ಲೋಕಾ ಟಿಕೆಟ್: ‘ಕೈ’ನಲ್ಲಿ ಮಹಿಳಾ ಮಣಿಗಳ ಕಾದಾಟ?

By Web DeskFirst Published Feb 24, 2019, 5:26 PM IST
Highlights

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್‌ಗೆ ಲಾಬಿ ಶುರುವಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಟಿಕೆಟ್ ಫೈಟ್ ಗೊತ್ತಿಲ್ಲದೆ ಆರಂಭವಾಗಿದೆ. ಆದರೆ ನಾವೇನು ಕಮ್ಮಿ ಎಂದು ಮಹಿಳೆಯರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಬೆಂಗಳೂರು(ಫೆ. 24) ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಮಹಿಳೆಯರು ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರ ಪತ್ನಿ ಹಾಗೂ ಪುತ್ರಿಯರಿಂದಲೇ ಭಾರಿ ಪೈಪೋಟಿ ಆರಂಭವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ನಿ ಗೀತಾ ಖಂಡ್ರೆ ಯಿಂದ ಟಿಕೆಟ್ಗಾಗಿ ಲಾಬಿ ಆರಂಭಿಸಿದ್ದದಾರೆ. ಬೀದರ್ ಲೋಕಸಭಾ ಕ್ಷೇತ್ರದಿಂದ ಗೀತಾ ಟಿಕೆಟ್ ಕಕೇಳಿದ್ದಾರೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಬಾಗಲಕೋಟೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೆ ಕ್ಷೇತ್ರದಿಂದ ಮೊತ್ತೊಬ್ಬ ಪ್ರಬಲ ಮಹಿಳೆಸಹ ಪೈಪೋಟಿ ನೀಡಿದ್ದಾರೆ. ಮಾಜಿ ಸಚಿವ ಎಚ್ ವೈ ಮೇಟಿ ಪುತ್ರಿ ಬಾಯಕ್ಕ ಮೇಟಿ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧರಾಗುತ್ತಿದ್ದಾರೆ.

ಮಾಜಿ ಸಿಎಂ ಕೆ ಸಿ ರೆಡ್ಡಿಯವರ ಸೊಸೆಯಾದ ವಸಂತ ಕವಿತಾ ಸಹ ರೇಸ್ ನಲ್ಲಿ ಇದ್ದಾರೆ. ಗೃಹ ಸಚಿವ ಎಂ ಬಿ ಪಾಟೀಲ್ ಪತ್ನಿ ಆಶಾ ಪಾಟೀಲ್ ಆಸಕ್ತಿ ತೋರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿಕೆ ನೀಡಿದ್ದು  ಯಾರಿಗೆ ಆಸಕ್ತಿ ಇದೆ ಅವರು ಅರ್ಜಿ ಹಾಕಬಹುದು. ನಾಳೆ [ಫೆ.25] ಅರ್ಜಿ ಹಾಕುವುದಕ್ಕೆ ಕೊನೆಯ ದಿನವಾಗಿದ್ದು ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು  ಎಂದು ತಿಳಿಸಿದ್ದಾರೆ.

click me!