ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ದಲಿತ ಮುಖಂಡರ ಸಭೆ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ!

By Girish GoudarFirst Published Oct 9, 2024, 8:01 AM IST
Highlights

ಯಾವ ಮೀಟಿಂಗ್ ಇಲ್ಲ, ಡಿನ್ನರ್ ಮಾಡಿದ್ವಿ. ಮಹದೇವಪ್ಪ ಮನೆಯಲ್ಲಿ ಡಿನ್ನರ್ ಅರೆಂಜ್ ಆಗಿತ್ತು, ಊಟಕ್ಕೆ ಹೋಗಿದ್ವಿ. ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತಾ?. ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ: ಸಚಿವ ಡಾ.ಜಿ.ಪರಮೇಶ್ವರ 
 

ಮೈಸೂರು(ಅ.09):  ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಹೊತ್ತಲ್ಲೇ ನಗರದಲ್ಲಿ ದಲಿತ ಮುಖಂಡರ ಸಭೆ ನಡೆದಿದೆ. ಸಚಿವತ್ರಯರ ನೈಟ್ ಮೀಟಿಂಗ್ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ. ಹೌದು, ಡಿನ್ನರ್ ನೆಪದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನೆಯಲ್ಲಿ ನಿನ್ನೆ(ಮಂಗಳವಾರ) ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಮಹದೇವಪ್ಪ ಚರ್ಚೆ ನಡೆಸಿದದ್ದಾರೆ. 

ಸಿಎಂ ಬದಲಾವಣೆ ಕೂಗು ಬೆನ್ನಲ್ಲೇ ದಲಿತ ನಾಯಕರ ಚರ್ಚೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ. ನಿನ್ನೆ ಬೆಳಗ್ಗೆಯಿಂದಲೂ ಸಚಿವ ಸತೀಶ್ ಜಾರಕಿಹೊಳಿ ಮೈಸೂರಿನಲ್ಲೇ ಇದ್ದಾರೆ. ಜಾರಕಿಹೊಳಿ ಸ್ಥಳೀಯ ಶಾಸಕರು ಹಾಗೂ ನಾಯಕರ ಭೇಟಿಗೆ ಮುಂದಾಗಿದ್ದರು. 

Latest Videos

ಸಿದ್ದು ಅಧಿಕಾರ ತ್ಯಾಗ: ವಿಜಯೇಂದ್ರ ತಮಗೆ ಬಿದ್ದ ಕನಸು ನಿಜವೆಂದು ನಂಬಿದ್ದಾರೆ, ರೆಡ್ಡಿ ವ್ಯಂಗ್ಯ

ತಡರಾತ್ರಿ ಸಚಿವ ಡಾ.ಮಹದೇವಪ್ಪ ಮನೇಲಿ ಮೀಟಿಂಗ್ ನಡೆದಿದೆ. ಮೂವರು ನಾಯಕರ ಮೀಟಿಂಗ್ ಭಾರಿ ಮಹತ್ವ ಪಡೆದುಕೊಂಡಿದೆ.  

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ

ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. ಮಹದೇವಪ್ಪ ಮನೆಯಲ್ಲಿ ಡಿನ್ನರ್‌ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ ಅವರು, ಯಾವ ಮೀಟಿಂಗ್ ಇಲ್ಲ, ಡಿನ್ನರ್ ಮಾಡಿದ್ವಿ. ಮಹದೇವಪ್ಪ ಮನೆಯಲ್ಲಿ ಡಿನ್ನರ್ ಅರೆಂಜ್ ಆಗಿತ್ತು, ಊಟಕ್ಕೆ ಹೋಗಿದ್ವಿ. ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತಾ?. ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. 

ನಾನು ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣ ಮೂರ್ತಿ ಇದ್ವಿ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ನಾವು ಅವಾಗ ಅವಾಗ ಸೆರ್ತಾ ಇರ್ತಾ ಇರ್ತೀವಿ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೇ ಎಂದು ತಿಳಿಸಿದ್ದಾರೆ. 

ದಲಿತ ಸಿಎಂ ಚರ್ಚೆ ವಿಚಾರ‌ದ ಬಗ್ಗೆ ಮಾತನಾಡಿ ಪರಮೇಶ್ವರ್‌ ಅವರು, ಸದ್ಯ ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದಷ್ಟೇ ಹೇಳಿದ್ದಾರೆ.

ಮುಡಾ ಕೇಸಿಂದ ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಸಿದ್ದು ರಾಜೀನಾಮೆ ನೀಡಲಿ: ಕೋಳಿವಾಡ

ನಿಮಗೆ ಸಿಎಂ ಅಗುವ ಆಸೆ ಇಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್‌, ಅದರ ಪ್ರಶ್ನೆಯೇ ಇಲ್ಲ. ಸಿಎಂ ಆಗುವ ವಿಚಾರವನ್ನ ನೀವು ಮಾತನಾಡುವುದು ಬೇಡ ಎಂದಿದ್ದಾರೆ. 

ಹರಿಯಾಣ ಸೋಲಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ಮುಡಾ ಹಗರಣ ಮೈಸೂರಿನ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೋಳಿವಾಡ ಹೇಳಿಕೆ ವೈಯಕ್ತಿಕವಾದುದು ಎಂದು ತಿಳಿಸಿದ್ದಾರೆ. 

click me!