ದೇವೇಗೌಡರನ್ನು ಕಸದಂತೆ ಬೀಸಾಡಿ, ನೋವು ಕೊಟ್ಟರು: ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ: ಎಟಿ ರಾಮಸ್ವಾಮಿ

By Sathish Kumar KH  |  First Published Feb 28, 2023, 7:01 PM IST

ಮನೆಯ ಮುತ್ಸದ್ದಿಯನ್ನು, ಯಾರ ಹೆಸರು, ತಪ್ಪಸ್ಸಿನಿಂದ ಇವರು ಮೇಲೆ ಬಂದರೋ ಆ ಏಣಿಯನ್ನು ಒದ್ದರು. ಕಸದಂತೆ ಬಿಸಾಕಿ, ನೋವು ಕೊಟ್ಟರು. ಇವತ್ತು ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದ್ದಾರೆ.


ಹಾಸನ (ಫೆ.28): ಇವರು ಮನೆಯ ಮುತ್ಸದ್ದಿಯನ್ನು, ಯಾರ ಹೆಸರು, ತಪ್ಪಸ್ಸಿನಿಂದ ಇವರು ಮೇಲೆ ಬಂದರೋ ಆ ಏಣಿಯನ್ನು ಒದ್ದರು. ಅವರನ್ನು ಕಸದಂತೆ ಬಿಸಾಕಿದರು, ನೋವು ಕೊಟ್ಟರು. ಇವತ್ತು ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದ್ದಾರೆ ಎಂದು ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದ್ದಾರೆ.

ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕಾರಣ ಅವಧಿಯಲ್ಲಿ ಪಕ್ಷಕ್ಕಾಗಲಿ ನಾಯಕರಿಗೆ ಆಗಲಿ ಕೆಟ್ಟ ಹೆಸರು ಬರುವಂತೆ ನಡೆದುಕೊಂಡಿಲ್ಲ. ಆಡಳಿತ ಪಕ್ಷ ಇರಲಿ ವಿರೋಧ ಪಕ್ಷ ಇರಲಿ ತಪ್ಪನ್ನ ತಪ್ಪು ಅಂತ ಹೇಳಿಕೊಂಡು ಬಂದಿದ್ದೇನೆ. ಕೆಲವೊಮ್ಮೆ ಸತ್ಯ ಹೇಳಿದಕ್ಕೆ ದಂಡ ತೆರಬೇಕಾಗುತ್ತದೆ. ಸ್ವಾರ್ಥಕ್ಕಾಗಿ ಕೆಲವು ಸತ್ಯವನ್ನು ಸಾಯಿಸುತ್ತಾರೆ. ಯಾರನ್ನು ಬೇಕಾದರೂ ಬಲಿ ಕೊಡ್ತಾರೆ. ಇವರು ತಮ್ಮ ಸ್ವಾರ್ಥಕ್ಕಾಗಿ ಮನೆಯ ಮುತ್ಸದ್ದಿಯನ್ನು, ಯಾರ ಹೆಸರು, ತಪ್ಪಸ್ಸಿನಿಂದ ಮೇಲೆ ಬಂದರೀ ಆ ಏಣಿಯನ್ನು ಒದ್ದಿದ್ದಾರೆ. ಅವರನ್ನು ಬೀಸಾಕಿ- ನೀವು ಕೊಟ್ಟರು. ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ. ಎಂದು ಆರೋಪ ಮಾಡಿದರು.

Latest Videos

undefined

ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಗಟ್ಟಿದರು: ಇವರಿಗೆ ನಾನ್ಯಾವ ಲೆಕ್ಕ ಎಂದ ರಾಮಸ್ವಾಮಿ

ದೇವೇಗೌಡರ ಕಾರ್ಯಕ್ರಮ ರದ್ದುಗೊಳಿಸಿದರು: ಕಳೆದ ತಿಂಗಳು 600 ಕೋಟಿ ನೀರಾವರಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸಲು ಮನೆಗೆ ಹೋಗಿದ್ದೆ. ನನ್ನ ಕೈ ಹಿಡಿದುಕೊಂಡು ರಾಮಸ್ವಾಮಿ ಅವರೇ ನಿಮಗೆಲ್ಲ ಏನೇನು ಕಿರುಕುಳ ಕೊಡುತ್ತಿದ್ದಾರೆ ನನಗೆ ಗೊತ್ತು. ನನ್ನ ಜೀವ ಇರುವವರಿಗೆ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದರು. ಅವರ ಟೂರ್ ಪ್ರೋಗ್ರಾಂ ಕೂಡ (ಕಾರ್ಯಕ್ರಮಕ್ಕೆ ಬರಲು) ಫಿಕ್ಸ್ ಆಯ್ತು. ಆದರೆ, ಹಿಂದಿನ ದಿನ ರೇವಣ್ಣ‌ ಮನೆಯಲ್ಲಿ ಜನ ಸೇರಿಸಿದ್ದರು. ರಾಮಸ್ವಾಮಿಗೆ ಟಿಕೆಟ್ ಕೊಡಬೇಡಿ ಎಂದರು. ನಾನು ಲೂಟಿಕೋರನಾ, ಅನ್ಯಾಯ ಮಾಡಿದಿನಾ, ಮೋಸ ಮಾಡಿದ್ದೀನಾ.? ಒಳ್ಳೆಯವರು, ಪ್ರಾಮಾಣಿಕರನ್ನು ಕೆಲವರು ಸ್ವಾರ್ಥಕ್ಕಾಗಿ ಸಹಿಸಿಕೊಳ್ಳುವುದಿಲ್ಲ. ಆದರೆ, ರೇವಣ್ಣ ಎಲ್ಲರಿಗೂ ದೂರವಾಣಿ ಕರೆ ಮಾಡಿ ಪ್ರೋಗ್ರಾಂ ಕ್ಯಾನ್ಸಲ್ ಆಗಿದೆ ಎಂದು ಹೇಳಿಬಿಟ್ಟರು.

