ಸುಳ್ಳು, ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ: ಸಿ.ಟಿ.ರವಿ

By Kannadaprabha News  |  First Published Jun 22, 2022, 2:43 PM IST

*  ಸುಳ್ಳಿಗೆ ನೀಡುವ ಪ್ರಶಸ್ತಿ ಸಿದ್ದರಾಮಯ್ಯಗೇ ನೀಡಬೇಕು
*  ರಾಜ್ಯಕ್ಕೆ ಪ್ರಧಾನಿ ಬರಿಗೈಯಲ್ಲಿ ಬಾರದೇ 30 ಸಾವಿರ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ
*  ಸಿದ್ದರಾಮಯ್ಯ ಲಸಿಕೆ ಹಾಕಿಸಿಕೊಂಡಿಲ್ಲವಾ? ಅದು ಯಾವ ಸರ್ಕಾರ ಕೊಟ್ಟಿದ್ದು?
 


ಚಿಕ್ಕಮಗಳೂರು(ಜೂ.22): ಸತ್ಯ ಮತ್ತು ಸಿದ್ದರಾಮಯ್ಯನವರಿಗೂ ಎಣ್ಣೆ, ಸೀಗೆಕಾಯಿ ಸಂಬಂಧ​​. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.

ಸುಳ್ಳಿಗೆ ಯಾವುದಾದರೂ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರಾರಿಗೂ ಸಿಗುವುದಿಲ್ಲ. ಸುಳ್ಳು ಹೇಳುವುದರಲ್ಲಿ ಅವರಷ್ಟು ನಿಷ್ಟಾರ್ಥರು ಇನ್ಯಾರು ಇಲ್ಲ. ದಿನ ನಿತ್ಯ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

Latest Videos

undefined

ಮಹಾರಾಷ್ಟ್ರದಲ್ಲಿ ಈಗಿರುವುದು ಮಿಸ್‌ಮ್ಯಾಚ್ DNA ಸರ್ಕಾರ!

ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿದ್ದರು. ಅವರ ಅವಧಿಯಲ್ಲೇ ಆಕ್ಸಿಜನ್‌ ಪ್ಲಾಂಟ್‌ ಹಾಕಿದ್ದರೆ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್‌ ಇಲ್ಲದೇ ಜನ ಒದ್ದಾಡುವ ಪ್ರಶ್ನೆ ಬರುತ್ತಿತ್ತಾ? ನಮ್ಮ ಪ್ರಧಾನಿ ಮೋದಿ ಜಗತ್ತಿನ ಯಾವುದೇ ರಾಷ್ಟ್ರಗಳು ಸ್ಪಂದಿಸಲಾರದಷ್ಟುವೇಗಗತಿಯಲ್ಲಿ ಪ್ರತಿ ಆಸ್ಪತ್ರೆಗೂ ಆಕ್ಸಿಜನ್‌ ಪ್ಲಾಂಟ್‌ಗಳನ್ನು ಹಾಕಿ, ತ್ವರಿತಗತಿಯಲ್ಲಿ ಆಕ್ಸಿಜನ್‌ ಸರಬರಾಜು ಮಾಡುವ ಕ್ರಮ ಕೈಗೊಂಡರು. ಇಲ್ಲದಿದ್ದರೆ ಈ ಸಾವಿನ ಪ್ರಮಾಣ ಹತ್ತುಪಟ್ಟು ಹೆಚ್ಚಾಗುತ್ತಿತ್ತು ಎಂದರು.

ನಾವೆಲ್ಲರೂ ಬೀದಿಲಿ ನಿಂತು ಆಕ್ಸಿಜನ್‌ಗಾಗಿ ಪರದಾಡುತ್ತಿದ್ದ ಸಂದರ್ಭ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಅವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದರು. ಅವರೇ ಪ್ರತಿನಿಧಿಸುವ ಬಾದಾಮಿ ಸೇರಿದಂತೆ ಬಹುತೇಕ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪ್ಲಾಂಟ್‌ ಆಗಿದೆ ಯಾರೂ ಹಾಕಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತಯಾರಾಗಿರುವ ಪಿಎಂ ಕೇ​ರ್‍ಸ್ನಲ್ಲೆ ಹಾಕಿದ್ದು. ಈ ಸತ್ಯ ಹೇಳೋಕೆ ಕಾಂಗ್ರೆಸ್ಸಿಗರಿಗೆ ಹಿಂಜರಿಕೆ. ಕಾರಣ, ಸತ್ಯ ಮತ್ತು ಸಿದ್ದರಾಮಯ್ಯ ಅವರಿಗೂ ಎಣ್ಣೆ, ಸೀಗೆಕಾಯಿ ಸಂಬಂಧ​​ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿದರು.

