ಅಕ್ಟೋಬರ್ ಮೊದಲ ವಾರ ಸಚಿವ ಸಿ.ಟಿ.ರವಿ ರಾಜೀನಾಮೆ ?

By Suvarna NewsFirst Published Sep 27, 2020, 12:15 PM IST
Highlights

ಪ್ರವಾಸೋದ್ಯಮ ಖಾತೆ ಸಚಿವರಾದ ಸಿ.ಟಿ ರವಿ  ಅವರು ತಮ್ಮ ಸಚಿವ ಸ್ಥಾನಕ್ಕೆ ಅಕ್ಟೋಬರ್ ಮೊದಲ ವಾರದಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು (ಸೆ.27): ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿ.ಟಿ ರವಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಸಚಿವ ಸಿ ಟಿ ರವಿ ನಾನು ಈ ಸ್ಥಾನವನ್ನು ನಿರೀಕ್ಷೆ ಮಾಡಿರಲಿಲ್ಲ. ಯಾವುದೇ ಆಸೆ ಇಟ್ಟುಕೊಂಡು ಕೆಲಸ ಮಾಡಿದವನಲ್ಲ. ಪಕ್ಷ ನಿಷ್ಟೆ ಪರಿಶ್ರಮದ ಸೂತ್ರ ನನ್ನದು.  ಪಕ್ಷ ನಿಷ್ಟೆಯನ್ನು ಇಲ್ಲಿಯವರೆಗೂ ಬಿಟ್ಟಿಲ್ಲ ಎಂದು ಹೇಳಿದ್ದಾರೆ. 

ನಾನ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಿದ್ದೇನೆ. ಅನಂತ್ ಕುಮಾರ್ ಇಂತಹ ಹುದ್ದೆಯಲ್ಲಿದ್ದವರು. ಅವರ ಎತ್ತರಕ್ಕೆ ನಾನು ಬೆಳೆಯಲಿ ಸಾಧ್ಯವಿಲ್ಲ. ಆದರೆ ಪ್ರಯತ್ನ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಮಾತ್ರವೇ ಇಂತಹ ಅವಕಾಶಗಳೆಲ್ಲಾ ಸಿಗಲು ಸಾಧ್ಯ.  ದೆಹಲಿ ಮಟ್ಟದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ.  ರಾಜ್ಯ ಮಟ್ಟದಲ್ಲಿಯೇ ಕೆಲಸ ಮಾಡುತ್ತೇನೆ.  ನನ್ನ ಮೊದಲ ಆಯ್ಕೆ ಪಕ್ಷ ಸಂಘಟನೆ ಎಂದರು. 

ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯ ನಾಯಕರಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್ ...

ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸುತ್ತೇನೆ. ನನಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ಸೌಭಾಗ್ಯದ ಕ್ಷಣ ಎಂದು ಹೇಳಿದರು

ಸಚಿವ ಸ್ಥಾನಕ್ಕೆ ರಾಜೀನಾಮೆ

ಸಚಿವ ಸ್ಥಾನ ಬಿಡುವುದಕ್ಕೆ ನಾನು ಸಿದ್ಧನಿದ್ದೇನೆ. ಪಾರ್ಟಿ ಯಾವಾಗ ಸೂಚನೆ ನೀಡುತ್ತದೆಯೋ ಆಗ ಸಚಿವ ಸ್ಥಾನದಿಂದ ಇಳಿಯುತ್ತೇನೆ.  ಯಾವ ಗಳಿಗೆಯಲ್ಲಿ ಕೊಟ್ಟರೂ ಸಿದ್ಧನಿದ್ದೇನೆ.  ನನಗೆ ಪಕ್ಷ ಸಂಘಟನೆ ಮುಖ್ಯ ಎಂದರು. 

ಇನ್ನು ಸಚಿವ ಸಂಪುಟ ವಿಸ್ತರಣೆವರೆಗೂ ಸಿ.ಟಿ ರವಿ ರಾಜ್ಯದಲ್ಲಿ ಸಚಿವರಾಗಿ ಮುಂದುವರಿಯುತ್ತಾರೆ. ಸಂಪುಟ ವಿಸ್ತರಣೆ ದನಾಂಕ ಘೋಷಣೆಯಾದ ಬಳಿಕ ರಾಜೀನಾಮೆ ಕೊಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಬಳಿ ಸಿ ಟಿ ರವಿ ಹೇಳಿದ್ದಾರೆ. 
 
ರೈತರಿಗೆ ಅನುಕೂಲಕರ ಕಾಯ್ದೆ

 ನಾಳೆ ರೈತ ಸಮುದಾಯದಿಂದ ಬಂದ್ ಗೆ ಕರೆ ನೀಡಿರುವ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು  10 ವ್ಯಾಪಾರಿಗಳು ಬಂದರೆ ರೈತರಿಗೆ ಒಳ್ಳೆಯದು. ರೈತರ ಮನೆ ಬಾಗಿಲಿಗೆ ವ್ಯಾಪಾರಿಗಳು ಬರುತ್ತಾರೆ. ರೈತರಿಗೆ ನ್ಯಾಯಯುತವಾದ ಬೆಲೆ ಸಿಗುತ್ತದೆ. 

ನಾವು ಬೆಳೆದ ಬೆಳೆಗೆ ನಾವು ಬೆಲೆ ಕಟ್ಟಬೇಕು. ಅಂತಹ ಕಾಲ ಇದೀಗ ಬರುತ್ತಿದೆ.  ರಾಜಕೀಯ ಪ್ರಚೋದನೆಗೆ ಒಳಗಾಗಬಾರದು ರೈತರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಇದನ್ನ ಹೇಳಿದ್ದರು.  ಈಗ ಎಪಿಎಂಸಿ ಕಾಯ್ದೆ ವಿರೋಧಿಸುವುದು ಏಕೆ?..

ದಲ್ಲಾಳಿಗಳಿಂದ ರೈತರನ್ನು ಮುಕ್ತ ಮಾಡಲು ಕೇಂದ್ರ ಈ ಕಾಯ್ದೆ ತರುತ್ತಿದೆ. ರೈತರ ಆದಾಯ ಸಹ ದ್ವಿಗುಣ ಆಗಲಿದೆ.  ರೈತರು ರಾಜಕೀಯ ಪ್ರಭಾವಕ್ಕೊಳಗಾಗಿ ಬಂದ್ ಆಚರಿಸಬಾರದು. ರೈತರು ಕಾಂಗ್ರೆಸ್   ನಾಟಕಕ್ಕೆ ಬಲಿಯಾಗಬಾರದು ಎಂದು ಸಚಿವ ಸಿ.ಟಿ.ರವಿ ಹೇಳಿದರು. 

click me!