ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಕೊಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿಯಿಂದಲೇ ಛೀಮಾರಿ ಹಾಕಿದ್ದಾರೆ. ಕನ್ನಡ ಓದಲು ಬಾರದ ಮಂತ್ರಿಯಿಂದ ಯಾವ ಅಭಿವೃದ್ಧಿ ಸಾಧ್ಯ ಎಂದು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಕುಣಿಗಲ್ (ಮೇ.24) : ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಕೊಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿಯಿಂದಲೇ ಛೀಮಾರಿ ಹಾಕಿದ್ದಾರೆ. ಕನ್ನಡ ಓದಲು ಬಾರದ ಮಂತ್ರಿಯಿಂದ ಯಾವ ಅಭಿವೃದ್ಧಿ ಸಾಧ್ಯ ಎಂದು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಪಟ್ಟಣದ ಗೌತಮ ಶಾಲೆಯಲ್ಲಿ ಶಿಕ್ಷಕರಿಂದ ಮತಯಾಚನೆ ಮಾಡಿ ಅವರು ಮಾತನಾಡಿ, ಮಕ್ಕಳು ಪರೀಕ್ಷೆಯಲ್ಲಿ ನಕಲು ಮಾಡಿದರೆ ಶಿಕ್ಷಕರಿಗೆ ಶಿಕ್ಷೆ ನೀಡುವ ಪದ್ಧತಿ ಕಾಂಗ್ರೆಸ್ ನಲ್ಲಿದೆ. 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಕಾನೂನೇ ಇದ್ದರೂ ಕೋರ್ಟ್ ಗೆ ಹೋಗಿ ಛೀಮಾರಿ ಹಾಕಿಸಿಕೊಂಡ ಸರ್ಕಾರ ಇದು, ಹಲವಾರು ಭ್ರಷ್ಟಾಚಾರ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿದೆ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಚಿವರಿಗೆ ಕನ್ನಡವೇ ಬರುವುದಿಲ್ಲ, ಇಂತಹ ಸಚಿವರಿಂದ ಮಕ್ಕಳು ಹಾಗೂ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ ಎಂದರು.
undefined
ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಬಂಗಾರಪ್ಪ ಕಾರಣ : ವೈ.ಎ.ನಾರಾಯಣಸ್ವಾಮಿ
ಸಚಿವ ಮಧು ಬಂಗಾರಪ್ಪ ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ, ಕಾಂಗ್ರೆಸ್ ಸರ್ಕಾರ ಶಿಕ್ಷಕರಿಗೆ ಹಿಂಸೆ ಕೊಡುತ್ತಿದೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಫಲಿತಾಂಶದ ನೆಪವೊಡ್ಡಿ ಅನುದಾನಿತ ಶಾಲೆಗಳನ್ನು ಮುಚ್ಚುವ, ಅವರ ಸೌಲಭ್ಯಗಳನ್ನು ತಡೆಯುವ ಸಂಚನ್ನು ಈ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರಿ ಶಾಲೆಯಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉದಾಸೀನತೆ ಮಾಡುತ್ತಿದ್ದು, ಅವರಿಗೆ ತೊಂದರೆ ಉಂಟಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದೇನೆ. ಸರ್ಕಾರದ ಶೇ. 90 ರಷ್ಟು ಅನುದಾನವನ್ನು ಶಾಲೆಗಳಿಗೆ ನೀಡಿದ್ದೇನೆ, ಜೆಓಸಿಯಲ್ಲಿ 4,500 ಜನ ಶಿಕ್ಷಕರನ್ನು ಕಾಯಂಗೊಳಿಸಿದ್ದೇವೆ. ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ. ಕೋವಿಡ್ ನಲ್ಲಿ ಯಾವೊಬ್ಬ ಶಿಕ್ಷಕರಿಗೂ ಸಂಬಳ ನಿಲ್ಲಿಸದ ಏಕೈಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಕೂಡ ಉತ್ತಮ ಆಡಳಿತವನ್ನು ನೀಡಿದ್ದೇವೆ. 18 ವರ್ಷದ ಈ ಸೇವೆಯಲ್ಲಿ ಭ್ರಷ್ಟಾಚಾರ, ದಬ್ಬಾಳಿಕೆ ರಹಿತ ಉತ್ತಮ ಆಡಳಿತ ಮಾಡಿದ್ದೇನೆ. ನನಗೆ ಪ್ರತಿ ಶಾಲೆಯ ಶಿಕ್ಷಕ ಮತ್ತು ಶಾಲೆಗಳ ಪರಿಚಯವಿದೆ, ಪ್ರತಿಯೊಬ್ಬರೂ ಕೂಡ ನನಗೆ ಮತ ಹಾಕುತ್ತಾರೆ ಎಂಬ ಆತ್ಮವಿಶ್ವಾಸವಿದೆ, ಮತ್ತೊಂದು ಬಾರಿ ನನ್ನನ್ನು ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಗಡಿಜಿಲ್ಲೆ ಚಾಮರಾಜನಗರದಲ್ಲಿ ಮತ್ತೆ ಶಿಕ್ಷಕರ ಕೊರತೆ; ಎಸ್‌ಎಸ್‌ಎಲ್‌ಸಿ ಫಲಿತಾಂಶ ಭಾರೀ ಕುಸಿತ!
ಎನ್‌ಪಿಎಸ್ ಮತ್ತು ಓಪಿಎಸ್ ಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದ ಕಾಂಗ್ರೆಸ್ಸಿಗರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಕೇಂದ್ರ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಇದನ್ನು ಜಾರಿ ಮಾಡಿದ್ದರೂ ಎಂಬುದಕ್ಕೆ ದಾಖಲಾತಿಗಳಿವೆ. ಆ ತಪ್ಪುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್, ತಾಲೂಕು ಅಧ್ಯಕ್ಷ ಬಲರಾಮ್, ಜಿಡಿ ಗಂಗಾಧರ್, ಸೇರಿ ಹಲವಾರು ಶಿಕ್ಷಕರು ಇದ್ದರು