ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ

Published : Nov 13, 2019, 09:42 PM IST
ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ

ಸಾರಾಂಶ

ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ 15 ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಗೆ ಬೈ ಎಲೆಕ್ಷನ್ ಉಸ್ತುವಾರಿಯಾಗಿ ನೇಮಕಮಾಡಲಾಗಿದೆ. ಇನ್ನು ಯಾವ್ಯಾವ ಕ್ಷೇತ್ರದ ಉಸ್ತುವಾರಿಯನ್ನ ಯಾರಿಗೆ ನೀಡಲಾಗಿದೆ ಅನ್ನೋದನ್ನ ಮುಂದೆ ನೋಡಿ..

ಬೆಂಗಳೂರು, [ನ.13]: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹರ ಶಾಸಕರ ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಶಾಸಕರನ್ನು ಗುರುವಾರ ಬಿಜೆಪಿಗೆ ಬರಮಾಡಿಕೊಳ್ಳಲು ಈಗಾಗಲೇ ವೇದಿಕೆಯೂ ಸಹ ಸಿದ್ಧವಾಗಿದೆ. 

ಬೆಳಗ್ಗೆ 10.30ಕ್ಕೆ ಅನರ್ಹ ಶಾಸಕರು ಪಕ್ಷ ಸೇರುತ್ತಿದ್ದಂತೆಯೇ ಸಂಜೆ ವೇಳೆಗೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಅನರ್ಹರ ಕ್ಷೇತ್ರಗಳಿಗೆ  ಉಸ್ತುವಾರಿಗಳನ್ನ ನೇಮಕ ಮಾಡಿಲಾಗಿದೆ. 

ಅನರ್ಹ ಶಾಸಕರನ್ನು ಮನೆ ತುಂಬಿಸಿಕೊಳ್ಳಲು ಮುಹೂರ್ತ ಫಿಕ್ಸ್ ಮಾಡಿದ ಬಿಜೆಪಿ

ಇಂದು [ಬುಧವಾರ] ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ 15 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.  ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸಾರಥ್ಯದಲ್ಲಿ ಚುನಾವಣಾ ಉಸ್ತುವಾರಿಗಳನ್ನ ನೇಮಿಸಲಾಗಿದೆ. 

ಕಮಲ ಕಲಿಗಳ ಉಸ್ತುವಾರಿ..! 
* ಅಥಣಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ. ಎಸ್. ಈಶ್ವರಪ್ಪ
* ಕಾಗವಾಡ: ಸಚಿವ ಸಿ.ಸಿ. ಪಾಟೀಲ್, ಮಹಾಂತೇಶ್ ಕವಟಿಗಮಠ
* ಗೋಕಾಕ್: ಕೇಂದ್ರ ಸಚಿವ ಸುರೇಶ್ ಅಂಗಡಿ
* ಯಲ್ಲಾಪುರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕೋಟಾ ಶ್ರೀನಿವಾಸಪೂಜಾರಿ
* ಹಿರೇಕೆರೂರು: ಗೃಹ ಸಚಿವ ಬಸವರಾಜ್ ಬೊಮ್ಮಾಯಿ,  ಯುಬಿ ಬಣಕಾರ್ 
* ರಾಣೆಬೆನ್ನೂರು: ಸಚಿವ ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್
* ವಿಜಯನಗರ: ಡಿಸಿಎಂ ಗೋವಿಂದ ಕಾರಜೋಳ
* ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಸದಾನಂದ ಗೌಡ, ಸಚಿವ ಸಿ. ಟಿ. ರವಿ, ಬಚ್ಚೆಗೌಡ
* ಕೆ. ಆರ್. ಪುರಂ: ಅಶೋಕ್, ಸದಾನಂದಗೌಡ, ನಂದೀಶ್ ರೆಡ್ಡಿ
* ಯಶವಂತಪುರ: ಶೋಭಾ ಕರಂದ್ಲಾಜೆ,  ಜಗ್ಗೇಶ್
* ಮಹಾಲಕ್ಷ್ಮಿ ಲೇಔಟ್: ಸಚಿವರಾದ ವಿ. ಸೋಮಣ್ಣ ಹಾಗೂ ಎಸ್. ಸುರೇಶ್ ಕುಮಾರ್
* ಕೆ. ಆರ್. ಪೇಟೆ: ಸಚಿವ ಮಾಧುಸ್ವಾಮಿ, ಬಿ.ವೈ ವಿಜಯೇಂದ್ರ
* ಹುಣಸೂರು: ಸಚಿವ ಶ್ರೀರಾಮುಲು, ಸಂಸದ ಪ್ರತಾಪ್ ಸಿಂಹ
* ಶಿವಾಜಿ ನಗರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್.ರಘು
* ಹೊಸಕೋಟೆ: ಡಿಸಿಎಂ ಡಾ. ಅಶ್ವಥ್ ನಾರಾಯಣ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ
ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