ಪಿಎಫ್‌ಐ 'ಕಳಂಕಿತ' ಎಸ್‌ಡಿಪಿಐ ಬೆಂಬಲ ತಿರಸ್ಕರಿಸಿದ ಕಾಂಗ್ರೆಸ್‌

By Kannadaprabha NewsFirst Published Apr 5, 2024, 6:36 AM IST
Highlights

ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗೆ ಎಸ್‌ಡಿಪಿಐ ಬುಧವಾರ ಬೆಂಬಲ ಘೋಷಿಸಿತ್ತು. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು. 

ತಿರುವನಂತಪುರಂ(ಏ.05):  ನಿಷೇಧಿತ ಪಾಪ್ಯುಲರ್‌ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ತನಗೆ ನೀಡಿದ ಚುನಾವಣಾ ಬೆಂಬಲವನ್ನು ಕಾಂಗ್ರೆಸ್‌ ಗುರುವಾರ ತಿರಸ್ಕರಿಸಿದೆ. ಆದರೆ ಅದರ ಬೆಂಬಲಿಗರು ತನಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಮತ ಹಾಕಿದರೆ ಅದನ್ನು ತಡೆಯಲಾಗದು ಎಂದು ಸ್ಪಷ್ಟಪಡಿಸಿದೆ.

ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗೆ ಎಸ್‌ಡಿಪಿಐ ಬುಧವಾರ ಬೆಂಬಲ ಘೋಷಿಸಿತ್ತು. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು. 

ಉಗ್ರರ ಬೆಂಬಲದೊಂದಿಗೆ ಕಾಂಗ್ರೆಸ್‌ ಸ್ಪರ್ಧೆ: ಬಿಜೆಪಿ ಆರೋಪ

ಈ ಕುರಿತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ಕಾಂಗ್ರೆಸ್ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ವಿರೋಧಿಸುತ್ತದೆ. ಹೀಗಾಗಿ ಎಸ್‌ಡಿಪಿಐ ಬೆಂಬಲ ತಿರಸ್ಕರಿಸಿದ್ದೇವೆ. ಎಸ್‌ಡಿಪಿಐ ಜೊತೆ ಯುಡಿಎಫ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿದರು.

click me!