
ಬೆಂಗಳೂರು(ಡಿ.25): ಇದು ಯಡಿಯೂರಪ್ಪ ವಿಚಾರ ಅಲ್ಲ, ಸುಧಾಕರ್ ವಿಚಾರವಾಗಿದೆ. ಸುಧಾಕರ್ ಬಗ್ಗೆ ಚಿಂತೆ ಇಲ್ಲ, ಯಡಿಯೂರಪ್ಪ ಯಾಕೆ ಇಷ್ಟು ವೀಕ್ ಆಗಿದ್ದಾರೆ ಅಂತ ನನಗೆ ಚಿಂತೆಯಾಗಿದೆ. ಅವನೊಬ್ಬ ಹೇಳಿದ ಅಂತ ನೈಟ್ ಕರ್ಫ್ಯೂಗೆ ಸಹಿ ಹಾಕಿದ್ದಾರೆ ಯಡಿಯೂರಪ್ಪ. ಬರೀ ನಾವು ಹೇಳಿದ್ದಕ್ಕೆ ಮಾತ್ರವಲ್ಲ, ಅವರ ಸಚಿವರೂ ಕೂಡ ಉಗಿದಿದ್ದಾರೆ. ಅದಕ್ಕೆ ನೈಟ್ ಕರ್ಫ್ಯೂ ವಾಪಸ್ ಪಡೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನೈಟ್ ಕರ್ಪ್ಯೂ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಇಡೀ ದೇಶ, ಪ್ರಪಂಚ ನೋಡುತ್ತಿರುವ ಸಿಟಿಯಾಗಿದೆ. ರಾತ್ರಿ 11 ಗಂಟೆಯಾದ ಮೇಲೂ ಜನರು ಓಡಾಡುತ್ತಾರೆ. ಯುವ ಪೀಳಿಗೆ ಕಷ್ಟವೋ ಸುಖವೋ ಏನೋ ಒಂದು ಮಾಡಿಕೊಳ್ಳಲಿ. ಯಾರ ಅಭಿಪ್ರಾಯ ನೂ ಪಡೆಯದೇ ಲಾಕ್‌ಡೌನ್ ಮಾಡಿದ್ರೆ ಹೇಗೆ? ಯಾವುದಾದರೂ ತಜ್ಞರ ಅಭಿಪ್ರಾಯ ಪಡೆದುಕೊಂಡಿದ್ರಾ? ಅಂಥವರ ಫೋಟೋ ಕೊಟ್ಟರೆ ಮನೆಯಲ್ಲಿ ಹಾಕಿಕೊಂಡು ಕೂಡುತ್ತೇವೆ. ಬೇಸಿಕ್ ಕಾಮನ್ ಸೆನ್ಸ್ ಬೇಕು. ಇಡೀ ಮಾರ್ಕೆಟ್ ಜನ ಜಂಗುಳಿ ನಡಿತಾ ಇದೆ. ಔಷಧಿ ಒದಗಿಸುವುದು, ನೊಂದವರಿಗೆ ದುಡ್ಡು ಕೊಡುವಂಥದ್ದು ಮಾಡಬೇಕು. ಟ್ಯಾಕ್ಸ್ ಕಡಿಮೆ ಮಾಡಬೇಕು. ಉದ್ದಿಮೆದಾರರಿಗೆ ಸಾಲ ಮನ್ನಾ ಮಾಡೋದಿರಲಿ ಇಂಟರೆಸ್ಟ್ ಆದ್ರೂ ಕಡಿಮೆಮಾಡಿದಾರಾ. ಲಾರ್ಜರ್ ಇಂಟರೆಸ್ಡ್ ನೋಡಬೇಕು. ಇಷ್ಡ ಬಂದಂಗೆ ಮಾಡೋದಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಯಡಿಯೂರಪ್ಪಗೆ ಮರ್ಯಾದೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ'
ನೈಟ್ ಕರ್ಫ್ಯೂ ಜ್ಞಾನ ಇಲ್ಲದವರು ಮಾಡಿದ ತೀರ್ಮಾನವಾಗಿದೆ. ಇವರಿಗೆ ಏನು ಗೊತ್ತಿದೆ ಸುಧಾಕರ್‌ಗೆ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇದ್ದಾಗ ಯಾಕೆ ಕೇಸ್ ಹಾಕಲಿಲ್ಲ. ಸರ್ಕಾರ ಯುವಕರ ಭಾವನೆಗಳಿಗೆ ಗುರಿಯಾಗಿದೆ. ಜನರ ಆಕ್ರೋಶಕ್ಕೆ ನಾವು ಮತ್ತು ಮಾಧ್ಯಮದವರು ಧ್ವನಿಯಾಗಿದ್ದೇವೆ. ಸರ್ಕಾರ ಸಚಿವರಿಗಿಂತ ಹೆಚ್ಚು ಕಾಮನ್ ಸೆನ್ಸ್ ಸಾಮಾನ್ಯ ಜನರಿಗಿದೆ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.