ಸಿ.ಪಿ.ಯೋಗೇಶ್ವರ್‌ಗೆ ದೇವರು ಒಳ್ಳೆಯದು ಮಾಡಲಿ: ಡಿ.ಕೆ.ಶಿವಕುಮಾರ್ ವ್ಯಂಗ್ಯ

By Kannadaprabha News  |  First Published Jun 27, 2024, 8:53 PM IST

ಸರ್ಕಾರ ಅಳಿವಿನಂಚಿನಲ್ಲಿದೆ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಬಹಳ ಸಂತೋಷ, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.


ಚನ್ನಪಟ್ಟಣ (ಜೂ.27): ನಾನೀಗ ಚನ್ನಪಟ್ಟಣ ತಾಲೂಕಿನ ಜನರಿಗೆ ಹತ್ತಿರ ಆಗುತ್ತಿಲ್ಲ. ನಾನು ತಾಲೂಕಿನ ಜನರ ಜೊತೆಯಲ್ಲೇ ಇದ್ದೇನೆ. ಮೊದಲು ಸಮಯ ಇರಲಿಲ್ಲ, ಇಲ್ಲಿ ಕುರ್ಚಿ ಖಾಲಿ ಇರಲಿಲ್ಲ. ಇಲ್ಲಿಂದ ಗೆದ್ದಿರೋರು ಸಮಸ್ಯೆ ಬಗೆಹರಿಸುತ್ತಾರೆ ಅಂದುಕೊಂಡಿದ್ದೆ. ಅವರು ಜನರ ಕಷ್ಟ ಕೇಳಿಲ್ಲ. ಹಾಗಾಗಿ ನಾನು ಅವರ ಕಷ್ಟ ಕೇಳುತ್ತಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಜಿಪಂ ವ್ಯಾಪ್ತಿಯ 3ನೇ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದೇನೆ. ಜನರ ಸಮಸ್ಯೆಗಳನ್ನ ಆಲಿಸುತ್ತಿದ್ದೇವೆ. ಮುಂದೆ ಟೌನ್ ವ್ಯಾಪ್ತಿ ಸೇರಿ ಮತ್ತೊಂದು ಕಾರ್ಯಕ್ರಮ ಮಾಡುತ್ತೇವೆ. ತಾಲೂಕು ಕಚೇರಿಯಲ್ಲಿ ಒಂದು ಕೊಠಡಿ ತೆಗೆದು ಅರ್ಜಿ ಸ್ವೀಕಾರ ಮಾಡ್ತೀವಿ. ಮೊನ್ನೆ ೨೯೭೦ ಅರ್ಜಿಗಳು ಬಂದಿವೆ. ಎಲ್ಲವನ್ನೂ ವಿಲೇವಾರಿ ಮಾಡಲಾಗುವುದು ಎಂದರು. ಚನ್ನಪಟ್ಟಣ ಉಪಚುನಾವಣೆಗೆ ಡಿಸಿಎಂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಕೇವಲ ಚನ್ನಪಟ್ಟಣ ಅಲ್ಲ, ಎಲ್ಲಾ ಕಡೆಗೂ ಹೋಗ್ತೀನಿ. 

Tap to resize

Latest Videos

ಕೆಂಪೇಗೌಡ ಬಂಧನದಲ್ಲಿದ್ದ ವಿಜಯನಗರ ಕಾಲದ ಆನೆಗೊಂದಿ ಸೆರೆಮನೆ ಪತ್ತೆ!

ಶಿಗ್ಗಾಂವಿ, ಸಂಡೂರಿಗೂ ಹೋಗಿ ಕೆಲಸ ಮಾಡ್ತೀನಿ. ಪ್ರವಾಸದ ಪಟ್ಟಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಶಾಸಕರು ದೆಹಲಿಗೆ ಬಂದಿದ್ದಾರೆ, ಸರ್ಕಾರ ಅಳಿವಿನಂಚಿನಲ್ಲಿದೆ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಬಹಳ ಸಂತೋಷ, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು. ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ರೈತರ ಆದಾಯ ಹೆಚ್ಚಿಸಲು ಕೆಎಂಎಫ್ ದರ ಏರಿಕೆ ಮಾಡಿದೆ. ರೈತರಿಗೆ ಅನುಕೂಲ ಮಾಡಲು ಹೀಗೆ ಮಾಡಿದೆ. ಅದನ್ನ ವಿರೋಧಿಸುವ ಬಿಜೆಪಿಯವರು ರೈತ ವಿರೋಧಿಗಳು. ಬಿಜೆಪಿ ರೈತ ವಿರೋಧಿ, ವರ್ತಕರ ಪರ. ರೈತರಿಗೆ ಸಿಗುವ ಆದಾಯ ತಪ್ಪಿಸಲು ಹೀಗೆ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಜನಸ್ಪಂದನಾ ಕಾರ್ಯಕ್ರಮ ಸದುಪಯೋಗಿಸಿಕೊಳ್ಳಿ: ಚನ್ನಪಟ್ಟಣ ತಾಲೂಕಿನ ಜನರ ಸಮಸ್ಯೆ ಪರಿಹರಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಜನಸ್ಪಂದನಾ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಿವೇಶನಕ್ಕಾಗಿ, ಪಡಿತರ ಚೀಟಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ದೇವಸ್ಥಾನ ಜೀರ್ಣೋದ್ಧಾರ, ಕಂದಾಯ, ಸರ್ಕಾರದ ಗ್ಯಾರಂಟಿ ಯೋಜನೆಗಳು, ಇ-ಖಾತೆ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದ್ದಲ್ಲಿ, ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡುತ್ತಾರೆ. ಕಾಲಮಿತಿಯೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ರೈತರಿಗೆ ಪಶು ಭಾಗ್ಯ ಯೋಜನೆ ಜಾರಿಗೆ ಚಿಂತನೆ: ಸಚಿವ ವೆಂಕಟೇಶ್

ವಿಶೇಷ ಕಾರ್ಯಕ್ರಮ: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಜನಸ್ಪಂದನ ಕಾರ್ಯಕ್ರಮ ವಿಶಿಷ್ಟವಾಗಿದ್ದು, ಬಹಳ ಅಪರೂಪದ ಕಾರ್ಯಕ್ರಮವಾಗಿದೆ. ಜನರಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ಹೊಣೆ ನಮ್ಮದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರ ಅಸ್ವಿತ್ವಕ್ಕೆ ಬಂದ ಕೂಡಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಪಂಚ ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಅಹವಾಲುಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗೆ ಸ್ಥಳ ದಲ್ಲಿಯೇ ಪರಿಹಾರ ಪಡೆದುಕೊಳ್ಳುವಂತೆ ತಿಳಿಸಿದರು.

click me!