ಕೇರಳ ರಾಜ್ಯದ ಮಾದರಿಯಲ್ಲಿ ಗ್ರಾಮ ಪಂಚಾಯ್ತಿಗಳನ್ನು ಜನಸ್ನೇಹಿಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಾಂಡವಪುರ (ಜು.28): ಕೇರಳ ರಾಜ್ಯದ ಮಾದರಿಯಲ್ಲಿ ಗ್ರಾಮ ಪಂಚಾಯ್ತಿಗಳನ್ನು ಜನಸ್ನೇಹಿಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕೇರಳದ ಕೇಲಾ ಸಂಸ್ಥೆ ನೀಡುವ ಐಎಸ್‌ಒ (ಇಂಟರ್ ನ್ಯಾಷಿನಲ್ ಸ್ಟ್ಯಾಂಡ್ಹರ್ಡ್ ಆರ್ಗನೈಷನ್) ಪ್ರಮಾಣ ಪತ್ರ ಆಯ್ಕೆಗಾಗಿ ಗ್ರಾಪಂಗಳ ಅಭಿವೃದ್ಧಿಪಡಿಸುವ ಸಂಬಂಧ ಗ್ರಾಪಂ ಪಿಡಿಒಗಳಿಗೆ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೇರಳ ರಾಜ್ಯದಲ್ಲಿನ ಗ್ರಾಪಂಗಳು ಸಾಕಷ್ಟುಅಭಿವೃದ್ಧಿ ಹೊಂದಿದೆ. ಅಲ್ಲಿ ಪಂಚಾಯ್ತಿಗಳು ಜನಸ್ನೇಹಿ ಆಡಳಿತ ನೀಡುತ್ತಿವೆ.
ಪಂಚಾಯ್ತಿಗೆ ಬರುವ ಸಾರ್ವಜನಿಕರು, ಜನರಿಗೆ ಅಗತ್ಯ ಸೇವೆ ಸಲ್ಲಿಸುತ್ತಿವೆ. ಜನರಿಗೆ ಬೇಕಾದ ಅಗತ್ಯ ಮೂಲಸೌಕರ್ಯಗಳ ಜತೆಗೆ ತಕ್ಷಣ ಜನರ ಸಮಸ್ಯೆಗೆ ಸ್ಪಂದನೆ ನೀಡಿ ಕೆಲಸ ಮಾಡುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ಪಂಚಾಯ್ತಿಗಳು ಕೆಲಸ ಮಾಡಬೇಕು ಎಂದರು. ಕೇರಳದ ಕೇಲಾ ಸಂಸ್ಥೆ ನೀಡುವ ಐಎಸ್‌ಒ ಪ್ರಮಾಣ ಪತ್ರ ಆಯ್ಕೆಗಾಗಿ ತಾಲೂಕಿನ ಚಿನಕುರಳಿ, ಮೇಲುಕೋಟೆ, ಸುಂಕಾತೊಣ್ಣೂರು, ಚಿಕ್ಕಾಡೆ ಹಾಗೂ ಕೆನ್ನಾಳು ಗ್ರಾಪಂಗಳು ಆಯ್ಕೆಯಾಗಿವೆ. ಈ ಗ್ರಾಪಂಗಳಿಗೆ ಕೇರಳದ ಕೇಲಾ ಸಂಸ್ಥೆಯ ಅಧಿಕಾರಿಗಳು ಈಗಾಗಲೆ ಭೇಟಿ ಕೊಟ್ಟು ಪಂಚಾಯ್ತಿಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಚರ್ಚಿಸಿ ಗ್ರಾಪಂಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಚರ್ಚಿಸಿದ್ದಾರೆ ಎಂದರು.
ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ: ಸಚಿವ ಶಿವರಾಜ ತಂಗಡಗಿ
ಐಎಸ್‌ಒ ಪ್ರಮಾಣ ಪತ್ರಕ್ಕೆ ಆಯ್ಕೆಯಾಗಿರುವ ಗ್ರಾಪಂಗಳು ಮಾತ್ರವಲ್ಲ ತಾಲೂಕಿನ ಎಲ್ಲ ಗ್ರಾಪಂಗಳು ಸಹ ಅದೇ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು. ತಾಪಂ ಇಒ ಲೋಕೇಶ್ ಮೂರ್ತಿ ಮಾತನಾಡಿ, ಕೇರಳದ ಕೇಲಾ ಸಂಸ್ಥೆ ನೀಡುವ ಐಎಸ್‌ಒ ಪ್ರಮಾಣ ಪತ್ರಕ್ಕೆ ತಾಲೂಕಿನ ಐದು ಗ್ರಾಪಂಗಳು ಆಯ್ಕೆಯಾಗಿವೆ. ಚನ್ನಪಟ್ಟಣದ ತಾಲೂಕಿನ 2 ಹಾಗೂ ಸುಳ್ಯ ತಾಲೂಕಿನ 3 ಗ್ರಾಪಂಗಳು ಆಯ್ಕೆಯಾಗಿದೆ. ಆಯ್ಕೆಯಾಗಿರುವ ಗ್ರಾಪಂಗಳು ಕೇಲಾ ಸಂಸ್ಥೆಯ ಅಧಿಕಾರಿಗಳು ಸೂಚಿಸಿರುವ ಅದೇ ಮಾದರಿಯಲ್ಲಿ ಕೆಲಸ ಮಾಡಬೇಕು.
ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಜಗದೀಶ್ ಶೆಟ್ಟರ್
ಉಳಿದ ಗ್ರಾಪಂಗಳಲ್ಲೂ ಅದೇ ಮಾದರಿಯಲ್ಲಿ ಕೆಲಸ ಮಾಡಬೇಕು ಎಂದರು. ತರಬೇತಿ ಕಾರ್ಯಾಗಾರದಲ್ಲಿ ಕೇರಳದ ಕೇಲಾ ಸಂಸ್ಥೆಯ ಅಧಿಕಾರಿಗಳು ಐಎಸ್‌ಒ ಪ್ರಮಾಣಕ್ಕೆ ಪತ್ರಕ್ಕೆ ಆಯ್ಕೆಯಾಗುವ ಗ್ರಾಪಂಗಳು ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ಗ್ರಾಪಂಗೆ ತರಬೇತಿ ನೀಡಿದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಎಸ್‌ಐಆರ್‌ಡಿ ಅಧಿಕಾರಿ ಪ್ರಮೋದ್, ಕೇರಳದ ಕೇಲಾ ಸಂಸ್ಥೆಯ ಅಧಿಕಾರಿಗಳಾದ ಕೃಷ್ಣನ್, ಕಣ್ಣನ್, ಶಿರಿಷಾ, ಬೀತು, ತಾಪಂ ಎಡಿ ಸುರೇಂದ್ರ ಸೇರಿದಂತೆ ಹಲವರು ಇದ್ದರು.