ಐದು ಗ್ಯಾರಂಟಿಗಳ ಕಾರಣದಿಂದ ಈ ವರ್ಷ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ್‌

Published : Jul 26, 2023, 09:29 PM ISTUpdated : Jul 26, 2023, 10:06 PM IST
ಐದು ಗ್ಯಾರಂಟಿಗಳ ಕಾರಣದಿಂದ ಈ ವರ್ಷ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ್‌

ಸಾರಾಂಶ

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎನ್ನುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆ ಡಿಕೆ ಶಿವಕುಮಾರ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.  

ಬೆಂಗಳೂರು (ಜು.26): ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಘೋ‍ಷಣೆ ಮಾಡಿರುವ ಕಾರಣ ಈ ವರ್ಷ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬುಧವಾರ ಹೇಳಿದ್ದಾರೆ. ಐದು ಗ್ಯಾರಂಟಿಗಳ ಕಾರಣದಿಂದಾಗಿ ಸರ್ಕಾರ ಹಣಕಾಸಿನ ಇಕ್ಕಟ್ಟಿನಲ್ಲಿದೆ ಎನ್ನುವುದನ್ನೂ ತಮ್ಮ ಪಕ್ಷದ ಅಸಮಾಧಾನಗೊಂಡಿರುವ ಶಾಸಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಗುರುವಾರದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರಿಗೆ ಸರ್ಕಾರದ ಪರಿಸ್ಥಿತಿ ವಿವರಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎನ್ನುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆ ಡಿಕೆ ಶಿವಕುಮಾರ್‌ ಈ ಹೇಳಿಕೆ ನೀಡಿದ್ದಾರೆ. "ನಾವು ಈ ವರ್ಷ ಐದು ಗ್ಯಾರಂಟಿಗಾಗಿ 40,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ. ಹಾಗಾಗಿ ಈ ವರ್ಷ ನಾವು ಅಭಿವೃದ್ಧಿಯನ್ನು ನೀಡಲು ಸಾಧ್ಯವಿಲ್ಲ" ಎಂದು ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಹೇಳಿದ್ದಾರೆ. 

ನೀರಾವರಿ ಮತ್ತು ಸಾರ್ವಜನಿಕ ಕೆಲಸಗಳಲ್ಲಿಯೂ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಿಲ್ಲ, ಆದರೆ ನಿರೀಕ್ಷೆಗಳು ಹೆಚ್ಚಿವೆ, ನಾವು ಶಾಸಕರಿಗೆ ಆದಷ್ಟು ದಿನ ದೂಡುವಂತೆ ಕೇಳಿದ್ದೇವೆ. ನಾವು ಸಿಎಲ್‌ಪಿ ಸಭೆಯಲ್ಲಿ ಈ ಬಗ್ಗೆ ಅವರಿಗೆ ವಿವರಿಸುತ್ತೇವೆ," ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಸಿದ್ದರಾಮಯ್ಯ ಅವರು 2023-24ರ ಹೊಸ ಬಜೆಟ್ ಅನ್ನು ಮಂಡಿಸಿದರು, ಇದರಲ್ಲಿ ಅವರು ಕಾಂಗ್ರೆಸ್‌ನ ಐದು ಭರವಸೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವ ನಿಧಿಗೆ 35,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಇದರ ಪರಿಣಾಮವಾಗಿ ಆದಾಯದ ಕೊರತೆ ಮತ್ತು 12,522 ಕೋಟಿ ರೂಪಾಯಿ ಆಗಿದೆ.

