ಬೇಗ್ ಬಿಟ್ಟು ಉಳಿದೆಲ್ಲ ಅನರ್ಹರು ಬಿಜೆಪಿ ಸೇರ್ಪಡೆ

By Kannadaprabha News  |  First Published Nov 14, 2019, 7:31 AM IST

ಶಿವಾಜಿನಗರದ ರೋಷನ್ ಬೇಗ್ ಹೊರತುಪಡಿಸಿ ಉಳಿದೆಲ್ಲ 16 ಅನರ್ಹ ಶಾಸಕರು ಗುರುವಾರ ಬಿಜೆಪಿ ಸೇರಲಿದ್ದಾರೆ. ಬೆಳಗ್ಗೆ 10.30ಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. 


ಬೆಂಗಳೂರು [ನ.14]:  ಸುಪ್ರೀಂಕೋರ್ಟ್‌ನಿಂದ ತೀರ್ಪು ಹೊರಬಿದ್ದ ಬೆನ್ನಲ್ಲೇ ಶಿವಾಜಿನಗರದ ರೋಷನ್ ಬೇಗ್ ಹೊರತುಪಡಿಸಿ ಉಳಿದೆಲ್ಲ 16 ಅನರ್ಹ ಶಾಸಕರು ಗುರುವಾರ ಬಿಜೆಪಿ ಸೇರಲಿದ್ದಾರೆ. ಬೆಳಗ್ಗೆ 10.30ಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯ ಲಿದೆ ಎಂದು ಬಿಜೆಪಿ ರಾಜ್ಯ ಘಟಕ  ಬುಧವಾರ ರಾತ್ರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಜೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಯಾಗುವ ಸಾಧ್ಯತೆಯಿದೆ. ಹುಣಸೂರು ಹೊರತುಪಡಿಸಿ ಇತರೆಡೆ ಆಯಾ ಅನರ್ಹ ಶಾಸಕರೇ ಅಭ್ಯರ್ಥಿಗಳಾಗಲಿದ್ದಾರೆ. ಹುಣಸೂರಿ ನಿಂದ ಎಚ್.ವಿಶ್ವನಾಥ್ ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಿದ್ದು, ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿಸಲಾಗುತ್ತದೆ.

Latest Videos

undefined

ಅವರಿಗೆ ವಿಧಾನಪರಿಷತ್ ಪ್ರವೇಶಿ ಸುವ ಆಸಕ್ತಿ ಇದೆ ಎನ್ನಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರ ಸಮ್ಮುಖದಲ್ಲಿ ಅನರ್ಹ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಪಾದಾರ್ಪಣೆ ಮಾಡಲಿದ್ದಾರೆ. 

ಬುಧವಾರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದ್ದು, ಸಭೆಯ ನಂತರ ಖುದ್ದು ಮುಖ್ಯಮಂತ್ರಿ  ಯಡಿಯೂರಪ್ಪ ಅವರೇ ಅನರ್ಹ ಶಾಸಕರ ಬಿಜೆಪಿ ಸೇರ್ಪಡೆಯನ್ನು ಘೋಷಿಸಿದರು. ಇದೀಗ ಅನರ್ಹ ಶಾಸಕರು ಅಧಿಕೃತ ವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಉಪಚುನಾವಣೆ  ಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿಯೇ ಕಣಕ್ಕಿಳಿಯಲಿದ್ದಾರೆ. 

ಗೆದ್ದ ನಂತರ ಬಹುತೇಕರಿಗೆ ಸಚಿವ ಸ್ಥಾನ ನಿಶ್ಚಿತವಾಗಿದೆ. ಇದೀಗ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಎಲ್ಲ ೧೫ ವಿಧಾನಸಭಾ ಕ್ಷೇತ್ರಗಳಿಗೂ ಸಚಿವರು ಹಾಗೂ ಶಾಸಕರನ್ನು ಒಳಗೊಂಡ ಉಸ್ತು ವಾರಿಗಳ ತಂಡ ಪ್ರಕಟಿಸಲಾಗಿದೆ. ಈ ತಂಡದ ಸದ ಸ್ಯರು ಗುರುವಾರದಿಂದಲೇ ತಮಗೆ ವಹಿಸಿದ ಕ್ಷೇತ್ರಗಳಲ್ಲಿ ಸಂಚರಿಸಿ ಪ್ರಚಾರದ ನೇತೃತ್ವ ವಹಿಸಲಿದ್ದಾರೆ.

ಇದು ಸಚಿವರಿಗೂ ಪ್ರತಿಷ್ಠೆಯ ವಿಷಯವಾಗಿದ್ದು, ಅವರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊ ಳ್ಳುವುದು ಅನಿವಾರ್ಯವಾಗಿದೆ. ಬುಧವಾರ ದೆಹಲಿಯಿಂದ ವಾಪಸಾದ ಅನರ್ಹ ಶಾಸಕರು ವಿಮಾನ ನಿಲ್ದಾಣದಿಂದ ನೇರವಾಗಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಬಳಿಕ ತಮ್ಮ ತಮ್ಮ ನಿವಾಸಗಳಿಗೆ ವಾಪಸಾದರು.

click me!