ಕಾಫಿ ಡೇ ಸಿದ್ಧಾರ್ಥ್‌ ಸಾವಿಗೆ ಡಿಕೆಶಿ ಕಾರಣ ಎಂದ ಎಚ್‌ಡಿಕೆ, ತಿರುಗೇಟು ಕೊಟ್ಟ ಡಿಸಿಎಂ!

By Santosh Naik  |  First Published Aug 10, 2024, 6:05 PM IST

DK Shivakumar and HD Kumaraswamy ಕಾಫಿ ಡೇ ಮಾಲೀಕ ಸಿದ್ಧಾರ್ಥ್‌ ಆತ್ಮಹತ್ಯೆ ಮಾಡಿಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್‌ ಅವರೇ ಕಾರಣ ಎನ್ನುವ ಎಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಸ್ವತಃ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಅದರೊಂದಿಗೆ ಕುಮಾರಸ್ವಾಮಿಯ ಪ್ರತಿ ಮಾತಿಗೂ ತಿರುಗೇಟು ಕೊಟ್ಟಿದ್ದಾರೆ.


ಬೆಂಗಳೂರು (ಆ.9): ಕೆಫೆ ಕಾಫಿ ಡೇ ಮಾಲೀಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್‌ ಅವರ ಸಾವಿಗೆ ಡಿಕೆ ಶಿವಕುಮಾರ್‌ ಅವರೇ ಕಾರಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಶನಿವಾರ ಮೈಸೂರಿನಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದರು. ಅದರೊಂದಿಗೆ ಡಿಕೆ ಶಿವಕುಮಾರ್‌ ವಿರುದ್ಧ ಹಲವು ವಿಚಾರಗಳ ಕುರಿತಾಗಿ ವಾಕ್‌ಪ್ರಹಾರ ನಡೆಸಿದ್ದರು. ಇದಕ್ಕೆ ಡಿಕೆ ಶಿವಕುಮಾರ್, ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ಧಾರ್ಥ್ ಸಾವಿಗೆ ಡಿಕಶಿ ಕಾರಣ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ''ಅಯ್ಯೋ ..‌ ಕುಮಾರಸ್ವಾಮಿಯನ್ನ ಹುಚ್ಚಾಸ್ಪತ್ರೆಗೆ ಸೇರಿಸೋಣ. ಅವರ ತಂದೆ ಮೇಲೆ 1985 ರಲ್ಲಿ ವಿಧಾನಸಭೆ ಚುನಾವಣೆಯನ್ನ ನಾನು ಗೆದ್ದಿದ್ದೇನೆ. ಬಂಗಾರಪ್ಪ ಸಂಪುಟದಲ್ಲಿ ಮಂತ್ರಿ ಆಗಿದ್ದೇನೆ. ನನ್ನ ಎಸ್ ಎಂ ಕೃಷ್ಣ ಸಂಬಂಧ ಹೇಗಿದೆ ಅಂತಾ ಅವರಿಗೆ ಏನ್‌ ಗೊತ್ತಿದೆ. ಪಾಪಾ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ, ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳೋಣ' ಎಂದು ಹೇಳಿದ್ದಾರೆ.

ಅದೇ ವೇಳೆ ಡಿಕೆ ಶಿವಕುಮಾರ್‌ಗೆ ನಾನೇ ನಾಗರಹಾವು ಎಂದ ಎಚ್‌ಡಿಕೆ ಮಾತಿಗೆ ನಕ್ಕು ಉತ್ತರಿಸಿದ ಡಿಕೆ ಶಿವಕುಮಾರ್‌, ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡ್ ಬಂದು ನಿಲ್ಲಿಸಿಬಿಡಿ. ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿ ಇಲ್ಲ. ಯೋಗೇಶ್ವರ್ ಏನ್ ಬೇಕೋ‌ ಅದನ್ನು ತಿಳಿಸಿದ್ದಾರೆ. ಯೋಗೇಶ್ವರ್ ಅದಕ್ಕೆ ಉತ್ತರ ಕೊಟ್ಟಿದ್ದಾರೆ' ಎಂದು ಹೇಳಿದರು.  ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ಆಗುತ್ತಾರೆ ಎನ್ನುವ ಮಾತಿಗೆ ಟಾಂಗ್‌ ಕೊಟ್ಟ ಡಿಸಿಎಂ, ನನ್ನ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಆಗೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜಕೀಯ ಬಂದ ಮೇಲೆ ಡಿಕೆಶಿ ಆಸ್ತಿ ಹೆಚ್ಚಳ ವಿಚಾರಕ್ಕೆ ಮಾತನಾಡಿದ ಅವರು, 'ಬಡವರು ನಾವು, ಹೊಲ ಉಳ್ಕೊಂಡು ಇದ್ದೆವು. ಸಣ್ಣ ಪಣ್ಣ ಐವತ್ತು  ನೂರು ಎಕರೆ ಜಮೀನಿತ್ತು. ನಮ್ಮಪ್ಪ ಬಡವ. ಆದರೆ, ಒಂದು ತಿಳಿದುಕೊಳ್ಳಿ. ಎನ್‌ಪಿಎಸ್ ಸ್ಕೂಲಲ್ಲಿ ಓದಿದವನು ನಾನು.  ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ' ಎಂದು ಹೇಳಿದ್ದಾರೆ.
ಮೊದಲಿನಿಂದಲೂ ದೊಡ್ಡ ಸಂಚು ನಡೆಸಿಕೊಂಡು ಬಂದಿದ್ದಾರೆ.  ಹಿಂದೆನೂ ಹೇಳಿದ್ದಾರೆ, ಹತ್ತು ತಿಂಗಳಲ್ಲಿ ಸರ್ಕಾರ ತೆಗೀತೀವಿ, ಮಿಲ್ಟ್ರಿ ಬಂದು ಜೈಲಿಗೆ ತಗೊಂಡು ಹೋಗ್ತಿವಿ. ನನ್ನ ತಮ್ಮನ, ನನ್ನ ತಂಗೀನಾ, ನನ್ನ ಹೆಂಡ್ತೀನಾ, ಎಲ್ಲರ ಮೇಲೆ ಕೇಸ್ ಹಾಕಿಸಿರುವ ದಾಖಲೆ ನನ್ನ ಬಳಿ ಇದೆ. ನನ್ನ ಮೇಲೂ ಕೇಸ್ ಹಾಕಿಸಿದ್ದು ದಾಖಲೆ ಇದೆ. ಅವೆಲ್ಲಾ ಮರೆತು ಬಿಟ್ಟು, ನನ್ನ ಪಕ್ಷ ಹೇಳಿತ್ತು ಅಂತಾ ಬೆಂಬಲವಾಗಿ ನಿಂತಿದ್ದೆ. ಮಾತಾಡ್ತಾ ಇದ್ದಾರೆ ಅಂತ ನಾನೂ ತಾಳ್ಮೆಯಿಂದ ಇದ್ದೆ. ಆದರೆ, ಎಲ್ಲದಕ್ಕೂ ಒಂದು ಲಿಮಿಟ್‌ ಅಂತಾ ಇರುತ್ತೆ ಎಂದು ಹೇಳಿದ್ದಾರೆ.

