ಸವದಿಯವರೆ ಎಲ್ಲವೂ ಸಿಗುತ್ತೆ ತಾಳ್ಮೆಯಿಂದಿರಿ: ಡಿಸಿಎಂ ಡಿ.ಕೆ.ಶಿವಕುಮಾರ

By Kannadaprabha News  |  First Published Aug 12, 2023, 9:04 PM IST

ನಾವೆಲ್ಲ ಮೆಡಿಕಲ್‌ ಕಾಲೇಜು ಬೇಕು ಅಂತ ನಾವು ಬಡಿದಾಡುತ್ತಿದ್ದೇವೆ. ಆದರೆ, ಅವರು ನೂರಾರು ಕೋಟಿ ರುಪಾಯಿ ಆಸ್ಪತ್ರೆ ಮಾಡಿ ನನ್ನ ಕಣ್ಣನ್ನೂ ತೆರೆಸಿದ್ದಾರೆ. ನಮ್ಮ ಭಾಗದಲ್ಲಿ ಆಗದ ಕೆಲಸವನ್ನು ನೀವು ಈ ಗಡಿಭಾಗದಲ್ಲಿ ಮಾಡಿದ್ದಿರಿ ಎಂದು ಸವದಿ ಅವರ ಕಾರ್ಯವನ್ನು ಶ್ಲಾಘಿಸಿದ ಡಿಸಿಎಂ ಡಿ.ಕೆ.ಶಿವಕುಮಾರ 


ಬೆಳಗಾವಿ(ಆ.12): ಮನುಷ್ಯ ಋುಣವನ್ನು ತೀರಿಸಬೇಕಾದರೆ ದೇವರ, ಗುರು, ತಂದೆ ತಾಯಿ, ಸಮಾಜದ ಋುಣ ತೀರಿಸಬೇಕು. ಮುಂದಿನ ಎಷ್ಟುದಿನ ಇರ್ತಿನಿ ಗೊತ್ತಿಲ್ಲ. ಹುಟ್ಟು ಉಚಿತ, ಸಾವು ಖಚಿತ. ನಿಮ್ಮ ಋುಣವನ್ನು ತೀರಿಸಬೇಕು, ನೀರಾವರಿ ಮಾಡಬೇಕು ಅಂತ ಸವದಿ ಕೇಳಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲ ಮೆಡಿಕಲ್‌ ಕಾಲೇಜು ಬೇಕು ಅಂತ ನಾವು ಬಡಿದಾಡುತ್ತಿದ್ದೇವೆ. ಆದರೆ, ಅವರು ನೂರಾರು ಕೋಟಿ ರುಪಾಯಿ ಆಸ್ಪತ್ರೆ ಮಾಡಿ ನನ್ನ ಕಣ್ಣನ್ನೂ ತೆರೆಸಿದ್ದಾರೆ. ನಮ್ಮ ಭಾಗದಲ್ಲಿ ಆಗದ ಕೆಲಸವನ್ನು ನೀವು ಈ ಗಡಿಭಾಗದಲ್ಲಿ ಮಾಡಿದ್ದಿರಿ ಎಂದು ಸವದಿ ಅವರ ಕಾರ್ಯವನ್ನು ಶ್ಲಾಘಿಸಿದರು.

Tap to resize

Latest Videos

ನನ್ನ ಬಳಿ ಪೆನ್‌ಡ್ರೈವ್‌ ಇರೋದು ನಿಜ, ಸಮಯ ಬಂದಾಗ ಬಿಡುಗಡೆ: ಲಕ್ಷ್ಮಣ ಸವದಿ

ನನಗೂ ಈ ಉದ್ಘಾಟನೆಗೂ ಸಂಬಂಧ ಇಲ್ಲ. ನನಗ್ಯಾಕೆ ಕರೆಯುತ್ತಿದ್ದಿರಿ ಅಂತ ಸವದಿ ಅವರನ್ನು ಕೇಳಿದೆ. ನಾನು ಸಾಮಾನ್ಯವಾಗಿ ಪೇಟ, ಟೋಪಿ ಹಾಕಿಕೊಳ್ಳಲು ಹೋಗಲ್ಲ. ಅವರ ಭಾಷಣ ಕೇಳಿದರೆ ಹಾರ ಟೋಪಿ ಭಾರ ಆಯ್ತು. ಅವರು ಕೇಳ್ತಿರೋ ಯೋಜನೆಗಳು ಹಾಗಿವೆ. ಒಂದು ಕಣ್ಣು, ಚಿನ್ನದ ತಟ್ಟೆ, ಎಲ್ಲವನ್ನೂ ಕೇಳಿರುವುದು ಅವರ ಸಲುವಾಗಿ ಅವರು ಕೇಳಿಲ್ಲ, ನಿಮ್ಮ ಪರವಾಗಿ ಕೇಳಿದ್ದಾರೆ. 70 ಸಾವಿರಕ್ಕೂ ಹೆಚ್ಚು ಅಂತರದಿಂದ ಅವರನ್ನು ಗೆಲ್ಲಿಸಿ ಬಿಜೆಪಿಗೆ ರಾಜ್ಯಕ್ಕೆ ಸಂದೇಶ ನೀಡಿದ್ದಿರಿ ಎಂದರು.

ಬಹಳ ದೊಡ್ಡ ತೀರ್ಮಾನವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಂಡರು. ನಮ್ಮ ಪಕ್ಷ ಹಿರಿಯ ನಾಯಕರಾದ ಸವದಿ ಹಾಗೂ ಶೆಟ್ಟರನ್ನು ಸಂತೋಷದಿಂದ ಸ್ವೀಕಾರ ಮಾಡಿದೆ. ಮರಕ್ಕೆ ಬೇರು ಎಷ್ಟುಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೆಮುಖ್ಯ. ನಂಬಿಕೆ ಇಲ್ಲವಾದರೆ ಸಂಬಂಧ ಉಳಿಯುವುದಿಲ್ಲ. ಬಿಜೆಪಿಯಲ್ಲಿ ಅವರಿಗೆ ದೊಡ್ಡ ಭವಿಷ್ಯವಿದ್ದರೂ ಅವರು ತಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ. 135 ಜನ ಇರುವ ಪಕ್ಷದಲ್ಲಿ ನೀವಿದ್ದಿರಿ, ನೀವು ಚಿಂತೆ ಮಾಡಬೇಡಿ. ಯಾವುದೇ ಕಾರಣಕ್ಕೂ ಚಿಂತೆ ಮಾಡೋದು ಬೇಡ ಯೋಜನೆಗಳಿಗೆ ಹೊಸದಾಗಿ ಏನಾದರೂ ಮಾಡ್ತಿನಿ ಎಂದು ಶಾಸಕ ಲಕ್ಷ್ಮಣ ಸವದಿ ಬೇಡಿಕೆಗಳಿಗೆ ಎಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

200 ಯುನಿಟ್‌ ಗೃಹಜ್ಯೋತಿ, ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಬಿಜೆಪಿಯವರು ಇಂತಹ ಯೋಜನೆ ಮಾಡಿದ್ರಾ? ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತ್ರ ಮಾಡಿದೆ. ಅಯ್ಯೋ ಎಂಥಾ ಚಾನ್ಸ್‌ ನನಗೆ ಚಾನ್ಸ್‌ ಸಿಗಲಿಲ್ಲ ಅಂತ ಕೈ ಕೈ ಮಸಕೊಂಡು ಓಡಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

click me!