ಬಿಜೆಪಿ ಸರ್ಕಾರದವರು ನನ್ನ ಮೇಲೆ ಕೇಸ್ ಹಾಕಿದ್ದಾರೆ, ಕೊಡಬಾರದ ನೋವು ಕೊಡ್ತಿದ್ದಾರೆ: ಡಿಕೆಶಿ

Published : Jul 19, 2024, 11:38 PM ISTUpdated : Jul 20, 2024, 09:14 AM IST
ಬಿಜೆಪಿ ಸರ್ಕಾರದವರು ನನ್ನ ಮೇಲೆ ಕೇಸ್ ಹಾಕಿದ್ದಾರೆ, ಕೊಡಬಾರದ ನೋವು ಕೊಡ್ತಿದ್ದಾರೆ: ಡಿಕೆಶಿ

ಸಾರಾಂಶ

ಹಿಂದೆ ನಾನು ಯಾಮಾರಿಬಿಟ್ಟೆ, ಇನ್ಮುಂದೆ ಯಾಮಾರುವುದಿಲ್ಲ. ಚನ್ನಪಟ್ಟಣ ಜನತೆಗೆ ನ್ಯಾಯ ಒದಗಿಸುತ್ತೇವೆ. ಮನೆ ಬಾಗಿಲಿಗೆ ಬಂದು ಚನ್ನಪಟ್ಟಣ ಜನತೆಯ ಸಮಸ್ಯೆ ಕೇಳಿದ್ದೇನೆ. ಎಲ್ಲರಿಗೂ ಮನೆ, ನಿವೇಶನ ಕೊಡುವ ಕೆಲಸ ಮಾಡುತ್ತೇವೆ. ಇದರಲ್ಲಿ ಸರ್ಕಾರಿ ನೌಕರರ ಸಹಕಾರ ಕೂಡ ಮುಖ್ಯವಾಗಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌   

ಚನ್ನಪಟ್ಟಣ(ಜು.19):  ನಾನು, ರಾಮಲಿಂಗಾರೆಡ್ಡಿ ಕೂಡ ಸರ್ಕಾರಿ ನೌಕರರು. ಹಿಂದೆ ನಾನು ಜಿ.ಪಂ ಮೆಂಬರ್, ಅವರು ಕಾರ್ಪೋರೇಟರ್ ಆಗಿದ್ದವರು. ಬಳಿಕ 8 ಬಾರಿ ಇಬ್ಬರೂ ಶಾಸಕರಾಗಿದ್ದೀವಿ. ಆಗಲೂ ಜೊತೆಗಿದ್ವಿ, ಮುಂದೆಯೂ ಜೊತೆಗಿರ್ತೀವಿ. ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ಬಹಳ ಮುಖ್ಯವಾಗಿದೆ. ವ್ಯವಸ್ಥೆಯ ಬಹುದೊಡ್ಡ ಪಿಲ್ಲರ್ ಸರ್ಕಾರಿ ನೌಕರರು. ಸರ್ಕಾರದ ಕೆಲಸ ದೇವರ ಕೆಲಸ ಅಂತ ವಿಧಾನಸೌದಲ್ಲಿ ಬರೆಯಲಾಗಿದೆ. ಜನರ ಸಮಸ್ಯೆಗಳನ್ನ ಬಗೆಹರಿಸಿದಾಗ ನಿಮ್ಮಲ್ಲಿ ಅವರು ದೇವರನ್ನ ಕಾಣುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ನಿಮ್ಮನ್ನ ಸ್ಮರಿಸುವ ಕೆಲಸವನ್ನ ಜನ ಮಾಡ್ತಾರೆ. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ. ಅಧಿಕಾರಿಗಳ ಜನರಿಗೆ ಸ್ಪಂದಿಸುವುದರ ಮೇಲೆ ಸರ್ಕಾರಕ್ಕೆ ಗೌರವ ಬರುತ್ತೆ. ನಿಮಗೆ ಈಗ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಹಿಂದೆ 6ನೇ ವೇತನ ಆಯೋಗವನ್ನೂ‌ ನೀಡಿದ್ದು ಕೂಡಾ ನಾವೇ. ರಾಜ್ಯದ ಜನತೆಗೆ 5 ಗ್ಯಾರಂಟಿ ಕೊಟ್ಟಿದ್ದೇವೆ. ಅದರಂತೆ ನಿಮಗೆ 6ನೇ ಗ್ಯಾರಂಟಿ ನೀಡಿದ್ದೇವೆ. ಒಟ್ಟು 12 ಲಕ್ಷ ಕುಟುಂಬಕ್ಕೆ ನ್ಯಾಯ ಕೂಡಿಸುವ ಕೆಲಸ ಮಾಡಿದ್ದೇವೆ. ಎಪಿಎಫ್, ಓಪಿಎಸ್ ವಿಚಾರವಾಗಿಯೂ ನಿಮ್ಮ ಬೇಡಿಕೆ ಇದೆ. ಅದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ನಿಮಗೆ ಅವಕಾಶ ಸಿಕ್ಕಾಗ ಜನರ ಹೃದಯವನ್ನ ಗೆಲ್ಲುವ ಕೆಲಸ ಮಾಡಿ ಎಂದು ಹೇಳಿದ್ದಾರೆ. 

ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ ಎಂದ ಯೋಗೇಶ್ವರ್ : ಡಿ.ಕೆ. ಶಿವಕುಮಾರ್‌ ಹೇಳಿದ್ದಿಷ್ಟು

ನಿಮ್ಮ ಹಾಗೆ ನಾನೂ ಕೂಡಾ ನೌಕರ. ನಿಮ್ಮ ಮೇಲೆ ಹೇಗೆ ಕೇಸ್ ಹಾಕ್ತಾರೋ, ನಮ್ಮ ಮೇಲೂ ಹಾಕ್ತಾರೆ. ಬಿಜೆಪಿ ಸರ್ಕಾರದವರು ನನ್ನ ಮೇಲೆ ಕೇಸ್ ಹಾಕಿದ್ದಾರೆ. ಕೊಡಬಾರದ ನೋವು ಕೊಡ್ತಿದ್ದಾರೆ. ಎಲ್ಲವನ್ನೂ ದೇವರು ನೋಡಿಕೊಳ್ತಾನೆ ಎಂದು ಹೇಳಿದ್ದಾರೆ. 

ಮತ್ತೆ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಡಿಸಿಎಂ ಡಿಕೆಶಿ ಮಾತು.!

ನಾವು‌ ಮೂಲ ಬೆಂಗಳೂರಿನವರು. ಹಿಂದೆ ನಾವು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜಿ.ಪಂ ಸದಸ್ಯ ಆಗಿದ್ದೆ. ನನ್ನ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್. ನನ್ನ ಹೆಸರು ಬದಲಾವಣೆ ಮಾಡಲು ಆಗುತ್ತಾ?. ಬೆಂಗಳೂರು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಆ ಗೌರವ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿಗೂ ಸಿಗಬೇಕು. ಇದಕ್ಕಾಗಿ ಸಿಎಂ ಬಳಿ‌ ಮನವಿ‌ ಮಾಡಿದ್ದೇವೆ. ಇದಕ್ಕೆ ವಿಪಕ್ಷದವರು ಟೀಕೆ ಮಾಡ್ತಿದ್ದಾರೆ. ನಾನೇನು ರಿಯಲ್ ಎಸ್ಟೇಟ್ ಮಾಡಬೇಕಾಗಿಲ್ಲ. ನನ್ನ ಆಸ್ತಿ‌ ಮೌಲ್ಯ ಜೋರಾಗಿದೆ, ನಾನೇ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಜಮೀನು ದಾನ ಮಾಡಿದ್ದೇನೆ. ಅಧಿಕಾರ ಇದ್ದಾಗ ಜನರಿಗೆ ಏನಾದ್ರೂ ಮಾಡಬೇಕು. ಜನರಿಗೆ ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಿ ಆರ್ಥಿಕ ಶಕ್ತಿ ತುಂಬಬೇಕು. ಹಾಗಾಗಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡ್ತೀವಿ. ಇದನ್ನ ಕ್ಯಾಬಿನೆಟ್ ನಲ್ಲಿ ಸಿಎಂ ಚರ್ಚೆ ಮಾಡ್ತೀವಿ ಅಂದಿದ್ದಾರೆ‌. ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೇ ಮಾಡ್ತೀನಿ. ರಾಮನಗರ ಜಿಲ್ಲಾ ಕೇಂದ್ರ ಇದ್ದೇ ಇರುತ್ತೆ. ಹೆಸರು‌ ಮಾತ್ರ ಬದಲಾವಣೆ ಆಗ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಹಿಂದೆ ನಾನು ಯಾಮಾರಿಬಿಟ್ಟೆ, ಇನ್ಮುಂದೆ ಯಾಮಾರುವುದಿಲ್ಲ: 

ಹಿಂದೆ ನಾನು ಯಾಮಾರಿಬಿಟ್ಟೆ, ಇನ್ಮುಂದೆ ಯಾಮಾರುವುದಿಲ್ಲ. ಚನ್ನಪಟ್ಟಣ ಜನತೆಗೆ ನ್ಯಾಯ ಒದಗಿಸುತ್ತೇವೆ. ಮನೆ ಬಾಗಿಲಿಗೆ ಬಂದು ಚನ್ನಪಟ್ಟಣ ಜನತೆಯ ಸಮಸ್ಯೆ ಕೇಳಿದ್ದೇನೆ. ಎಲ್ಲರಿಗೂ ಮನೆ, ನಿವೇಶನ ಕೊಡುವ ಕೆಲಸ ಮಾಡುತ್ತೇವೆ. ಇದರಲ್ಲಿ ಸರ್ಕಾರಿ ನೌಕರರ ಸಹಕಾರ ಕೂಡ ಮುಖ್ಯವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌  ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!