ಸಿದ್ದರಾಮಯ್ಯರನ್ನು ನಂಬಿ ಹೋದ್ರೆ ದಲಿತರು ಹಾಳಾಗಿ ಹೋಗ್ತಾರೆ: ಪ್ರತಾಪ್ ಸಿಂಹ ಕಿಡಿ

By Suvarna News  |  First Published Mar 5, 2024, 7:39 PM IST

ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ನಡೆಯುತ್ತಿದೆ ಎನ್ನುವುದಕ್ಕೆ ಸದ್ಯ ಈಗ ಟ್ರಯಲರ್ ಗಳು ಕಾಣುತ್ತಿವೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದನ್ನು ಲಜ್ಜೆಗೆಟ್ಟ ಕಾಂಗ್ರೆಸ್ ನವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು  ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.5): ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ನಡೆಯುತ್ತಿದೆ ಎನ್ನುವುದಕ್ಕೆ ಸದ್ಯ ಈಗ ಟ್ರಯಲರ್ ಗಳು ಕಾಣುತ್ತಿವೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದನ್ನು ಲಜ್ಜೆಗೆಟ್ಟ ಕಾಂಗ್ರೆಸ್ ನವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮೈಸೂರು ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

Tap to resize

Latest Videos

undefined

ಮಡಿಕೇರಿ ತಾಲ್ಲೂಕಿನ ಗಾಳೀಬೀಡು ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಜನ ಮೈಮರೆತರೆ ವಿಧಾನಸೌಧದ ಗೋಪುರವನ್ನು ಗುಂಬಜ್ ಮಾಡುತ್ತಾರೆ. ಅದರ ಮೇಲೆ ಮೈಕ್ ಕಟ್ಟಿ ಆಜಾನ್ ಕೂಗುತ್ತಾರೆ. ಕರ್ನಾಟಕದ ಜನ ಎಚ್ಚರಿಕೆಯಿಂದ ಇರಬೇಕು ಎಂದರು.

ಮದವೇರಿದ ಗೂಳಿ ಹಾವಳಿಗೆ ಜನ ಬೆಚ್ಚಿ ಚಿತ್ರದುರ್ಗ ಜನತೆ!

ಇನ್ನು ಮಂಡ್ಯದಲ್ಲಿ 2017 ರಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಹೊಸ ಸಂಗತಿಯಲ್ಲ. 2013 ರಿಂದ 2018 ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಕೊಡಗಿನಲ್ಲಿ ಮಹಿಳೆಯರ ಮೇಲೂ ರೌಡಿಶೀಟರ್ ತೆರೆಯಲಾಗಿತ್ತು. ಇತ್ತೀಚೆಗೆ ಹುಬ್ಬಳ್ಳಿಯ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡಲಾಗಿತ್ತು.

ಇನ್ನು ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಿದವರನ್ನು ಟಾರ್ಗೆಟ್ ಮಾಡಲಾಗಿದೆ. ಈಗ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೆಲಸ ನಡೀತಿದೆ. ಚುನಾವಣೆ ಹತ್ತಿರ ಬಂದಿರುವುದರಿಂದ ನಮ್ಮ ಕಾರ್ಯಕರ್ತರನ್ನು ಎದೆಗುಂದಿಸಿ ಚುನಾವಣೆಯಲ್ಲಿ ಗೆಲುವಿಗಾಗಿ ಕೆಲಸ ಮಾಡಲು ಯತ್ನಿಸದಂತೆ ತಡೆಯಲಾಗುತ್ತಿದೆ. ಕಾಂಗ್ರೆಸ್ ನವರಿಗೆ ಅಲ್ಪಸಂಖ್ಯಾತರ ಓಲೈಸುವುದನ್ನು ಬಿಟ್ಟು ಬೇರೆ ಯಾವ ಅಜೆಂಡಾ ಕೂಡ ಇಲ್ಲ ಎಂದರು. ದಲಿತರ ಶ್ರೇಯೋಭಿವೃದ್ಧಿಗಾಗಿ ಇರಬೇಕಾದಂತಹ ಎಸ್ ಸಿಪಿ, ಟಿಸಿಪಿಯ 11 ಸಾವಿರ ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇಂದು ಹಿಂದೂ ಮತ್ತು ದಲಿತ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಫಿನಾಡಲ್ಲಿ ಮಳೆ ಕೊರತೆ, 64 ಜನ ರೈತರು ಆತ್ಮಹತ್ಯೆ!

