ಅಡುಗೆ ಸಿಲೆಂಡರ್ ಬೆಲೆ ಏರಿಕೆ: ಮೋದಿ ಸರ್ಕಾರದ ವಿರುದ್ಧ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಪ್ರತಿಭಟನೆ

By Ravi Janekal  |  First Published Mar 5, 2023, 12:26 PM IST

ಕೇಂದ್ರ ಸರ್ಕಾರದಿಂದ ಗೃಹ ಬಳಕೆ ಅಡುಗೆ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಕೋಲಾರದಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ನೇತೃತ್ವದಲ್ಲಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯ್ತು.


ಕೋಲಾರ (ಮಾ.5) : ಕೇಂದ್ರ ಸರ್ಕಾರದಿಂದ ಗೃಹ ಬಳಕೆ ಅಡುಗೆ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಕೋಲಾರದಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ನೇತೃತ್ವದಲ್ಲಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯ್ತು.

ನೂರಾರು ಮಹಿಳೆಯರು ಭಾಗವಹಿಸಿ ಕೈಯಲ್ಲಿ ಸಿಲಿಂಡರ್ ಹಿಡಿದು ಕೇಂದ್ರ ಸರ್ಕಾರ(Union government)ದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು.ಬಳಿಕ ಮಾತನಾಡಿದ ಡಾ. ಪುಷ್ಪ ಅನರನಾಥ್(Dr Pushpa amaranath),ಪ್ರಧಾನಿ(PM Narendra Modi)ಗಳ ಅಚ್ಛೇ ದಿನದ ಪರಿಣಾಮ ದಿನ ಬಳಕೆಗೆ ಬೇಕಾಗುವ ಗ್ಯಾಸ್ ಸಿಲೆಂಡರ್ ನ ಬೆಲೆ 1200 ರುಪಾಯಿ ಆಗಿದೆ. ಕೇಂದ್ರದ ಉಜ್ವಲಾ ಯೋಜನೆ(Pradhan Mantri Ujjwala Yojana)ಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿರುವ ಬಡವರು,ಕೂಲಿ ಕಾರ್ಮಿಕರು ಹಾಗೂ ಮಧ್ಯಮದ ವರ್ಗದವರು ನಿರಂತರ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದಾರೆ.ಹಳೆಯ ಕಾಲದ ಸೌದೆ ಬಿಟ್ಟು ಗ್ಯಾಸ್ ಸೈಲೆಂಡರ್ ಗಳ ಮೊರ ಹೋಗಿದ್ರು ಆದ್ರೀಗ ಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.

Latest Videos

undefined

ಗ್ಯಾಸ್‌ ಹೋಯ್ತು ಸೌದೆ ಬಂತು: ಬಿಜೆಪಿ ಹೋಗುತ್ತೆ, ಕಾಂಗ್ರೆಸ್‌ ಬರು​ತ್ತೆ: ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬಳಿಕ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ,ಸಿಲೆಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಬೇಕಾಬಿಟ್ಟಿಯಾಗಿ  ಏರಿಕೆ ಮಾಡಿರೋದ್ರಿಂದ ಬಡವರಿಗೆ ಕೊಳ್ಳುವ ಶಕ್ತಿ ಇಲ್ಲವಾಗಿದೆ.ಸಿಲೆಂಡರ್ ಖರೀದಿ ಮಾಡಿ ಅನ್ನ ಬೇಯಿಸಲು ಸಾಧ್ಯವಾಗ್ತಿಲ್ಲ.ಯುಪಿಎ ಸರ್ಕಾರ(UPA Government) ಇದ್ದಾಗ ಗ್ಯಾಸ್ ಗೆ ಸಬ್ಸಿಡಿ(Gas subsidy) ದೊರೆಯುತ್ತಿತ್ತು,ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಆದ್ರೂ ಸಹ ಗ್ರಾಹಕರ ಮೇಲೆ ಯುಪಿಎ ಸರ್ಕಾರದಿಂದ ಬೆಲೆ ಏರಿಕೆ ಆಗಿರಲಿಲ್ಲ.ಆದ್ರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ನೀಡ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿದೆ,ಬಡವರು ಬದುಕಬಾರದು ಅನ್ನೋದು ಇವರ ಉದ್ದೇಶವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ರು.

ಜನಸಾಮಾನ್ಯರಿಗೆ ಬಿಗ್‌ ಶಾಕ್‌: ಗ್ಯಾಸ್‌ ಸಿಲಿಂಡರ್‌ ದರ 350 ರೂ. ಏರಿಕೆ; ಹೋಟೆಲ್‌ ದರವೂ ಹೆಚ್ಚಾಗುತ್ತಾ..?

ಇನ್ನು ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಾಧಾ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ ಸೇರಿದಂತೆ ಹಲವರು ಭಾಗಿಯಾಗಿದ್ರು.

click me!