ಮೋದಿ ಅಲೆಯೂ ಇಲ್ಲ, ದೇಗುಲದ ಗಾಳಿಯೂ ಇಲ್ಲ, ಎಲ್ಲ ಕಡೆ ಗ್ಯಾರಂಟಿ ಗಾಳಿ ಬೀಸುತ್ತಿದೆ: ಡಿಕೆಶಿ

By Girish GoudarFirst Published Apr 23, 2024, 8:47 PM IST
Highlights

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯಾಗಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲರೂ ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಸರ್ಕಾರ ಬಡವರ ಪರ, ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನ ಕೊಟ್ಟುಕೊಂಡು ಬಂದಿದ್ದೇವೆ: ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಏ.23):  ಬಿಜೆಪಿ, ಕಾಂಗ್ರೆಸ್ ನಡುವೆ ಧರ್ಮ ಯುದ್ಧ ನಡೆಯುತ್ತಿದೆ. ಬದುಕು ಮತ್ತು ಭಾವಣೆ ನಡುವೆ ಚುನಾವಣೆ ನಡೆಯುತ್ತಿದೆ. ಸರ್ವರಿಗೂ ಸಮಬಾಳು ಅಂತ ಹೇಳಿ, ಎಲ್ಲರ ಬದುಕನ್ನ ಬದಲಾಯಿಸುತ್ತೇವೆ ಅಂತ ಮತ ಕೇಳ್ತಿದ್ದೇವೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯಾಗಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲರೂ ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಸರ್ಕಾರ ಬಡವರ ಪರ, ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನ ಕೊಟ್ಟುಕೊಂಡು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇಂದು(ಮಂಗಳವಾರ) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ-2 ಸಮಾವೇಶದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತಯಾಚನೆ ಮಾಡಿದ ಡಿ.ಕೆ.ಶಿವಕುಮಾರ್ ಅವರು, ನೆಹರು ಅವರ ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೆ ಸಂವಿಧಾನದ ತಿದ್ದುಪಡಿ ಮಾಡಿದ್ರೆ ಅದು ಜನರಿಗೆ ಶಕ್ತಿ ಕೊಡಲು ಆಗಿದೆ. ಸಿದ್ದರಾಮಯ್ಯ ಹೇಳ್ತಾ ಇರ್ತಾರೆ ಸ್ವಾತಂತ್ರ್ಯಕ್ಕೆ ಬಿಜೆಪಿ ನಾಯಕರ ಕೊಡುಗೆ ಏನು ಅಂತ. ಮೋದಿ ವಿದೇಶದಿಂದ ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕ್ತೇನೆ ಅಂತ ಮಾತು ಕೊಟ್ಟಿದ್ರು. ನಿಮ್ಮ ಖಾತೆಗೆ 15 ಲಕ್ಷ ಹಣ ಬಂತಾ..?, ಹೋಗಲಿ ನಿಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ಆಗಿದ್ಯಾ..?. ನಾನು ಇವತ್ತು ಎಲ್ಲಾ ಕಡೆ ಪ್ರಚಾರ ಮಾಡಿದ್ದೇನೆ. 14 ಕ್ಷೇತ್ರಗಳ ಮೊದಲ ಹಂತದ ಚುನಾವಣಾ ನಡೀತಿದೆ. ನಾನು 12 ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡಿದ್ದೇನೆ. ಯಾವ ಮೋದಿ ಗಾಳಿಯೂ ಇಲ್ಲ, ದೇಗುಲದ ಗಾಳಿಯೂ ಇಲ್ಲ. ಎಲ್ಲಾ ಕಡೆ ಗ್ಯಾರಂಟಿ ಗಾಳಿ ಬೀಸುತ್ತಿದೆ ಎಂದು ಹೇಳಿದ್ದಾರೆ. 

ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ: ಸಿಎಂ ಸಿದ್ದರಾಮಯ್ಯ

ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಜ್ಯೋತಿ ತಂದ್ರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾ ನಾಯಕಿ ಕಾರ್ಯಕ್ರಮ ಆಯ್ತು. ಪ್ರಿಯಾಂಕಾ ಗಾಂಧಿ ಬಂದು ಉದ್ಘಾಟನೆ ಮಾಡಿದ್ರು, ಆಗ ಪ್ರಿಯಾಂಕ ಗಾಂಧಿ ಒಂದು ಪ್ರಶ್ನೆ ಮಾಡಿದ್ರು, ಬಿಜೆಪಿ ಅವರು ಈ ಕೆಲಸ ಮಾಡಿಲ್ಲ. ಈ ಗೃಹಜ್ಯೋತಿ ಪ್ರತಿ ಮನೆಯಲ್ಲೂ ಸಹ ಬೆಳಗಬೇಕು. ಅದಕ್ಕೆ ನೀವು ಸಿದ್ದರಾಮಯ್ಯ ಅವರ ಸಹಿ ಹಾಕುವ ಚೆಕ್ ಕೊಡಬೇಕೆಂದು ಹೇಳಿದ್ರು. ಆ ತಾಯಿಯ ಮಾತಿಗೆ ನಾವು ಕಾರ್ಡ್ ಅನ್ನು ಇಟ್ಟುಕೊಂಡು ಗ್ಯಾರಂಟಿ ಕೊಟ್ಟೆವು. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ, ಯುವನಿಧಿ, ಗೃಹಲಕ್ಷ್ಮಿ ತಂದೆವು. 5 ಗ್ಯಾರಂಟಿಗಳು ಸಿಎಂ ಅವರ ಮೊದಲ ಕ್ಯಾಬಿನೆಟ್ ಅಲ್ಲೇ ಜಾರಿಯಾದವು. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಎಲ್ಲರ ಸಮ್ಮಖದಲ್ಲಿ ಜಾರಿಗೆ ಬಂದವು. ಆಗ ನಮ್ಮ ಹುಡುಗ ಒಂದು ಮೆಸೇಜ್ ಹಾಕಿದ. ಅಣ್ಣ ತೆನೆ ಹೊಲದಲ್ಲಿ ಇದ್ದರೆ ಚೆಂದ, ಕಮಲ ಕೆರೆಯಲಿದ್ರೆ ಚೆಂದ, ಅಧಿಕಾರ ಕೈಯಲಿದ್ರೆ ಚೆಂದ ಅಂತಾ. 5 ಗ್ಯಾರಂಟಿ ಸೇರಿ ಮುಷ್ಠಿ ಆಯ್ತು. ಈ ಕೈಯಲ್ಲಿಯೇ ನಿಮ್ಮನು ನಂಬಿದ ಶಕ್ತಿ ಕಾಣಿಸುತ್ತೆ. ಈ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ನಿಂತಿದ್ದಾರೆ. ಜನರ ಸೇವೆ ಮಾಡಲು ತುದಿಗಾಲಲ್ಲಿ ಆ ಹೆಣ್ಣು ಮಗು ಇದೆ. ಚುನಾವಣೆ ಅಧಿಕಾರಿಯ ಮೋಸದಿಂದ ಆ ಹೆಣ್ಣು ಮಗುವಿಗ ಮೋಸ ಆಯ್ತು, ಇದೀಗ ಇವರಿಗೆ ಆಶೀರ್ವದಿಸಿ ಎಂದು ಡಿ.ಕೆ. ಶಿವಕುಮಾರ್ ಮತಯಾಚಿಸಿದ್ದಾರೆ. 

ತೇಜಸ್ವಿ ಸೂರ್ಯ ಅಲ್ಲ ನೀನು ಅಮಾವಾಸ್ಯೆ ಸೂರ್ಯ 

ತೇಜಸ್ವಿ ಸೂರ್ಯ ಅಲ್ಲ ನೀನು ಅಮಾವಾಸ್ಯೆ ಸೂರ್ಯ ಎಂದ ಡಿಕೆಶಿ ಜರಿದಿದ್ದಾರೆ. ನಿನ್ನನ್ನೂ ಜನ ಮನೆಗೆ ಕಳುಹಿಸುತ್ತಾರೆ. ಬೆಂಗಳೂರಿಗೆ ಹೊಸ ರೂಪ ಕೊಡಬೇಕು. ಕುಡಿಯುವ ನೀರಿನ ಸಮಸ್ಯೆ ಇದೆ. ಮೋದಿ ಅವರು ಹೇಳಿದ್ದಾರೆ ಇದು ಟೆಕ್ನಿಕಲ್ ಸಿಟಿ ಆಗಿತ್ತು ಈಗ ಟ್ಯಾಂಕರ್ ಸಿಟಿ ಆಗಿದೆ ಎಂದು. ನಾನು ಅವರಿಗೆ ಧನ್ಯವಾದ ಹೇಳ್ತೇನೆ. ಅಷ್ಟಾದರೂ ನಮ್ಮ ಸಮಸ್ಯೆ ಬಗ್ಗೆ ನೆನಪಿಸಿಕೊಂಡ್ರಲ್ಲ. ಎಲ್ಲಿ ಫ್ಲೈ ಓವರ್ ಬೇಕು, ರಸ್ತೆ ಕಾಮಗಾರಿ ಎಲ್ಲಿ ಆಗಬೇಕು. ಜನರ ಸಮಸ್ಯೆ ಏನು ಎಂಬುದುರ ಸಲುವಾಗಿ ನಾವು ಕೆಲಸ ಮಾಡ್ತಾ ಇದ್ದೇವೆ. ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಏನು ಹಣ ಬರುತ್ತೆ ೧೦ ಪರ್ಸೆಂಟ್ ಹಣ ಅರ್ಚಕರಿಗೆ ಸೇರಬೇಕೆಂದಯ ಕಾನೂನು ತಂದ್ರು. ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡ್ತೀರಾ, ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಅಂತಾ ನಾನು ಹೇಳ್ತಾ ಇರ್ತೆನೆ. ರಾಮಲಿಂಗಾ ರೆಡ್ಡಿ ಹೆಸರಲ್ಲಿ ರಾಮ ಇಲ್ವಾ?. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇಲ್ವಾ?, ಡಿಕೆ ಶಿವಕುಮಾರ್ ಹೆಸರಲ್ಲಿ ಶಿವ ಇಲ್ವಾ?. ದೇವರು ಒಂದೇ ನಾಮ ಹಲವು. ಹೀಗಾಗಿ ಇವತ್ತು ಪ್ರತಿ ಹೆಣ್ಣು ಮಗುವಿಗೆ ವರ್ಷಕ್ಕೆ ೨೪ ಸಾವಿರ ಕೊಡ್ತಾ ಇದ್ದೇವೆ. ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಗ ಬಡ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ಕೊಡ್ತೇವೆ. ಯುವಕರಿಗೆ ಕೌಶಲ್ಯ ತರಬೇತಿ ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ. 

ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ, ಸುರ್ಜೇವಾಲ, ಡಿಸಿಎಂ ಡಿ ಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ಸಚಿವರಾದ ಕೆ ಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮತ್ತಿತರ ನಾಯಕರು ಭಾಗಿಯಾಗಿದ್ದಾರೆ. 

click me!