ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡ್ತಾರೋ ಅವತ್ತೇ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕ್ಲೋಸ್: ಕೆ.ಎಸ್.ಈಶ್ವರಪ್ಪ

By Kannadaprabha News  |  First Published Dec 1, 2023, 4:13 PM IST

ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡ್ತಾರೇ ಅವತ್ತೇ ಸಿಎಂ ಸ್ಥಾನ ಕ್ಲೋಸ್ ಆಗುತ್ತದೆ. ಹೀಗೆಂದು ಭವಿಷ್ಯ ನುಡಿದಿದ್ದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು. ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂಬತ್ತು ವರ್ಷಗಳಿಂದ ಜಾತಿಗಣತಿ ಬಗ್ಗೆ ಹೇಳುತ್ತಿದ್ದಾರೆ. 


ಗದಗ (ಡಿ.01): ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡ್ತಾರೇ ಅವತ್ತೇ ಸಿಎಂ ಸ್ಥಾನ ಕ್ಲೋಸ್ ಆಗುತ್ತದೆ. ಹೀಗೆಂದು ಭವಿಷ್ಯ ನುಡಿದಿದ್ದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು. ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂಬತ್ತು ವರ್ಷಗಳಿಂದ ಜಾತಿಗಣತಿ ಬಗ್ಗೆ ಹೇಳುತ್ತಿದ್ದಾರೆ. ವಿಧಾನ ಪರಿಷತ್ತನಲ್ಲಿ ನಾನೇ ಹತ್ತು ಬಾರಿ‌ ಕೇಳಿದ್ದೇನೆ, ಅದರ ಬಗ್ಗೆ ಮಾತನಾಡಲಿಲ್ಲ. ಯಾವಾಗ ಜಾತಿ ಜನಗಣತಿ ರಿಲೀಸ್ ಮಾಡ್ತೀರಿ ಅಂದರೆ ನಾಳೆ, ನಾಡಿದ್ದು, ಆಚೆ ನಾಡಿದ್ದು, ರೆಡಿ ಆಗುತ್ತಿದೆ ಎಂದು ಹಾರಿಕೆ ಉತ್ತರ ಕೊಡುತ್ತಲೇ ಬಂದರು. ನಾನು ಇಳಿಯುವುದರೊಳಗಾಗಿ ಕೊಟ್ಟೇ ಇಳಿಯುತ್ತೇನೆ ಅಂದಿದ್ರು. 

ಇವತ್ತಿನವರೆಗೂ ಅದು ಆಗಿಲ್ಲ. ನಾನು ಅಂದೇ ಹೇಳಿದ್ದೆ, ನೀವು ಜಾತಿ ಜಾತಿ ನಡುವೆ ಬೆಂಕಿ ಹಚ್ವುತ್ತೀರಿ ಎಂದು. ಒಂದು ಕಡೆ ಲಿಂಗಾಯತರು, ಮತ್ತೊಂದು ಕಡೆ ಒಕ್ಕಲಿಗರು, ಇಡೀ ಸಮಾಜ ಛಿದ್ರ ಮಾಡಿ ಬಿಟ್ರಲ್ಲಾ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಇಡೀ ವಿಶ್ವ ನರೇಂದ್ರ ಮೋದಿ ಅವರನ್ನು ಪ್ರೀತಿಯಿಂದ ಬಾಚಿ ತಬ್ಬಿಕೊಳ್ಳುತ್ತಿದೆ. ಅಂತಹ ಸುಸಂಸ್ಕೃತ ವ್ಯಕ್ತಿ ವಿಶ್ವ ನಾಯಕನಿಗೆ ಸಿದ್ದರಾಮಯ್ಯ ಗಿರಾಕಿ ಅಂತಾರಲ್ಲ, ಇವ್ರ ನಾಲಿಗೆಯೊಳಗೆ ಏನ್ ಬೀಳುತ್ತೆ? ಎಂದು ಕಿಡಿಕಾರಿದರು. ಬೇರೆಯವರ ಬಗ್ಗೆ ಅಷ್ಟು ಮಾತನಾಡುತ್ತೀರಲ್ಲ, ಹಲೋ ಅಪ್ಪಾ... ಅಂತ ಹೇಳಿದ್ದು ಭ್ರಷ್ಟಾಚಾರ ಅಲ್ವಾ ನಿಮ್ಗೆ.. ಸಿಎಂ ಸಿದ್ದರಾಮಯ್ಯ ಗಿರಾಕಿಗೆ ತಾಕತ್ತಿದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. 

Tap to resize

Latest Videos

ಅಭಿವೃದ್ಧಿ ನಿಗಮದ ಅನುದಾನಕ್ಕಾಗಿ ಕೆಸರೆರೆಚಾಟ: ಶಾಸಕ ಪೊನ್ನಣ್ಣ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ

