ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಅಂತ ಈಗಾಗಲೇ ಜಾರಕಿಹೊಳಿ ಹೇಳಿದ್ದಾರೆ. ಅದೇ ಮಾತನ್ನು ನಾನೂ ಪುನರುಚ್ಚರಿಸುವೆ. ಸಚಿವರಾದ ಸತೀಶ್, ಪರಮೇಶ್ವರ್ ಅವರದು ಸಹಜ ಭೇಟಿ ಎಂದು ತಿಳಿಸಿದ ಸಚಿವ ರಾಮಲಿಂಗಾ ರೆಡ್ಡಿ
ಚಿತ್ರದುರ್ಗ(ಅ.09): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಲಗಿದ್ದಾಗ ಬೀಳುವ ಕನಸನ್ನು ನಿಜವೆಂದು ನಂಬಿ ಎಲ್ಲರಿಗೂ ಹೇಳಿಕೊಂಡು ಬರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ತ್ಯಾಗದ ಕನಸು ಅವರಿಗೆ ಬಿದ್ರೆ ಅದು ನಿಜನಾ? ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಅಂತ ಈಗಾಗಲೇ ಜಾರಕಿಹೊಳಿ ಹೇಳಿದ್ದಾರೆ. ಅದೇ ಮಾತನ್ನು ನಾನೂ ಪುನರುಚ್ಚರಿಸುವೆ. ಸಚಿವರಾದ ಸತೀಶ್, ಪರಮೇಶ್ವರ್ ಅವರದು ಸಹಜ ಭೇಟಿ ಎಂದು ತಿಳಿಸಿದ್ದಾರೆ.
undefined
'ವಕ್ಫ್ ಆಸ್ತಿ ಯತ್ನಾಳ್ ಅಪ್ಪಂದು ಅಲ್ಲ..'; ಸಚಿವ ಜಮೀರ್ ಹೇಳಿಕೆಗೆ ಯತ್ನಾಳ್ ತಿರುಗೇಟು
ರಾಜ್ಯ ಹಾಗೂ ಪಕ್ಷದ ಬೆಳವಣಿಗೆ ಕುರಿತು ಚರ್ಚಿಸಿರಬಹುದು. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ದಲಿತ ನಾಯಕರು ಸಾಕಷ್ಟಿದ್ದು, ಭವಿಷ್ಯದಲ್ಲಿ ಸಿಎಂ, ಪ್ರಧಾನಿ, ರಾಷ್ಟ್ರಪತಿಯೂ ಆಗಬಹುದು ಎಂದರು.