ಸಿದ್ದರಾಮಯ್ಯನನ್ನು ನಿಮಾನ್ಸ್ ಗೆ ಸೇರಿಸಿದರೆ ಕಾಂಗ್ರೆಸ್ ಉಳಿಯುತ್ತೆ Shobha Karandlaje

By Suvarna NewsFirst Published Apr 8, 2022, 4:22 PM IST
Highlights

ಕಾಂಗ್ರೆಸ್ ಸಿದ್ದರಾಮಯ್ಯ ನವರನ್ನು ನಿಮ್ಹಾನ್ಸ್ ಗೆ ಕಳಿಸಿದರೆ ಆ ಪಕ್ಷ ಉಳಿಯುತ್ತೆ. ಆಸ್ಪತ್ರೆಗೆ ದಾಖಲಾಗದಿದ್ದರೆ ಕಾಂಗ್ರೆಸ್ ಪಕ್ಷವೇ ನಾಶ ಆಗುತ್ತೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ(ಎ.8):  ಅಲ್ ಖೈದಾ (Al Qaeda) ಹೇಳಿಕೆಗೆ ಆರ್‌ಎಸ್ಎಸ್ (RSS) ಕಾರಣ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ (siddaramaiah) ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (shobha karandlaje) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಓರ್ವ ಜವಾಬ್ದಾರಿಯುತ ಜಾಗದಲ್ಲಿ ಇರುವ ವ್ಯಕ್ತಿ, ಅವರು ರಾಜ್ಯದ ವಿರೋಧ ಪಕ್ಷದ ನಾಯಕ. ಭಾರತದ ಸಂವಿಧಾನದಲ್ಲಿ ಮುಖ್ಯಮಂತ್ರಿಯಷ್ಟೇ ವಿರೋಧ ಪಕ್ಷದ ನಾಯಕರಿಗೂ ಜವಾಬ್ದಾರಿ ಇದೆ. ಮುಖ್ಯಮಂತ್ರಿಯಾಗಿ, ವಕೀಲರಾಗಿ ಕೆಲಸ ಮಾಡಿದ ವ್ಯಕ್ತಿ ಸಿದ್ದರಾಮಯ್ಯ, ಅಂತಹಾ ಸಿದ್ದರಾಮಯ್ಯ ಹಿಟ್ ಲಿಸ್ಟ್ ನಲ್ಲಿರುವ ಭಯೋತ್ಪಾದಕ ನ ಬಗ್ಗೆ  ಮಾತನಾಡುತ್ತಾರೆ. ಆರ್ ಎಸ್ ಎಸ್ ಜೊತೆ ಹೋಲಿಕೆ ಮಾಡುತ್ತಾರೆಂದರೆ ನನಗೆ ಹೇಳಲು ಏನೂ ಉಳಿದಿಲ್ಲ. ಕಾಂಗ್ರೆಸ್ ಸಿದ್ದರಾಮಯ್ಯ ನವರನ್ನು ನಿಮ್ಹಾನ್ಸ್ ಗೆ ಕಳಿಸಿದರೆ ಆ ಪಕ್ಷ ಉಳಿಯುತ್ತೆ. ಆಸ್ಪತ್ರೆಗೆ ದಾಖಲಾಗದಿದ್ದರೆ ಕಾಂಗ್ರೆಸ್ ಪಕ್ಷವೇ ನಾಶ ಆಗುತ್ತೆ ಎಂದು ಹೇಳಿದ್ದಾರೆ.

