
ಸದ್ಯ ತಮಿಳುನಾಡಿನಲ್ಲಿ ನಟನಾಗಿರುವ ದಳಪತಿ ವಿಜಯ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ವಿಜಯ್ ಈ ಹಿಂದೆ ರ್ಯಾಲಿ ನಡೆಸಿದ ಸಂದರ್ಭದಲ್ಲಿಯೂ ಹಿಂದೆಂದಿಗಿಂತಲೂ ಜನರು ಸೇರಿ ದಾಖಲೆಯನ್ನೇ ಬರೆದಿದ್ದರು. ಅಷ್ಟಕ್ಕೂ ತಮಿಳುನಾಡಿನಲ್ಲಿ ನಟರೊಬ್ಬರು ರಾಜಕೀಯಕ್ಕೆ ಬಂದರೆ ಇದೇ ರೀತಿ ಮರ್ಯಾದೆ ಇದೆ, ಅವರಿಗೆ ಸಿನಿಮಾ ಮತ್ತು ರಾಜಕೀಯ ಎರಡರಲ್ಲಿಯೂ ಜನರು ಜೈ ಎನ್ನುತ್ತಾರೆ ಎನ್ನುವುದಕ್ಕೆ ಇತಿಹಾಸವೇ ಇದೆ.
ಇದರ ಬೆನ್ನಲ್ಲೇ ಇದೀಗ ನಟ ಶಿವರಾಜ್ ಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಟಿಕೆಟ್ ಆಫರ್ ಕೊಟ್ಟಿರುವ ವಿಡಿಯೋ ಒಂದು ವೈರಲ್ ಆಗಿದೆ. ನೀನು ಪಾರ್ಲಿಮೆಂಟ್ಗೆ ನಿಂತ್ಕೊಳೋಕೆ ರೆಡಿಯಾಗಪ್ಪ, ಎಲ್ಲಿ ಬೇಕೋ ಅಲ್ಲಿ ಸೀಟು ಕೊಡ್ತೀನಿ ಅಂತ. ಅದಕ್ಕೆ ಅವ್ನು, ಇಲ್ಲಾ, ಇನ್ನೂ ಐದಾರು ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದ. ಸಿನಿಮಾ ಯಾವಾಗಲಾದರೂ ಮಾಡಬಹುದು. ಪಾರ್ಲಿಮೆಂಟ್ಗೆ ಹೋಗುವ ಯೋಗ ಯಾವಾಗ್ಲೋ ಬರುವುದಿಲ್ಲ. ಅವಕಾಶ ಮನೆಯ ಬಾಗಿಲಿಗೆ ಬಂದಿದೆ, ಅದನ್ನು ತಪ್ಪಿಸಿಕೊಳ್ಳಲು ಹೋಗಬೇಡಿ ಎಂದಿದ್ದಾರೆ ಡಿ.ಕೆ.ಶಿವಕುಮಾರ್.
ಅದಕ್ಕೆ ಉತ್ತರವಾಗಿ ಶಿವರಾಜ್ ಕುಮಾರ್ ಅವರು, ನಮ್ಮ ತಂದೆ ಕೊಟ್ಟಿರುವ ಬಳುವಳಿ ಒಂದೇ. ನಾವು ಬಣ್ಣ ಹಚ್ಚಬೇಕು, ಆ್ಯಕ್ಟ್ ಮಾಡಬೇಕು, ನಿಮ್ಮನ್ನು ಮೆಚ್ಚಿಸಬೇಕು ಅಷ್ಟೆನೇ. ಏನಿದ್ರೂ ನನ್ನದು ಅಷ್ಟಕ್ಕೆ ಸೀಮಿತ ಎಂದಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವುದೇ ಇಲ್ಲ ಎಂದಿದ್ದಾರೆ. ಅಷ್ಟಕ್ಕೂ ತಮಿಳುನಾಡಿನಂತೆ ಕರ್ನಾಟಕದಲ್ಲಿ ನಟರು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಇದಾಗಲೇ ಸಾಬೀತಾಗಿದೆ. ಸಿನಿಮಾ ನಟನೆಗೆ ಲಕ್ಷಾಂತರ ಫ್ಯಾನ್ಸ್ ಇದ್ದರೂ, ಅವರೆಲ್ಲರೂ ತಮ್ಮ ನೆಚ್ಚಿನ ನಟನಿಗೆ ವೋಟ್ ಹಾಕುತ್ತಾರೆ ಎನ್ನಲಾಗದು. ಈ ವಿಷಯದಲ್ಲಿ ತಮಿಳುನಾಡಿಗೂ ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನೇ ಅರಿತೋ ಏನೋ ಒಟ್ಟಿನಲ್ಲಿ ಶಿವರಾಜ್ ಕುಮಾರ್ ಅವರು ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಸೂಚ್ಯವಾಗಿ ನುಡಿದಿದ್ದಾರೆ.
ಅಂದಹಾಗೆ ವಿಜಯ್ ದಳಪತಿ ಅವರ ಗೆಲುವಿನ ಬಳಿಕ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಇದು ಹಳೆಯ ವಿಡಿಯೋ ಆಗಿದೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಶಿವಣ್ಣ ಅವರಿಗೆ ಆಫರ್ ಕೊಟ್ಟಿದ್ದರು. ನಟ ಇದನ್ನು ತಿರಸ್ಕರಿಸಿದ್ದರು. ಆದರೆ ಕಳೆದ ಬಾರಿ ಕಾಂಗ್ರೆಸ್ನಿಂದ ತಮ್ಮ ಪತ್ನಿ ಗೀತಾ ಅವರನ್ನು ನಿಲ್ಲಿಸಿದ್ದರು. ಆದರೆ ಜನರು ಅವರ ಕೈ ಹಿಡಿಯಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.