ಇದೊಂದೇ ಕೇಸ್ ಮಾತ್ರ ನ್ಯಾಯಾಂಗ ತನಿಖೆ ಮಾಡಲಿ ಸಾಕು, ಬೇರಾವುದೂ ಬೇಡ.. ಹಲೋ ಅಪ್ಪಾ ಅಂತ ನಿಮ್ಮ ಮಗ ನಿಮಗೆ ಸಭೆಯಲ್ಲಿ ಫೋನ್ ಮಾಡಿದ್ನಲ್ಲ, ಇದೊಂದು ಬೇಜವಾಬ್ದಾರಿ. ಹಲೋ ಅಪ್ಪಾ, ವಿವೇಕಾನಂದ ಎಲ್ಲಿಗೆ? ಎಲ್ಲಿಗೆ ಅಂದ್ರೆ ಸಿಎಸ್ಆರ್ ಫಂಡ್ ಅಂತಾರೆ. ಸಿಎಸ್ಆರ್ ಫಂಡ್ ವಿವೇಕಾನಂದ ಸಂಸ್ಥೆಗೆ ಎಷ್ಟು ಅಂತ ಕೇಳಬೇಕಿತ್ತು? ಎಲ್ಲಿಗೆ ಅಂತ ಯಾಕೆ ಕೇಳಿದ್ರು ಎಂದು ವ್ಯಂಗ್ಯವಾಡಿದರು. ಡಿ.ಕೆ. ಶಿವಕುಮಾರ ಮೇಲಿನ ಪ್ರಕರಣದ ಬೆಳವಣಿಗೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಶೇ. 100 ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳು, ಕಾಂಗ್ರೆಸ್‌ನಲ್ಲಿ ಇದ್ದುಕೊಂಡು ಎಷ್ಟು ಬೇಕಾದರೂ ಲೂಟಿ ಮಾಡಬಹುದಾ?, ದೇಶದಲ್ಲಿ ಎಲ್ಲ ಪಕ್ಷದವರನ್ನು ಸಿಬಿಐ ಮುಟ್ಟಿದ್ದಾರೆ. 

ಸಾವಿರಾರು ಕೋಟಿ ಸಿಕ್ಕಿರೋದು ಕಾಂಗ್ರೆಸ್‌ನಲ್ಲಿ, ಸಿಬಿಐ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಮನೆ ಮೇಲೆ ರೈಡ್ ಮಾಡಿದ್ದರು. ಅಕ್ರಮವಾಗಿ ನೂರಾರು ಕೋಟಿ ಕಂತೆ ಕಂತೆ ಹಣ ಸಿಕ್ಕಿತ್ತು. ಬಾಕ್ಸ್‌ಗಟ್ಟಲೇ ಅಕ್ರಮ ದಾಖಲೆಗಳು ಸಿಕ್ಕಿತ್ತು. ಆವಾಗ ಉತ್ತರ ಕೊಡಲಿಲ್ಲ. ಶೇ. 90 ತನಿಖೆ ಮುಗಿದು ಹೋಗಿದೆ. ಚಾರ್ಜ್‌ಶೀಟ್‌ ಹಾಕುವ ಸಂದರ್ಭದಲ್ಲಿ, ತಮ್ಮ ಕೈಯಲ್ಲಿ ಸರ್ಕಾರ ಇದೆ ಎಂಬ ಒಂದೇ ಕಾರಣಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಕ್ಯಾಬಿನೆಟ್ ಮಂತ್ರಿಗಳ ಮೇಲೆ ಒತ್ತಡ ಹಾಕಿ ಕೇಸ್ ಹಿಂಪಡೆದರು. ಡಿ.ಕೆ. ಶಿವಕುಮಾರ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಎಫ್ಐಆರ್ ಹಿಂಪಡೆದಿಲ್ಲ. ಪಾರ್ಲಿಮೆಂಟ್ ಮುಂಚೆ, ಪಾರ್ಲಿಮೆಂಟ್ ಮುಗಿದ ಮೇಲೆ ಅವರು ಕೇಸ್ ಮುಗಿಯುತ್ತದೆ. ಚಾರ್ಜ್‌ಶೀಟ್‌ ಸಲ್ಲಿಕೆ ಆಗುತ್ತದೆ ನೋಡಿ ಎಂದರು.

ರಾಜ್ಯ ಕ್ಯಾಬಿನೆಟ್‌ನಲ್ಲಿ ಕಳ್ಳರ ತಂಡವೇ ಕೂತಿದೆ: ಶೋಭಾ ಕರಂದ್ಲಾಜೆ

ಸಿದ್ದರಾಮಯ್ಯ ಅಲ್ಲ, ಅವರು ಸುಳ್ಳುರಾಮಯ್ಯ, ಪ್ರತಿಯೊಂದಕ್ಕೂ ಸುಳ್ಳು ಹೇಳುತ್ತಾರೆ. ಎಲ್ಲರ ಬಗ್ಗೆಯೂ ಹಗುರವಾಗಿ ಮಾತನಾಡುತ್ತಾರೆ. ನಮಗೆ ಮಾತಾಡೋಕೆ ಬರಲ್ವಾ? ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಅಷ್ಟೇ. ಕೂರೋಕೆ ಯೋಗ್ಯತೇ ಇಲ್ಲ ಅಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ಸಚಿವ ಜಮೀರ್ ಅಹ್ಮದ್ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಸ್ಥಾನ ಕೊಟ್ಟಿದ್ದೇವೆ ಎನ್ನುವ ಹಮ್ಮಿನಲ್ಲಿ 224 ಜನರು ಮುಸ್ಲಿಮರಿಗೆ ತಲೆ ತಗ್ಗಿಸಿಕೊಂಡು ಹೋಗಬೇಕು ಎನ್ನುತ್ತಾರೆ. ಅಂಬೇಡ್ಕರ್ ಸಂವಿಧಾನ ಬರೆದಿದ್ದು ಮುಸ್ಲಿಮರಿಗೆ ತಲೆ ತಗ್ಗಿಸಿಕೊಂಡು ನಡೆಯೋದಕ್ಕಾ? ಹೇಳಿ.. ಸ್ಪೀಕರ್ ಸ್ಥಾನಕ್ಕೆ ಕನಿಷ್ಠ ಗೌರವ ಕೊಡಬೇಕು ಅನ್ನೋ ಯೋಗ್ಯತೆ ಇಲ್ಲವದವರೆಲ್ಲಾ ಮಂತ್ರಿಗಳಾಗಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ನಗರಸಭೆಯ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.

click me!