Latest Videos

ಮುಸ್ಕಾನ್ ಬಗ್ಗೆ ಅಲ್ ಖಾಯ್ದಾಗೆ ಮಾಹಿತಿ ಕೊಟ್ಟ ಸಂಘಟನೆ ಯಾವುದು: ಉಡುಪಿಯಿಂದ ಅರಂಭವಾದ ಹಿಜಾಬ್ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ.ನಮ್ಮ ದೇಶಕ್ಕಿಂತ ಮೊದಲು ಪಾಕಿಸ್ಥಾನ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಚರ್ಚೆ ಆರಂಭವಾಗಿತ್ತು. ಇದು ಬೇಕಿತ್ತಾ ಬೇಡ್ವಾ ಎಂಬುವುದನ್ನು ಆ ಸಮುದಾಯ ಯೋಚಿಸಬೇಕು ಎಂದು ಶೋಭಾ ಹೇಳಿದ್ದಾರೆ.

ಯಾದಗಿರಿಯಲ್ಲಿ ಹಿಂದೂಗಳ ನೇತೃತ್ವದಲ್ಲಿಯೇ ಜಮಾಲುದ್ಧಿನ್ ಜಾತ್ರೆ

ಎಲ್ಲಾ ಧರ್ಮದವರು ಭಾರತದಲ್ಲಿ ಒಟ್ಟಾಗಿರಬೇಕು ಎಂಬುವುದು ನಮ್ಮ ಅಪೇಕ್ಷೆ. ಆದರೆ, ಹೈಕೋರ್ಟ್ ತೀರ್ಪು ಮುರಿಯುವವರಿಗೆ ಸರಿಯಾದ ‌ಶಿಕ್ಷೆ‌ ಆಗಬೇಕು. ಮುಸಲ್ಮಾನ ಧರ್ಮದ ಬಡವರನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಆಗುತ್ತಿದೆ. ಬಡ ಹೆಣ್ಣು ಮಕ್ಕಳನ್ನು ಮುಂದಿಟ್ಟು ಧರ್ಮ ಸಂಘರ್ಷ ಮಾಡುವರು ಯೋಚನೆ ಮಾಡಿ. ಮಂಡ್ಯದ ಮುಸ್ಕಾನ್ ಗೆ ಅಲ್ ಕಾಯಿದಾ ಸಪೊರ್ಟ್ ಮಾಡಿದೆ. ಮುಸ್ಕಾನ್ ಬಗ್ಗೆ ಆಲ್ ಖೈದಾ ಕ್ಕೆ ಮಾಹಿತಿ ಕೊಟ್ಟ ಸಂಘಟನೆ ಯಾವುದು? ಯಾವ ಸಂಘಟನೆ ಇದರ ಹಿಂದೆ ಇದೆ ಎಂಬುವುದು ಕೂಡಾ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಹರ್ಷ ಕೊಲೆ ಪ್ರಕರಣದ ನಂತರ ಎನ್ ಐ ಎ ಈ ತನಿಖೆ ನಡೆಸುತ್ತಿದೆ. ಹಿಜಾಬ್ ಮುಂದುವರೆದ ಭಾಗವಾಗಿ ಹರ್ಷ ಕೊಲೆ ಪ್ರಕರಣ ನಡೆದಿದೆ. ಶಿವಮೊಗ್ಗ ದ ರಸ್ತೆಗಳಲ್ಲಿ ಮಚ್ಚು, ಲಾಂಗ್ ಹಿಡಿದು ಪೋಲಿಸರನ್ನು ಬೆದರಿಸಿದ್ದಾರೆ. ಈ ಎಲ್ಲದರ ಕುರಿತು ತನಿಖೆ ಆಗುತ್ತದೆ. ಭಾರತದ ಯುವತಿಯನ್ನು ಬೆಂಬಲಿಸಿ ಅಲ್ ಕಾಯಿದಾ ನೀಡಿರುವ ಹೇಳಿಕೆ ಕುರಿತಾಗಿ ಕೂಡಾ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮತ್ತಷ್ಟು ವಿಳಂಬ!

