ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಪಕ್ಷಗಳಿಂದ ಎಂದಿಗೂ ದಲಿತರ ಉದ್ದಾರ ಆಗಿಲ್ಲ. ಬದಲಾಗಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಂದ ದಲಿತರ ಹಿತಾಸಕ್ತಿ ಕಾಪಾಡಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ (ಆ.07): ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಪಕ್ಷಗಳಿಂದ ಎಂದಿಗೂ ದಲಿತರ ಉದ್ದಾರ ಆಗಿಲ್ಲ. ಬದಲಾಗಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಂದ ದಲಿತರ ಹಿತಾಸಕ್ತಿ ಕಾಪಾಡಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ನಗರದ ಅಂಭೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ವತಿಯಿಂದ ವಿವಿಧ ಯೋಜನೆಗಳಡಿ 101 ಲಕ್ಷಗಳ ಮಂಜೂರಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಟಿಎಸ್‌ಪಿ, ಎಸ್ಸಿಪಿ ಯೋಜನೆಯನ್ನು ಅನುಷ್ಠಾನ ಮಾಡಿ ಅಂಬೇಡ್ಕರ್ ಹಾಗೂ ಕರ್ನಾಟಕ ಆದಿಜಾಂಭವ ಅಭಿವೃದ್ಧಿ ನಿಗಮದ ಮೂಲಕ ಸಾಲ ಸೌಲಭ್ಯವನ್ನು ಒದಗಿಸಿ ದಲಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯ ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬ ದಲಿತನೂ ಇದನ್ನು ಅರಿತುಕೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹೊಸಕೋಟೆಯಲ್ಲಿ ಬಿ.ಎನ್.ಬಚ್ಚೇಗೌಡರು ಶಾಸಕರಾಗಿದ್ದ ಸಂದರ್ಭದಿಂದಲೂ ದಲಿತರ ಬೆನ್ನಿಗೆ ನಿಂತಿದ್ದು, ಅವರ ಮಗನಾಗಿ ನಾನೂ ಕೂಡ ಶಾಸಕನಾಗಿ ಜಾತಿ, ಭೇದ- ಭಾವ ಮಾಡದೇ ಎಲ್ಲಾ ಸವಲತ್ತುಗಳನ್ನು ದಲಿತರಿಗೆ ಒದಗಿಸುವ ಕಾರ್ಯ ಮಾಡುತ್ತಿದ್ದೇನೆ ಎಂದರು.
ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಸಿಗ್ನಲ್‌ನಲ್ಲಿ ಹಿಡಿದ ಪೊಲೀಸ್ ಪೇದೆ!
ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ,ಮಹೇಶ್ ಮಾತನಾಡಿ, ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ೧೪ ಗುರಿಗಳನ್ನು ನಿಗದಿಪಡಿಸಲಾಗಿದ್ದು, ತಲಾ ಒಂದು ಲಕ್ಷಗಳಂತೆ ಸಹಾಯಧನ ಒಟ್ಟು 14 ಲಕ್ಷ ರು.ಗಳು, ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಭೌತಿಕ ಗುರಿ ೩, ಆರ್ಥಿಕ ಗುರಿ 6 ಲಕ್ಷ ರು.ಗಳು ನಿಗದಿಯಾಗಿದ್ದು, ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆಯಡಿ ಭೌತಿಕ ಗುರಿ 06 ಸಂಘಗಳಿದ್ದು, ಒಂದು ಸಂಘಕ್ಕೆ 2.50 ಲಕ್ಷ ರು.ಗಳಂತೆ ಒಟ್ಟು 06 ಸಂಘಗಳಿಗೆ 15 ಲಕ್ಷ ರು.ಗಳು ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ಭೌತಿಕ ಗುರಿ 09 ನಿಗದಿಯಾಗಿದ್ದು, ಆರ್ಥಿಕ ಗುರಿ ೪.೫೦ ಲಕ್ಷ ರು.ಗಳಂತೆ ಒಟ್ಟು 09 ಫಲಾನುಭವಿಗಳಿಗೆ ಒಟ್ಟು 40.50 ಲಕ್ಷ ರು.ಗಳನ್ನು ನಿಗದಿಪಡಿಸಲಾಗಿರುತ್ತದೆ.
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ 06 ಗುರಿಗಳನ್ನು ನಿಗದಿಪಡಿಸಲಾಗಿದ್ದು, ತಲಾ ಒಂದು ಲಕ್ಷಗಳಂತೆ ಸಹಾಯಧನ ಒಟ್ಟು 6 ಲಕ್ಷ ರು.ಗಳು ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಭೌತಿಕ ಗುರಿ 2 , ಆರ್ಥಿಕ ಗುರಿ 4 ಲಕ್ಷ ರು. ನಿಗದಿಯಾಗಿದ್ದು ಮತ್ತು ಗಂಗಾ ಕಲ್ಯಾಣಾ ಯೋಜನೆಯಡಿ ಭೌತಿಕಗುರಿ 03 ನಿಗದಿಯಾಗಿದ್ದು, ಆರ್ಥಿಕ ಗುರಿ 4 ಲಕ್ಷ ರು.ಗಳಂತೆ ಒಟ್ಟು 03 ಫಲಾನುಭವಿಗಳಿಗೆ ಒಟ್ಟು 12 ಲಕ್ಷ ರು.ಗಳನ್ನು ನಿಗದಿಪಡಿಸಲಾಗಿರುತ್ತದೆ ಎಂದರು.
ತಾಕತ್ತಿದ್ದರೆ ಬಿಜೆಪಿ-ಜೆಡಿಎಸ್‌ನವರು ಎನ್‌ಸಿಆರ್‌ಬಿ ವರದಿ ಬಿಡುಗಡೆಗೊಳಿಸಿ: ಸಚಿವ ಸಂತೋಷ್ ಲಾಡ್
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಸಂಪತ್ ರಾಜ್, ಕರ್ನಾಟಕ ಆದಿಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಎಚ್.ಎಂ.ಸುಬ್ಬರಾಜ್, ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ, ಹೋರಾಟಗಾರ ಚಿನ್ನಸ್ವಾಮಿ, ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ಅರುಣ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ಎಂ.ಮಹೇಶ್, ಹೊಸಕೋಟೆ ತಾಲೂಕು ಅಭಿವೃದ್ಧಿ ಅಧಿಕಾರಿ ಕು.ಶಾರದಾ ಎಸ್. ಹಿಮಾಲೈ, ಜಿಲ್ಲಾ ಕಚೇರಿಯ ವಿಷಯ ನಿರೂಪಕ ದಳಸಗೆರೆ ಮಂಜುನಾಥ್ ಹಾಗೂ ಶ್ರೀ.ಲಿಂಗಣ್ಣ, ವೀಣಾ, ಶಶಿಕುಮಾರ್ ಹಾಗೂ ಪುನೀತ್‌ಕುಮಾರ್ ಇದ್ದರು.