ಸಿಎಂ ಆಗ್ಲಿಲ್ಲ ಅಂತ ಪರಮೇಶ್ವರ್ ಗೋಳು, ಸಿಎಂ ಆಗುವ ಅವಕಾಶ ತಪ್ಪಿಸಿದ್ಯಾರು..?

By Web Desk  |  First Published Feb 24, 2019, 10:05 PM IST

ಸಿಎಂ ಆಗುವ ಅವಕಾಶ ಮೂರು ಬಾರಿ ತಪ್ಪಿಸಿದ್ದಾರೆ - ಪರಂ!ಒಂದಲ್ಲ, ಎರಡಲ್ಲ, ಮೂರು ಬಾರಿ ಸಿಎಂ ಚಾನ್ಸ್ ಮಿಸ್ ಆಗಿದೆ ಎಂದು ಗೋಳಾಡಿದ ಪರಮೇಶ್ವರ್


ದಾವಣಗೆರೆ, [ಫೆ.24]: ಒಂದಲ್ಲ, ಎರಡಲ್ಲ, ಮೂರು ಬಾರಿ ದಲಿತರು ಸಿಎಂ ಆಗೋ ಚಾನ್ಸ್ ತಪ್ಪಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇಂದು [ಭಾನುವಾರ] ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ವೇದಿಕೆಯಲ್ಲಿ ಮಾತನಾಡಿದ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಬಸವಲಿಂಗಪ್ಪ, ರಂಗನಾಥ್ ಅವರಿಗೆ ಕಾಂಗ್ರೆಸ್ ನಾಯಕರೇ ಸಿಎಂ ಆಗುವ ಅವಕಾಶ ತಪ್ಪಿಸಿದರು. ನನಗೂ ಸಿಎಂ ಆಗುವ ಅವಕಾಶ ಮೂರು ಬಾರಿ ತಪ್ಪಿಸಿದ್ದಾರೆ ಎಂದರು. 

Tap to resize

Latest Videos

ನನಗೆ ಅನಿವಾರ್ಯ ಎಂಬಂತೆ  ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದಾರೆ. ನಾವು ಎಲ್ಲವನ್ನು ಹೋರಾಟ ಮಾಡಿಯೇ ಪಡೆಯಬೇಕಾಗಿದೆ ಎಂದು ಹೇಳಿದರು. ಆದ್ರೆ, ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿದ್ಯಾರು ಅನ್ನೋದನ್ನು ಮಾತ್ರ ಬಾಯ್ಬಿಡಲಿಲ್ಲ.

click me!