ಈ ವರ್ಷ ಹೆಚ್ಚಿನ ಅನುದಾನ ನೀಡಲು ಆಗುವುದಿಲ್ಲ. ಹಿಂದಿನ ಸರ್ಕಾರ ಹೆಚ್ಚಿನ ಮೊತ್ತಕ್ಕೆ ಟೆಂಡರ್ ಗಳನ್ನ ಕರೆದು ಎಲ್ಲವನ್ನು ದಿವಾಳಿ ಮಾಡಿ ಹೋಗಿದೆ. ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿರುವುದರಿಂದ ಮೊದಲ ವರ್ಷದಲ್ಲಿ ಅನುದಾನಗಳನ್ನ ನೀಡಲು ಸಾಧ್ಯವಾಗುವುದಿಲ್ಲ. ಇದನ್ನ ನಮ್ಮ ಶಾಸಕರು, ಸಚಿವರಿಗೂ ಇದನ್ನು ತಿಳಿಸಿದ್ದೇವೆ. ನನ್ನ ನೀರಾವರಿ ಇಲಾಖೆಯೂ ಅನುದಾನ ಇಲ್ಲ. ಅದನ್ನ ಅವರು ಕೂಡ ಅರ್ಥ ಮಾಡಿಕೊಳ್ಳಬೇಕು. ಅತ್ಯಗತ್ಯ ಇರುವ ಕೆಲಸಗಳಿಗೆ ಹಣ ನೀಡುತ್ತೇವೆ ಎಂದು ಹೇಳಿದರು.

ಬೆಂಕಿ ಹಚ್ಚಿದವರ ಬೆನ್ನಿಗೆ ನಿಂತರಾ ಡಿಸಿಎಂ ಡಿಕೆಶಿ? ಪ್ರಭಾವಿ ಸಚಿವರ ಆಪ್ತರ ರಕ್ಷಣೆಗೆ ಮುಂದಾಯ್ತಾ ಸರ್ಕಾರ..?

ಸಿದ್ದರಾಮಯ್ಯ ಅವರಂತೆಯೇ ಹಿಂದಿನ ಬಿಜೆಪಿ ಸರ್ಕಾರವನ್ನು ದೂಷಿಸಿದ ಡಿಕೆಶಿ "ಹಿಂದಿನ ಸರ್ಕಾರ ಎಲ್ಲವನ್ನೂ ದಿವಾಳಿ ಮಾಡಿ ಹೋಗಿದೆ. ಹೆಚ್ಚುವರಿ ಟೆಂಡರ್‌ಗಳನ್ನು ನೀಡಿದ್ದಾರೆ. ಖಜಾನೆ ಖಾಲಿಯಾಗಿದೆ, ಆದರೆ ನಾವು ಖಾತರಿಗಳನ್ನು ಜಾರಿಗೊಳಿಸುವ ನಮ್ಮ ಭರವಸೆಯನ್ನು ಉಳಿಸಿಕೊಳ್ಳಬೇಕಾಗಿತ್ತು. ಮೊದಲ ವರ್ಷದಲ್ಲಿ ನಾವು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಆದ್ದರಿಂದ, ಎಲ್ಲರೂ ತಾಳ್ಮೆಯಿಂದಿರಬೇಕು" ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಾಗಿ ಶಾಸಕರ ಅನುದಾನ ಸ್ಥಗಿತ: ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

ಮಂಗಳವಾರವೂ ಶಿವಕುಮಾರ್, ಒಂದು ವರ್ಷಕ್ಕೆ ಅನುದಾನ ಕೇಳುವುದನ್ನು ನಿಲ್ಲಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. "ಶಾಸಕರು ಜನರಿಗೆ ಭರವಸೆ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರು ನನ್ನ ಇಲಾಖೆಯಿಂದ 10 ಕೋಟಿಯಿಂದ 300 ಕೋಟಿ ರೂಪಾಯಿಗಳ ವ್ಯಾಪ್ತಿಯಲ್ಲಿ ಯೋಜನೆಗಳನ್ನು ಕೇಳುತ್ತಿದ್ದಾರೆ. ನಾವು (ಶಾಸಕರು) ಒಂದು ವರ್ಷ ಎಲ್ಲಾ ಕೆಲಸಗಳನ್ನು ತಡೆಹಿಡಿಯಲು ಕೇಳಿದ್ದೇವೆ" ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