ಡಿ.ಕೆ. ಶಿವಕುಮಾರ್‌ ‘ನಟ್ಟು ಬೋಲ್ಟು’ ಹೇಳಿಕೆ ಕೋಲಾಹಲ!

Published : Mar 03, 2025, 08:11 AM ISTUpdated : Mar 03, 2025, 08:32 AM IST
ಡಿ.ಕೆ. ಶಿವಕುಮಾರ್‌ ‘ನಟ್ಟು ಬೋಲ್ಟು’ ಹೇಳಿಕೆ ಕೋಲಾಹಲ!

ಸಾರಾಂಶ

‘ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ಇಂಥವರ ನಟ್ಟು ಬೋಲ್ಟು ಟೈಟ್‌ ಮಾಡೋದು ನನಗೆ ಗೊತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಕಾರಣವಾವಾಗಿದೆ. 

‘ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ಇಂಥವರ ನಟ್ಟು ಬೋಲ್ಟು ಟೈಟ್‌ ಮಾಡೋದು ನನಗೆ ಗೊತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಕಾರಣವಾವಾಗಿದೆ. ‘ಜನ ಮತ ಹಾಕಿರೋದು ಜನಸೇವೆ ಮಾಡಲು, ನಟ್ಟು ಬೋಲ್ಟು ಟೈಟ್‌ ಮಾಡೋಕಲ್ಲ’ ಎಂದು ವಿಪಕ್ಷಗಳ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಕೆಶಿ ಹೇಳಿಕೆಗೆ ಖುದ್ದು ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೇಸರಿಸಿದೆ. ಆದರೆ ಡಿಕೆಶಿ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದು, ‘ನಾನು ಸತ್ಯ ಹೇಳಿದ್ದೇನೆ. ಬೇಕಿದ್ದರೆ ಪ್ರತಿಭಟಿಸಿ’ ಎಂದು ಸವಾಲು ಹಾಕಿದ್ದಾರೆ.

ಡಿಕೆಶಿ ಹೇಳಿದ್ದೇನು?: ಸಿನಿ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗದ ಕೆಲವರು ಮಾತ್ರ ಬಂದರು. ಬಹುತೇಕರು ಬರಲೇ ಇಲ್ಲ. ಈ ರೀತಿ ಮಾಡುವವರ ನಟ್, ಬೋಲ್ಟ್ ಟೈಟ್ ಮಾಡುವುದು ಹೇಗೆಂಬುದು ನನಗೆ ಗೊತ್ತು ಎಂದು ಬೆಂಗಳೂರು ಚಿತ್ರೋತ್ಸವ ಸಮಾರಂಭದಲ್ಲಿ ಶನಿವಾರ ಡಿಕೆಶಿ ಹೇಳಿದ್ದರು.

ಜನರು ಅಧಿಕಾರ ನೀಡಿರುವುದು ಜನರ ಸೇವೆಗೇ ಹೊರತು ನಟ್-ಬೋಲ್ಟ್ ಟೈಟ್ ಮಾಡಲಲ್ಲ. ರಾಜ್ಯದ ಜನರು 138 ಸ್ಥಾನ ನೀಡಿರುವುದೇಕೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.
- ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ರಾಜ್ಯದಲ್ಲಿ ಸರ್ವಾಧಿಕಾರಿ ಧೋರಣೆ, ಧಮ್ಕಿ ರಾಜಕೀಯ, ನಟ್ಟು- ಬೋಲ್ಟು ಟೈಟ್ ಮಾಡುವ ಆಟ ನಡೆಯುವುದಿಲ್ಲ. ದರ್ಪ ನಿಲ್ಲಿಸಿ, ನಿಮ್ಮ ನಟ್ಟು-ಬೋಲ್ಟು ಟೈಟ್‌ ಮಾಡುವ ಸಮಯ ಬಂದಿದೆ.
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಸಾವಿನ ಅಂಚಿನಲ್ಲಿರುವ ಚಿತ್ರರಂಗಕ್ಕೆ ಬೋಲ್ಟ್‌ ಇಲ್ಲ, ಇನ್ನು ಟೈಟ್ ಮಾಡಿ ಏನು ಪ್ರಯೋಜನ? ಕಲಾವಿದರ ಸಂಘ ನಿಷ್ಕ್ರಿಯಗೊಂಡಿದೆ. ಎಲೆಕ್ಷನ್‌ ಮಾಡಿ, ಕಲಾವಿದರನ್ನು ಒಗ್ಗೂಡಿಸಿ.
- ಜಗ್ಗೇಶ್‌, ನಟ/ ಬಿಜೆಪಿ ಸಂಸದ

ಹೋರಾಟಕ್ಕೆ ಬರಬೇಕೋ ಬೇಡವೋ ಎನ್ನುವುದು ಸಿನೆಮಾ ನಟರಿಗೆ ಬಿಟ್ಟ ವಿಚಾರ. ನಟರು ಹೋರಾಟಕ್ಕೆ ಬರದೇ ಇದ್ದಲ್ಲಿ ಜನರೇ ತೀರ್ಮಾನಿಸುತ್ತಾರೆ. ಬೆದರಿಕೆ ಹಾಕುವುದು ಸರಿಯಲ್ಲ.
- ಜಗದೀಶ ಶೆಟ್ಟರ್‌, ಮಾಜಿ ಸಿಎಂ

ಡಿಕೆಶಿ ಸಿನಿಮಾ ಕಲಾವಿದರ ನೆಟ್ ಬೋಲ್ಟ್ ಟೈಟ್ ಮಾಡುತ್ತೇನೆ ಎಂದಿದ್ದಾರೆ. ಮೊದಲು ಸಚಿವ ರಾಜಣ್ಣ ಸೇರಿದಂತೆ ಇವರಿಗೆ ವಿರೋಧ ಮಾಡುತ್ತಿರುವವರಿಗೆ ನೆಟ್ ಬೋಲ್ಟ್ ಸರಿ ಮಾಡಲಿ.
- ಆರ್‌. ಅಶೋಕ್‌, ವಿಪಕ್ಷ ನಾಯಕ

ಡಿಸಿಎಂ ಅವರು ಯಾವುದೋ ನೋವಿನಲ್ಲಿ ಆ ಮಾತು ಆಡಿದ್ದಾರೆ. ಉದ್ವೇಗದಲ್ಲಿ ಕೆಲವು ಆಡಬಾರದ ಮಾತು ಬಂದಿವೆ. ಅದನ್ನು ಮತ್ತಷ್ಟು ಎಳೆಯೋದು ಸರಿ ಅಲ್ಲ.
- ಎಂ. ನರಸಿಂಹಲು, ಫಿಲಂ ಚೇಂಬರ್ ಅಧ್ಯಕ್ಷ

ಕನ್ನಡಿಗರಿಂದಲೇ ಇವರೆಲ್ಲ ಸ್ಟಾರ್ ಆಗಿರೋದು. ನಿಮಗೆ ಸಬ್ಸಿಡಿ ಬೇಕು ಅಂದಾಗ ಬರ್ತೀರಾ? ಕನ್ನಡದ ನೆಲ, ಜಲ, ಭಾಷೆ ಬೇಡ್ವಾ? ನಟ್ಟು, ಬೋಲ್ಟು ಇವತ್ತೇ ಟೈಟ್ ಮಾಡ್ಬೇಕು.
- ರವಿಕುಮಾರ್ ಗಣಿಗ, ಕಾಂಗ್ರೆಸ್ ಶಾಸಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