ಕಾಂಗ್ರೆಸ್‌ನವರಿಗೆ 10 ಕೆ.ಜಿ. ಅಕ್ಕಿಯ ಭರವಸೆ ನೀಡುವಾಗ ಜ್ಞಾನ ಇರಲಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ ಅಷ್ಟು ಸಾಕು. ಅವರ ಪಕ್ಷಕ್ಕಿಂತ ನಮ್ಮ ಪಕ್ಷ ವಿಭಿನ್ನವಾಗಿದೆ.
ಬೆಂಗಳೂರು (ಜೂ.23): ಕಾಂಗ್ರೆಸ್‌ನವರಿಗೆ 10 ಕೆ.ಜಿ. ಅಕ್ಕಿಯ ಭರವಸೆ ನೀಡುವಾಗ ಜ್ಞಾನ ಇರಲಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ ಅಷ್ಟು ಸಾಕು. ಅವರ ಪಕ್ಷಕ್ಕಿಂತ ನಮ್ಮ ಪಕ್ಷ ವಿಭಿನ್ನವಾಗಿದೆ. ನಾವು ನುಡಿದಂತೆ ನಡೆಯುವವರು ಎಂದು ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಕೇಂದ್ರವನ್ನು ಅಕ್ಕಿ ಕೇಳಲು ಅವಕಾಶವಿದೆ. ನಾವೇನು ಪುಕ್ಸಟ್ಟೆಕೊಡಿ ಅಂತನೂ ಕೇಳುತ್ತಿಲ್ಲ ಎಂದರು. ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ, ಕಪ್ಪು ಹಣ ತಂದು ಎಲ್ಲರ ಅಕೌಂಟ್‌ಗೆ 15 ಲಕ್ಷ ಹಾಕ್ತೀವಿ ಅಂತ ಹೇಳಿದ್ರಲ್ಲಾ ಮಾಡಿದ್ರಾ ಇಂತಹ ಭರವಸೆ ನೀಡುವಾಗ ಅವರ ತಲೆಯಲ್ಲಿ ಏನಿತ್ತು ಎಂದು ಶೋಭಾಗೆ ಪ್ರಶ್ನಿಸಿದರು. ಹಣ ಕೊಟ್ಟು ಖರೀದಿಗೆ ಕೇಳುತ್ತಿದ್ದೇವೆ.
ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಹೊಸ ರೂಪ: ಡಿ.ಕೆ.ಶಿವಕುಮಾರ್
ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೂ ಚರ್ಚೆ ನಡೆದಿದೆ. ಕುಮಾರಣ್ಣನವರ ಪಕ್ಷಕ್ಕಿಂತ ನಮ್ಮ ಪಕ್ಷ ಭಿನ್ನವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆಯುವವರು. ತಡವಾದರೂ 10 ಕೆ.ಜಿ.ಅಕ್ಕಿ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ ಎಂದರು. ಅಕ್ಕಿ ಖರೀದಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಮುನಿಯಪ್ಪ ಅವರ ದೆಹಲಿ ಭೇಟಿ ಕುರಿತು, ಅವರು ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದ್ದಾರೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ ಹೋಗುವ ಸಮಯ ಬರುತ್ತದೆ ಹೋಗುತ್ತೇನೆ ಎಂದರು.
ಶೋಭಾಗೂ ತಿರುಗೇಟು?: ಇದೇ ವೇಳೆ, 10 ಕೆ.ಜಿ. ಅಕ್ಕಿ ಕೊಡುವ ಭರವಸೆ ನೀಡುವಾಗ ಕಾಂಗ್ರೆಸ್‌ನವರಿಗೆ ಮೆದುಳು ಇರಲಿಲ್ವಾ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ಟೀಕೆಗೂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಅನ್ನಭಾಗ್ಯ ವಿಫಲಗೊಳಿಸಲು ಬಿಜೆಪಿ ಯತ್ನ: ಬಸವರಾಜ ಬೊಮ್ಮಾಯಿ ಅವರ ಧಮ್ಮು ತಾಕತ್ತಿಗೆ ರಾಜ್ಯದ ಜನ ಚುನಾವಣೆಯಲ್ಲೇ ಉತ್ತರ ಕೊಟ್ಟಿದ್ದಾರೆ. ನಾವು ಜನರಿಗೆ ಕೊಟ್ಟಿರುವ ಮಾತಿನಂತೆ ಹೇಗಾದರೂ ಅಕ್ಕಿ ಖರೀದಿಸಿ ತಂದು ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ 5 ಕೆಜಿ ಖರೀದಿಗೆ ಆಹಾರ ನಿಗಮ ಆರಂಭದಲ್ಲಿ ಒಪ್ಪಿಗೆ ನೀಡಿತ್ತು. ಆದರೆ ಈಗ ಅಕ್ಕಿ ನೀಡದ ಮೂಲಕ ರಾಜಕೀಯ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ವಿಫಲಗೊಳಿಸಲು ಬಿಜೆಪಿ ಹೊರಟಿದೆ.
ಬ್ರ್ಯಾಂಡ್ ಬೆಂಗಳೂರು ಸಲಹೆಗೆ ವೆಬ್‌ಸೈಟ್ ಶುರು: ಡಿ.ಕೆ.ಶಿವಕುಮಾರ್
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಕರ್ನಾಟಕಕ್ಕೆ ಕೇಂದ್ರದ ಬೆಂಬಲ ಇರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣೆ ಸಮಯದಲ್ಲಿ ಹೇಳಿದ್ದರು. ಈಗ ಹಾಗೇ ಮಾಡುತ್ತಿದ್ದಾರೆ. ಆದರೆ, ಅವರು ಏನು ಮಾಡಿದರೂ ನಮ್ಮ ಯೋಜನೆ ವಿಫಲಗೊಳಿಸಲಾಗುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಮುಖ್ಯಮಂತ್ರಿ ಅವರು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೇಗಾದರೂ ಮಾಡಿ ಅಕ್ಕಿ ಖರೀದಿಸಿ ತಂದು ಬಡ ಜನರಿಗೆ ತಲಾ 10 ಕೆ.ಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.