ನಾನು ಪ್ರತಿ ಎರಡನೇ ಮತ್ತು ನಾಲ್ಕನೇ  ಶನಿವಾರ ಕನಕಪುರಕ್ಕೆ ಬರುತ್ತೇನೆ. ಮಾಗಡಿ, ರಾಮನಗರ, ಚನ್ನಪಟ್ಟಣ ಕನಕಪುರ,ಹಾರೋಹಳ್ಳಿ ಬಳಿ ಏನೇ ಸಮಸ್ಯೆ ಇದ್ದರೂ ಬರಬಹುದು. ಬೆಂಗಳೂರು ಬರೋದಕ್ಕೆ ನಿಮಗೆಲ್ಲಾ ಸಮಸ್ಯೆ ಆಗುತ್ತೆ. ಸಭೆ, ವಿಧಾನಸೌಧ,‌ ಪ್ರವಾಸ ಇದೆಲ್ಲಾ ಇರುತ್ತೆ. ಅದಕ್ಕೆ ಎರಡು ದಿನ ಅಧಿಕಾರಿಗಳಿಗೂ ಇಲ್ಲೇ ಇರೋದಕ್ಕೆ ಹೇಳ್ತೇನೆ. ಯಾರೇ ಬಂದರೂ ನನ್ನ ಇಲ್ಲಿ ಭೇಟಿ ಮಾಡಬಹುದು. ಬೇರೆ ದಿನಗಳಲ್ಲಿ ಬೆಂಗಳೂರಿನವರಿಗೆ ಭೇಟಿ ಆಗ್ತೀನಿ ಎಂದಿದ್ದಾರೆ.

Tap to resize

Latest Videos

ಕಾಫಿ ಡೇ ಮಾಲೀಕ ಸಿದ್ಧಾರ್ಥ್‌ ಆತ್ಮಹತ್ಯೆ ಹಿಂದೆ ಡಿಕೆಶಿ ಕೈವಾಡ: ಸ್ಫೋಟಕ ಆರೋಪ ಮಾಡಿದ ಎಚ್‌ಡಿಕೆ!

ಕನಕಪುರ ದಲ್ಲಿ ನಿವೇಶನ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕನಕಪುರದಲ್ಲಿ ನೂರು ಎಕರೆ ಜಾಗ ಕೊಟ್ಟಿದ್ದೀನಿ. ನೂರು ಎಕರೆ ಸೈಟ್ ಬಡವರಿಗೆ ಹಂಚಿದ್ದೀನಿ. ರಾಮನಗರದಲ್ಲಿ ಜಮೀನು ಹಂಚೋದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಚನ್ನಪಟ್ಟಣದಲ್ಲಿ ಈಗಾಗಲೇ 110 ಎಕರೆ ಜಾಗ ಮಾಡುತ್ತಿದ್ದೇವೆ. ಇನ್ನೂ‌ ಖರೀದಿ‌ ಮಾಡೋದಕ್ಕೆ ಹೇಳಿದ್ದೇವೆ. ಯಾರಾದರೂ ಭೂಮಿ ಮಾರಾಟ ಮಾಡುವವರಿದ್ದಲ್ಲಿ, ಮಾರ್ಕೆಟ್ ಬೆಲೆ ಕೊಟ್ಟು ಖರೀದಿ ಮಾಡೋದಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಶಿವಕುಮಾರ ಸಿಎಂ ಜೊತೆ ಬಂಡೆ ತರಾ ನಿಲ್ತಾನಂತೆ; ಹಿಂದೆ ನನಗೂ ಹಿಂಗೇ ಹೇಳಿದ್ದ ಆಮೇಲೇನಾಯ್ತು? ಹೆಚ್‌ಡಿಕೆ ಕಿಡಿ

click me!