ಗುಲಾಮಗಿರಿಯಿಂದ ಹೊರಗೆ ಬರಲೇಬೇಕು: ಹಾಸನದಲ್ಲಿ ಗುಲಾಮಗಿರಿ ಇದೆ. ಕೈಕಟ್ಟಿ ನಿಲ್ಲಬೇಕು, ಉಸಿರು ಬಿಡುವುದು ಕಷ್ಟವಾಗಿದೆ. ಮನೆಯ ಮುಂದೆ ಕೈಕಟ್ಟಿ ನಿಲ್ಲಬೇಕು. ಮನೆ ಒಳಗೆ ಕರೆದು ಗೌರವದಿಂದ ಮಾತನಾಡಿಸಲ್ಲ. ಜನ ಅದರಿಂದ ಹೊರ ಬರಲೇಬೇಕು. ಎಲ್ಲರೂ ಸ್ವಾಭಿಮಾನಿಗಳಾಗಬೇಕು. ರಾಜಕೀಯ ಕಳೆ ಬೃಹತ್ ಆಗಿ ಬೆಳೆದಿದ್ದು, ಅದನ್ನು ಬುಡಸಹಿತ ಕಿತ್ತಾಕಬೇಕು. ಉಸಿರುಗಟ್ಟಿದ ವಾತಾವರಣದಿಂದ ಹೊರಬನ್ನಿ. ನಾನು ಚುನಾವಣೆಗೆ ನಿಂತೇ, ನಿಲ್ತಿನಿ ಗೆದ್ದು ವಿಧಾನಸಭೆಗೆ ಹೋಗೇ ಹೋಗ್ತಿನಿ. ಎಲ್ಲಿ‌ ನಿಲ್ಲಬೇಕು ಅಂತ ಜನ ತೀರ್ಮಾನ ಮಾಡ್ತಾರೆ. ಬನ್ನಿ ಈ ಸಾರಿ ರಾಜಕೀಯ ರಣರಂಗಕ್ಕೆ ಜನ ತೋರಿಸುತ್ತಾರೆ. ಇನ್ನೂ ನಿಮ್ಮ ಬೊಗಳೆ ಮಾತು ನಂಬುವುದಿಲ್ಲ. ನಮ್ಮ ಜಿಲ್ಲೆಯ ಜನ ಇತಿಶ್ರೀ ಹಾಡ್ತಾರೆ ಎಂದು ಹೇಳಿದರು.

ಹಾಸನ ಜೆಡಿಎಸ್‌ ಟಿಕೆಟ್‌ಗೆ ಫೈಟ್‌: ಭವಾನಿ ಬೆಂಬಲಿಗರ ಬೃಹತ್‌ ಪ್ರತಿಭಟನೆ

ಸೂಟ್‌ಕೇಸ್‌ ಕೊಟ್ಟವರಿಗೆ ಟಿಕೆಟ್ : ಇದೇ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಹುಣಸೂರು, ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್‌ನಲ್ಲಿ ಸೂಟಕೇಸ್ ಕೊಟ್ಟವರಿಗೆ ಟಿಕೆಟ್ ಅಂತ ಹೇಳಿದ್ದರು. ಈ ಪಕ್ಷದಲ್ಲಿ ಯಾರು ಟಿಕೆಟ್ ಕೊಡ್ತಿದ್ದರು, ಯಾವ ಹೈಕಮಾಂಡ್ ಕೊಡತ್ತಿದ್ದರು. ಹೀಗೆ ಹೇಳಲು ಇವರಿಗೆ ಲಂಗು ಲಗಾಮು‌ ಇಲ್ವಾ? ದೇವೇಗೌಡರು ಈ ಮಾತನ್ನು ಹೇಗೆ ಅರಗಿಸಿಕೊಂಡರು. ಬೇರೆ ಯಾರಾದರೂ ಆಗಿದ್ದರೆ ಇವರು ಸುಮ್ಮನೆ ಇರುತ್ತಿದ್ದರಾ? ಇದರ ಬಗ್ಗೆ ಜನವೇ ತೀರ್ಮಾನ ಮಾಡಲಿ ಎಂದು ಹೇಳಿದರು.

click me!