ಕಾಂಗ್ರೆಸ್ ಆತ್ಮಶುದ್ಧಿ ಮಾಡಿಕೊಳ್ಳಲಿ: ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಆತ್ಮಶುದ್ದಿ ಹೇಳಿಕೆ ವಿಚಾರಕ್ಕೆ ಸಚಿವೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಮೊದಲು ಆತ್ಮಶುದ್ದಿ ಮಾಡಿಕೊಳ್ಳಬೇಕು. ಈಗಾಗಲೇ ಕಾಂಗ್ರೆಸ್‌ದೇಶದಲ್ಲಿ ನಾಶ ಆಗಿದೆ. ಸಿದ್ದರಾಮಯ್ಯನವರನ್ನು ಇಟ್ಟುಕೊಂಡು ನೀವು ಈ ಥರ ಹೇಳಿಕೆ ಕೊಡುತ್ತೀರಾ?  ಕಾಂಗ್ರೇಸ್  ಪಕ್ಷ ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಾ ಇತ್ತು .ಅದನ್ನು ಕೂಡಾ ಮುಗಿಸುವ ಕೆಲಸ ಮಾಡುತಿದ್ದಾರೆ. ಜವಾಬ್ದಾರಿಯುತ ಜಾಗದಲ್ಲಿರುವ ಸಿದ್ದರಾಮಯ್ಯ ಕುರಿತು ಕಾಂಗ್ರೆಸ್ ಹೈ ಕಮಾಂಡ್ ಏನು ಹೇಳುತ್ತೆ ಎನ್ನುವುದನ್ನು ಕಾಂಗ್ರೆಸ್ ಸ್ವಷ್ಟಪಡಿಸಲಿ ಎಂದಿದ್ದಾರೆ.

ಗೃಹಸಚಿವ ಅರಗಗೆ ಕಿವಿಮಾತು: ಜವಾಬ್ದಾರಿಯುತ ಜಾಗದಲ್ಲಿ ಇರುವವರು ತಿಳಿದುಕೊಂಡು ಮಾತಾಡಬೇಕು ಎಂದು ಗೃಹ‌ಸಚಿವ ಅರಗ ಜ್ಞಾನೇಂದ್ರ ಗೆ ಶೋಭಾ ಕಿವಿಮಾತು ಹೇಳಿದ್ದಾರೆ. ಗೃಹ ಸಚಿವರು ಈಗಾಗಲೇ ಕ್ಷಮೆ ಯಾಚನೆ ಮಾಡಿದ್ದಾರೆ. ಆದ್ರೆ ಸಿದ್ದರಾಮಯ್ಯ ನವರು ಕ್ಷಮೆಯಾಚನೆ ಮಾಡುತ್ತಾರಾ? ಅಲ್ ಖೈದಾ ವಿಡಿಯೋ ಹೇಳಿಕೆಗೆ ಸಿದ್ದರಾಮಯ್ಯ ಸರ್ಪೋಟ್ ಇದೆಯಾ? ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಸರ್ಪೋಟ್ ಇದೆಯಾ? ಇದು ನಮ್ಮ ಮುಂದಿರುವ ಪ್ರಶ್ನೆ ಇದರ ಕುರಿತು ಚರ್ಚೆ ಆಗಬೇಕು ಎಂದರು.

ಮಂತ್ರಿ ಯಾಗಿದ್ದೇನೆ ಖುಷಿಯಾಗಿದ್ದೇನೆ: ರಾಜ್ಯಾಧ್ಯಕ್ಷ ಲಿಸ್ಟ್ ನಲ್ಲಿ ತಮ್ಮ ಹೆಸರು  ಪ್ರಸ್ಥಾಪಿರುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕೇಂದ್ರ ಸಚಿವೆ, ಈ ಬಗ್ಗೆ ನನಗೆ ಗೊತ್ತಿಲ್ಲ- ನನಗೆ ಯಾವುದೂ ಇಲ್ಲ.ನಾನು ಮಂತ್ರಿಯಾಗಿದ್ದೇನೆ.  ಚೆನ್ನಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು.

click me!