ಎಲ್ಲರಿಗೂ ಎರಡು ಡೋಸೇಜ್‌ ಲಸಿಕೆ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಆಗ ಸಿದ್ದರಾಮಯ್ಯನವರು ಲಸಿಕೆ ಹಾಕಿಸಿಕೊಂಡಿಲ್ಲವಾ? ಅದು ಯಾವ ಸರ್ಕಾರ ಕೊಟ್ಟಿದ್ದು, ಆಕಸ್ಮಾತ್‌ ಅವರಿಗೆ ಆ ಡೋಸೇಜ್‌ ಸಿಗದಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಲಿ, ನಾನು ಹೇಳುವುದಿಲ್ಲ ಹೇಳಿದರೆ ಅದಕ್ಕೆ ತಪ್ಪು ಅರ್ಥ ಬಿಂಬಿಸುತ್ತಾರೆ ಎಂದರು.

138 ಕೋಟಿ ಜನರಿಗೆ ಉಚಿತ ವ್ಯಾಕ್ಸಿನೇಷನ್‌ ಕೊಡೋದು ಸಾಮಾನ್ಯ ಸಂಗತಿಯಾ? ಜಗತ್ತಿನ ಯಾವ ದೇಶ ಈ ರೀತಿ ಮಾಡಿದೆ? ಚೈನಾದಲ್ಲಿ ಕಾಯಿಲೆ ಹರಡಿತು. ಅವರ ದೇಶದ ಜನರಿಗೂ ಫ್ರೀ ವ್ಯಾಕ್ಸಿನೇಷನ್‌ ನೀಡಲಿಲ್ಲ. ಇಂಥವರ ಬಗ್ಗೆ ಕೊಂಕು ಮಾತನಾಡೋದು ಅವರಿಗಿರುವ ಕೆಟ್ಟಕಾಯಿಲೆ. ಸುಳ್ಳು ಹೇಳುವುದು ಅದಕ್ಕಿಂತ ದೊಡ್ಡ ಕಾಯಿಲೆ. ಹಾಗಾಗಿ ಸುಳ್ಳಿಗೆ ಯಾವುದಾದರೂ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯನವರಿಗೆ ಕೊಡಬಹುದು ಎಂದು ಲೇವಡಿ ಮಾಡಿದರು.

ಪ್ರಧಾನಿ 30 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬರಬೇಕಾದರೆ ಬರೀಗೈಲೇನು ಬಂದಿಲ್ಲ. 30 ಸಾವಿರ ಕೋಟಿ ರೂ.ನ ವಿವಿಧ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ರಾಹುಲ್‌ ಪರ ಹೋರಾಡುವವರು ಉತ್ತರಿಸಿ: ಕಾಂಗ್ರೆಸ್‌ಗೆ ಸಿ.ಟಿ.ರವಿ ಪಂಚ ಪ್ರಶ್ನೆ

ನಮ್ಮ ದೇಶದಲ್ಲಿ ಪ್ರತಿ ಸಾರಿ ಒಂದಿಲ್ಲೊಂದು ಕಡೆ ಚುನಾವಣೆ ಇದ್ದೇ ಇರುತ್ತದೆ. ಚುನಾವಣೆ ಬಂದು ಹೋಗುತ್ತಿರುತ್ತವೆ. ಫಲಿತಾಂಶದಲ್ಲೆ ಕೆಲವೊಮ್ಮೆ ಸೋಲು, ಗೆಲುವು ಸಹಜ. ಚುನಾವಣೆಗಾಗಿಯೇ ಕೆಲಸ ಮಾಡುವವರು ಬೇರೆ ಇದ್ದಾರೆ. ಚುನಾವಣೆಗಾಗಿಯೇ ಕೆಲಸ ಮಾಡುವ ರಾಜಕೀಯ ಪಕ್ಷವೂ ನಮ್ಮದಲ್ಲ, ಸರ್ಕಾರವೂ ನಮ್ಮದಲ್ಲ. ಅದು ಗುರಿ ಸಾಧನೆಗಿರುವ ಸಾಧನಾ ಎಂದು ಭಾವಿಸಿ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವವರು ನಾವು ಎಂದರು.

ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗದಲ್ಲಿ ಭಾಗಿಯಾಗಿದ್ದಾರೆ. ಆ ಮೂಲಕ ನಮ್ಮ ಸಾಂಸ್ಕೃತಿಕ ನಗರಿಯ ಮೇರು ಕಳಸವಿಟ್ಟಂತೆ ಪರಿಚಯಿಸಿದ್ದಾರೆ. ಈ ಸಾಂಸ್ಕೃತಿಕ ನಗರ ಯೋಗಕ್ಕೆ ಪ್ರಸಿದ್ಧವಾದ ಸ್ಥಳ. ಲಕ್ಷಾಂತರ ಜನ ವಿದೇಶದಿಂದ ಬಂದು ತಿಂಗಳುಗಳ ಕಾಲ ಉಳಿದು ಯೋಗ ಕಲಿತು, ಬೇರೆ ಬೇರೆ ಕಡೆ ಯೋಗ ತರಬೇತಿ ನಡೆಸುತ್ತಿದ್ದಾರೆ. ಮೈಸೂರಿನ ಆಹ್ವಾನ ಸ್ವೀಕರಿಸಿ ನರೇಂದ್ರ ಮೋದಿ ಅವರು ಬಂದಿದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

click me!