಲ. ಮೇಲಾಗಿ ಕಾಂಗ್ರೆಸ್ಸಿನವರೂ ನನ್ನನ್ನು ಕರೆದಿಲ್ಲ. ಆದಾಗ್ಯೂ ಜನವರಿ ತಿಂಗಳಲ್ಲಿ ಒಂದು ರಾಜಕೀಯ ನಿರ್ಧಾರಕ್ಕೆ ಬರುತ್ತೇನೆ ಎಂದರು.

Tap to resize

Latest Videos

ನಾನೀಗ ಬಿಜೇಪಿಲಿ ಇದ್ದೇನೆ, ಮುಂದೇನು ಗೊತ್ತಿಲ್ಲ: ಕುತೂಹಲ ಮೂಡಿಸಿದ ಕಮಲ ನಾಯಕನ ಹೇಳಿಕೆ..!

ಕಾಂಗ್ರೆಸ್ಸಿನವರು ಕರೆದಿಲ್ಲ: 

ಕಾಂಗ್ರೆಸ್‌ ಸೇರಿ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ಧಾರವಾಡ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹ ಕುರಿತಂತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ ಮುನೇನಕೊಪ್ಪ, ಯಾರೊಬ್ಬ ಕಾಂಗ್ರೆಸ್‌ ಮುಖಂಡರು ನನ್ನನ್ನು ಈವರೆಗೆ ಸಂಪರ್ಕಿಸಿಲ್ಲ, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ. ಆದರೆ, ಮಾಧ್ಯಮಗಳಲ್ಲಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂಬೆಲ್ಲ ಊಹಾಪೋಹಗಳು ಹಬ್ಬಿವೆ. ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಆಸೆಯೂ ಇಲ್ಲ, ಬಿಜೆಪಿ ಬಿಡಬೇಕು ಎಂಬ ಇರಾದೆಯೂ ಇಲ್ಲ. ಆದರೆ, ನಮ್ಮ ಕುಟುಂಬದಲ್ಲಿನ ಕೆಲವೊಂದಿಷ್ಟುಸಮಸ್ಯೆಗಳಿಂದಾಗಿ ನವೆಂಬರ್‌ವರೆಗೂ ನಾನು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದರು.

​ಕುಮಾರ್‌ ಬಂಗಾರಪ್ಪ ಯಾವುದೇ ಕಾರಣಕ್ಕೂ ಬಿಜೆಪಿ ಬಿಡೋದಿಲ್ಲ: ಸಂಸದ ಬಿವೈ ರಾಘವೇಂದ್ರ ಸ್ಪಷ್ಟನೆ

ಜೋಶಿ ಬಗ್ಗೆ ಅಸಮಾಧಾನ: 

ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೇ ಹಿರಿಯರು. ಅವರ ಮೇಲೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಅದನ್ನು ಅವರು ಸರಿಯಾಗಿ ನಿಭಾಯಿಸಬೇಕು. ಈ ಬಗ್ಗೆ ಅವರಿಗೆ ನಾನು ವೈಯಕ್ತಿಕವಾಗಿಯೂ ತಿಳಿಸಿದ್ದೇನೆ. ನಿಮ್ಮ ಮೂಲಕವೂ ತಿಳಿಸುತ್ತೇನೆ. ಹಿಂದೆ ಸಾಕಷ್ಟುತಪ್ಪುಗಳಾಗಿವೆ. ಆ ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಜೋಶಿ ಅವರ ಮೇಲಿದೆ ಎಂದು ಸೂಚ್ಯವಾಗಿ ಹೇಳಿದರು.
ಮನೆಗೊಬ್ಬರು ಹಿರಿಯರು ಬೇಕು. ಆ ಹಿರಿತನ ಇರುವುದು ಜೋಶಿ ಅವರಿಗೆ. ಯಾವುದೇ ಸಮಸ್ಯೆಯಾಗದಂತೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಇತ್ತೀಚೆಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನಕ್ಕೆ ಕೆಲವರನ್ನು ಕರೆದೇ ಇಲ್ಲ. ವಿಧಾನಪರಿಷತ್‌ ಸದಸ್ಯರಿಗೂ ಆಹ್ವಾನ ನೀಡಿಲ್ಲ. ಈ ಬಗ್ಗೆ ಕೆಲವರು ನನ್ನ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ಮುಂದೆ ಈ ರೀತಿ ಆಗಬಾರದು ಎಂದಷ್ಟೇ ಹೇಳಿದರು.

ಶೆಟ್ಟರ್‌ ಬೆಳೆಸಿದ್ದಾರೆ: ಹಿಂದೆ ದಿ.ಅನಂತಕುಮಾರ್‌, ಜಗದೀಶ ಶೆಟ್ಟರ್‌ ಅವರೆಲ್ಲ ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅನಂತಕುಮಾರ್‌ ಈಗಿಲ್ಲ, ಶೆಟ್ಟರ್‌ ಪಕ್ಷ ಬಿಟ್ಟಿದ್ದಾರೆ. ನನ್ನ ಬೆಳವಣಿಗೆಯಲ್ಲಿ ಅನಂತಕುಮಾರ್‌, ಯಡಿಯೂರಪ್ಪ, ಶೆಟ್ಟರ್‌ ಪಾತ್ರ ಅಪಾರ. ಬಿಜೆಪಿ ಸರ್ಕಾರವಿದ್ದಾಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಿಗಮ-ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಲಿಲ್ಲ. ಈ ಬಗ್ಗೆ ಕಾರ್ಯಕರ್ತರಲ್ಲೂ ಅಸಮಾಧಾನವಿದೆ. ನನಗೂ ನೋವಿದೆ ಎಂದರು.

click me!