
ಬೆಂಗಳೂರು(ಸೆ.27): ಕೈಗಾರಿಕಾ ವಿವಾದಗಳು ಮತ್ತು ಇತರ ಕೆಲವು ಕಾನೂನುಗಳ ತಿದ್ದುಪಡಿ ವಿಧೇಯಕ 2020 ಅಂಗೀಕಾರ ಸಂಬಂಧ ನಡೆದ ಮತದಾನದಲ್ಲಿ ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ಬಿದ್ದುಹೋಯಿತು.
ಈ ವಿಧೇಯಕದ ಸಂಬಂಧ ಪರ ಹಾಗೂ ವಿರೋಧ ವಾದಗಳ ನಡುವೆ ಆರಂಭವಾದ ಗದ್ದಲದ ನಡುವೆ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಅವರು ವಿಧೇಯಕವನ್ನು ಮತಕ್ಕೆ ಹಾಕಿದರು. ಈ ವೇಳೆ ವಿಧೇಯಕದ ಪರ 14 ಮತ ಹಾಗೂ ವಿರುದ್ಧ 26 ಮತಗಳು ಬಿದ್ದವು. ಹೀಗಾಗಿ ವಿಧೇಯಕ ಅಂಗೀಕಾರವಾಗದೆ ಆಡಳಿತ ಪಕ್ಷ ಮುಜುಗರಕ್ಕೆ ಗುರಿಯಾಯಿತು.
ಇದಕ್ಕೂ ಮುನ್ನ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಈ ವಿಧೇಯಕವನ್ನು ಮಂಡಿಸಿ, ಈ ಹಿಂದೆ ಕಾರ್ಖಾನೆಗಳಲ್ಲಿ 100ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಉದ್ಯೋಗದಿಂದ ಕೆಲಸಕ್ಕೆ ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಈಗ ಆ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗಿದೆ. ಇನ್ನು ಕಾರ್ಮಿರ ಅವಧಿ ಮೀರಿದ ಕೆಲಸ (ಓಟಿ) ಸಮಯ ಹೆಚ್ಚಿಸಲಾಗಿದೆ ಎಂದರು.
ಇನ್ನೂ 10 ವರ್ಷ ಕಾಂಗ್ರೆಸ್ಸನ್ನು ವಿರೋಧ ಪಕ್ಷದಲ್ಲಿ ಕೂರಿಸ್ತೇವೆ: ಯಡಿಯೂರಪ್ಪ
ವಿಧೇಯಕದಲ್ಲಿ ಕೆಲ ಬದಲಾವಣೆ ಅಗತ್ಯ:
ಬಿಜೆಪಿಯ ಆಯನೂರು ಮಂಜುನಾಥ ಅವರು, ಒಬ್ಬ ವ್ಯಕ್ತಿಗೆ 8 ಗಂಟೆ ಕೆಲಸದ ಅವಧಿ ನಿಗದಿಗೊಳಿಸಲಾಗಿದೆ. ಓವರ್ ಟೈಂ ಕೆಲಸ ಮಾಡುವುದರಿಂದ ಆತನ ದೈಹಿಕ ಕ್ಷಮತೆ ಹಾಳಾಗುತ್ತದೆ. ಹೀಗಾಗಿ ಈ ವಿಧೇಯಕದಲ್ಲಿ ಕೆಲವೊಂದು ಬದಲಾವಣೆ ಮಾಡಬೇಕೆಂದು ಸಲಹೆ ನೀಡಿದರು.
ತಿಪ್ಪೇಸ್ವಾಮಿ ಮಾತನಾಡಿ, ಕಾರ್ಖಾನೆ ಮಾಲಿಕರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ವಿಧೇಯಕ ಮಂಡಿಸಬಾರದು ಎಂದು ಒತ್ತಾಯಿಸಿದರು. ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಕಾರ್ಮಿಕ ವಿರೋಧಿ ವಿಧೇಕ ಮಂಡಿಸಲಾಗಿದೆ ಎಂದು ಟೀಕಿಸಿದರು.
ಇದು ಕಂಪನಿ ಸರ್ಕಾರ:
ವಿರೋಧ ಪಕ್ಷದ ನಾಯಕದ ಎಸ್.ಆರ್.ಪಾಟೀಲ್ ಮಾತನಾಡಿ, ಈ ವಿಧೇಯಕ ಇದು ಕಂಪನಿ ಸರ್ಕಾರ ಮಾಡುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಸಚಿವ ಶಿವರಾಮ ಹೆಬ್ಬಾರ್ ಅವರು ಮೂರು ಬಾರಿ ವಿಧೇಯಕದ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದರು. ಇದ್ಯಾವುದಕ್ಕೂ ಮುನ್ನಣೆ ನೀಡದ ವಿರೊಧ ಪಕ್ಷದ ಸದಸ್ಯರು ವಿಧೇಯಕ ಹಿಂಪಡೆಯುವಂತೆ ಗದ್ದಲ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.