
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಸೆ.01): ಕಾಂಗ್ರೆಸ್ ಪಕ್ಷ ಈ ದೇಶದ ಆಸ್ತಿ, ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ವಿರೋಧಿ ಧೋರಣೆ ಹೊಂದಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅನಿವಾರ್ಯ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ತಿಳಿಸಿದರು. ಚುನಾವಣೆಯಲ್ಲಿ ಸೋತ ನಂತರ ರೇಣುಕಾಚಾರ್ಯರಿಗೆ ಅಧಿಕಾರ ಇಲ್ಲದೇ ಹತಾಶರಾಗಿದ್ದು, ಬುದ್ದಿ ಭ್ರಮಣೆ ಆದಂತೆ ಕಾಣುತ್ತದೆ. ಇವರ ನಡೆ ಬಿಜೆಪಿಗೆ ಬ್ಲಾಕ್‌ಮೇಲ್ ಮಾಡುವಂತೆ ಇಲ್ಲವೇ ಕಾಂಗ್ರೇಸ್ಸಿಗರಲ್ಲಿ ಮುಜುಗರ ಉಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಅವರ ತತ್ವ, ಸಿದ್ದಾಂತ ಬೇರೆ, ನಮ್ಮ ಪಕ್ಷದ ತತ್ವ ಸಿದ್ದಾಂತಗಳೇ ಬೇರೇ ಎಂದು ಹೇಳಿದರು. ಬ್ಲಾಕ್‌ಮೇಲ್' ರಾಜಕಾರಣಕ್ಕೆ ಹೆಸರಾಗಿರುವ ರೇಣುಕಾಚಾರ್ಯ ಅಧಿಕಾರ ನೀಡಿದ ಯಡಿಯೂರಪ್ಪನವರ ವಿರುದ್ಧ ಶಾಸಕರನ್ನು ಎತ್ತಿಕಟ್ಟಿ ಅಧಿಕಾರದಿಂದ ಇಳಿಸಿ ಯಡಿಯೂರಪ್ಪನವರ ಬಗ್ಗೆ ಅನುಕಂಪ ತೋರಿಸುತ್ತಿರುವ ರೇಣುಕಾಚಾರ್ಯ ತನ್ನದೇ ಪಕ್ಷದ ವಿರುದ್ಧ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ: ಜನಮನ ಸೆಳೆದ ಸಂಸ್ಕೃತ ವಿಜ್ಞಾನ ಪ್ರದರ್ಶಿನಿ
ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಪಕ್ಷದ ಕಾರಕರ್ತರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಭಿವೃದ್ಧಿ ಹೆಸರಲ್ಲಿ ಬೇಟಿ ಮಾಡುತ್ತಿರುವ ರೇಣುಕಾಚಾರ ಅಧಿಕಾರ ಇದ್ದಾಗ ಏನು ಮಾಡಿದರು ಎಂದು ಕಿಡಿಕಾರಿದರು. ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಮಾಡಿದ್ದರೆ ಜನರು ಅವರ ಪರ ಇರುತ್ತಿದ್ದರು. ಆದರೆ ರೇಣುಕಾಚಾರ್ಯ, ಅಭಿವೃದ್ಧಿ ಬಗ್ಗೆ ಗಮನ ನೀಡದೇ ಕೇವಲ ಬ್ಲಾಕ್ ಮೇಲ್ ಮಾಡುತ್ತಾ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇಂತವರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಹೇಳಿದರು.
ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್: ದಲಿತ ಮುಖಂಡನಿಂದ ಹಿಂದೂ ದೇವರ ವಿರುದ್ಧ ಸೊಂಟದ ಕೆಳಗಿನ ಭಾಷಾ ಪ್ರಯೋಗ!
ಸಂಪೂರ್ಣ ಸಂವಿಧಾನ ವಿರೋಧಿ ನಡೆ ಹೊಂದಿರುವ ರೇಣುಕಾಚಾರ ಒಂದು ಕೋಮು, ಜಾತಿ-ಧರ್ಮದ ಹೆಸರಿನಲ್ಲಿ ಮತ ಕೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಎಲ್ಲಾ ಜಾತಿ ಧರ್ಮದವರು ಸರಿಸಮಾನರು ಎಂದ ಅವರು, ರೇಣುಕಾಚಾರ್ಯ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿರೋಧ ವ್ಯಕ್ತ ಪಡಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ದಿನೇಶ್ ಶೆಟ್ಟಿ, ಕೆ.ಜಿ.ಶಿವಕುಮಾರ್, ಅನಿತಾಬಾಯಿ ಮಾಲತೇಶ್, ಡೋಲಿಚಂದ್ರು, ದಾಕ್ಷಾಯಿಣಮ್ಮ, ಅಲಿ ರೆಹಮತ್, ಶುಭಮಂಗಳ, ಹರೀಶ್ ಬಸಾಪುರ, ರಾಜೇಶ್ವರಿ ಇತತರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.