
ಮಡಿಕೇರಿ(ಆ.29): ಬಿಜೆಪಿಯ ಪ್ರಮುಖ ನಾಯಕರು, ಹಾಲಿ ಶಾಸಕರು, ಮಾಜಿ ಶಾಸಕರು ಸೇರಿ ನಾವು ನಂಬಲು ಆಗದೇ ಇರುವಂತಹ ಅನೇಕರು ಪಕ್ಷಕ್ಕೆ ಬಂದರೆ ಅಚ್ಚರಿ ಪಡಬೇಕಿಲ್ಲ. ಕಲ್ಯಾಣ ಕರ್ನಾಟಕದಲ್ಲಂತೂ ಬಿಜೆಪಿಗೆ ಆಘಾತ ಕಾದಿದೆ ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಕಾಂಗ್ರೆಸ್‌ಗೆ ಇಂತಿಷ್ಟೇ ಜನ ಬರುತ್ತಾರೆಂದು ಸ್ಪಷ್ಟವಾಗಿ ಹೇಳಲಾಗದು. ಕಲ್ಯಾಣ ಕರ್ನಾಟಕ ಹಲವರು ನನ್ನ ಸಂಪರ್ಕ ದಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ಪಕ್ಷ ಬರಮಾಡಿಕೊಳ್ಳಲ್ಲಿದೆ. ಇನ್ನು, ಈ ಮುಖಂಡರು ಪಕ್ಷಕ್ಕೆ ಬರುವುದರಿಂದ ಆಗುವ ಲಾಭ ನಷ್ಟಗಳ ಕುರಿತು ರಾಜ್ಯ ನಾಯಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದ ಅವರು, ಇದಕ್ಕೆ ನಾವು ‘ಆಪರೇಷನ್ ಹಸ್ತ’ ಪದ ಬಳಕೆ ಮಾಡಲ್ಲ.‘ಆಪರೇಷನ್’ ಎಂಬ ಕೆಟ್ಟಶಬ್ದ ತಂದಿದ್ದೇ ಬಿಜೆಪಿ ಎಂದರು.
Karnataka Politics: ಆಪರೇಶನ್ ಹಸ್ತ ಟಾಸ್ಕ್ ಯಾರಿಗೂ ಕೊಟ್ಟಿಲ್ಲ: ಎನ್.ಎಸ್.ಬೋಸರಾಜ್
ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ರಾಷ್ಟ್ರೀಯ ನಾಯಕರು ಈಗಾಗಲೇ ಈ ಬಗ್ಗೆ ಸಭೆ ನಡೆಸಿದ್ದಾರೆ. ಜಿಲ್ಲಾಮಟ್ಟದಲ್ಲಿ ಉಸ್ತುವಾರಿ ಸಚಿವರಿಗೆ ಚುನಾವಣೆ ಜವಾಬ್ದಾರಿ ನೀಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.