ಇನ್ನು ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ FSL ವರದಿ ವಿಳಂಬ ಆಗಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. FSL ವರದಿ ನೀಡಲು  ಸರ್ಕಾರಕ್ಕೆ ಎಷ್ಟು ಸಮಯ ಬೇಕು? ಗೃಹಸಚಿವ ಪರಮೇಶ್ವರ್ ಮೇಲೆ ನನಗೆ ಗೌರವಿದೆ. ಆದರೆ ಅವರು ಕೂಡ ಸಿದ್ದರಾಮಯ್ಯ ಅವರನ್ನು ಓಲೈಸಲು ನಿಂತಿದ್ದಾರೆ. ಅವರು ಸುಳ್ಳು ಹೇಳೋದನ್ನ ಕಲಿತು ಬಿಟ್ಟಿದ್ದಾರೆ. ನನ್ನ ತಮ್ಮನ ಪ್ರಕರಣದಲ್ಲೂ ಅದನ್ನೆ ಹೇಳಿದ್ರು. ಕೊನೆಗೆ ಏನು ಮಾಡಲಾಗದೆ ಕೋರ್ಟಿನಲ್ಲಿ ಚಿಮಾರಿ ಹಾಕಿಸಿಕೊಂಡ್ರು. ಸಿದ್ದರಾಮಯ್ಯರನ್ನ ಓಲೈಸೋದ್ರಿಂದ ನಿಮಗೆ ಏನು ಸಿಗಲ್ಲ ಪರಮೇಶ್ವರ್ ಸರ್. ಸಿದ್ದರಾಮಯ್ಯ ದಲಿತ ವಿರೋಧಿ ಅದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ. ದಲಿತರ ಅಭಿವೃದ್ಧಿಯ 11 ಸಾವಿರ ಕೋಟಿ ಹಣವನ್ನ ಬೇರೆಡೆಗೆ ಡೈವರ್ಟ್ ಮಾಡಿದ್ದಾರೆ. ದಲಿತರ ಉದ್ದಾರಕ್ಕೆ ಸಿದ್ದರಾಮಯ್ಯ ಯಾವತ್ತು ಮನಸು ಮಾಡಲ್ಲ. ಅವರಿಗೆ ದಲಿತರ ಮೇಲೆ ಕಾಳಜಿ ಇಲ್ಲ. ಕಾಳಜಿ ಇದಿದ್ರೆ ನಿಮ್ಮನ್ನು ಅವರು ಎಂದೋ ಉಪಮುಖ್ಯ ಮಂತ್ರಿ ಮಾಡಬಹುದಿತ್ತು. ಆದರೆ ಕೊನೆಗೆ ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ ನಿಮ್ಮನ್ನು ಉಪಮುಖ್ಯ ಮಂತ್ರಿ ಮಾಡಬೇಕಾಯಿತು.

ಸಿದ್ದರಾಮಯ್ಯರನ್ನು ನಂಬಿಕೊಂಡು ಹೋದ್ರೆ ನೀವು ಹಾಳಾಗ್ತಿರಾ, ದಲಿತರು ಹಾಳಾಗಿ ಹೋಗ್ತಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಮಾಡುವ ಮನಸ್ಸು ಸಿದ್ದರಾಮಯ್ಯಗೆ ಇದೆಯಾ. ದಲಿತರ ಬಗ್ಗೆ ಸಿದ್ದರಾಮಯ್ಯರ ಹೃದಯದಲ್ಲಿ ಯಾವುದೇ ಸ್ಥಾನ ಇಲ್ಲ. ಚುನಾವಣೆಗೋಸ್ಕರ ದಲಿತ ನಾಯಕರನ್ನ  ಬಳಸಿಕೊಳುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ವಾಗ್ದಾಳಿ ನಡೆಸಿದರು.

click me!