ಸಿ.ಟಿ.ರವಿ ಲಿಂಗಾಯತ ವಿರೋಧಿ ಅಲ್ಲ; ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾರೆ : ಬಿಜೆಪಿ ವಕ್ತಾರ

By Kannadaprabha NewsFirst Published Mar 19, 2023, 10:27 AM IST
Highlights

ಲಿಂಗಾಯತ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಾದ ಸಿ.ಟಿ. ರವಿಯವರನ್ನು ಚಿಕ್ಕಮಗಳೂರು ಕ್ಷೇತ್ರದ ಕೆಲ ಕಾಂಗ್ರೆಸ್‌ ಮುಖಂಡರು ವೀರಶೈವ - ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಚಿಕ್ಕದೇವನೂರು ರವಿ ಹೇಳಿದರು.

ಕಡೂರು (ಮಾ.19) : ಲಿಂಗಾಯತ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಾದ ಸಿ.ಟಿ. ರವಿಯವರನ್ನು ಚಿಕ್ಕಮಗಳೂರು ಕ್ಷೇತ್ರದ ಕೆಲ ಕಾಂಗ್ರೆಸ್‌ ಮುಖಂಡರು ವೀರಶೈವ - ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಚಿಕ್ಕದೇವನೂರು ರವಿ(Chikkadevanuru ravi) ಹೇಳಿದರು.

ಪಟ್ಟಣದ ಸುರುಚಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ನಾಯಕರಾದ ಸಿ.ಟಿ.ರವಿ(CT Ravi) ಅವರು ಜಿಲ್ಲೆಯಲ್ಲಿ ವೀರಶೈವ-ಲಿಂಗಾಯತ(Veerashaiva lingayata) ಸಮುದಾಯಕ್ಕೆ ಅನೇಕ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ . ಲಿಂಗಾಯತ ಸಮಾಜದ ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌ ಅವರನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಮತ್ತು ಕಡೂರಿನ ಬೆಳ್ಳಿಪ್ರಕಾಶ್‌ ಅವರನ್ನು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಗಿ ಎಚ್‌.ಸಿ. ಕಲ್ಮರುಡಪ್ಪ ಅವರನ್ನು ಮಾಡುವಲ್ಲಿ ರವಿಯವರ ಪಾತ್ರ ಬಹು ಮುಖ್ಯವಾಗಿದೆ ಎಂದರು.

Latest Videos

KARNATAKA ELECTION 2023: ಕಾಫಿನಾಡಲ್ಲಿ ಮಹಿಳಾ ಮತದಾರರೇ ಮೇಲು!

ಜಿಲ್ಲೆಯಲ್ಲಿನ ಎಲ್ಲಾ ಸಮಾಜಗಳಿಗೂ ಆದ್ಯತೆ ನೀಡಿದ್ದು, ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಜಿ.ಪಂ. ಅಧ್ಯಕ್ಷರನ್ನಾಗಿ ಅನೇಕ ವೀರಶೈವ - ಲಿಂಗಾಯತರು ಹಾಗೂ ಇತರೆ ಸಮಾಜದವರನ್ನು ಗುರುತಿಸಿದ್ದಾರೆ. ಹಿಂದಿನ ಮೂರು ಚುನಾವಣೆಯಲ್ಲಿ ವೀರಶೈವ-ಲಿಂಗಾಯತರ ಸಮಾಜವು ಸಿ.ಟಿ.ರವಿ ಅವರ ಗೆಲುವಿಗೆ ಶ್ರಮಿಸಿದ್ದು, ಬರಲಿರುವ ಚುನಾವಣೆಯಲ್ಲಿಯೂ ಸಮಾಜವು ಅವರನ್ನು ಬೆಂಬಲಿಸಲಿದೆ ಎಂದರು.

ಇದೀಗ ಚುನಾವಣೆಯ ಸಂದರ್ಭದಲ್ಲಿ ರವಿಯವರ ಬೆಳವಣಿಗೆ ಸಹಿಸದ ಕಾಂಗ್ರೆಸ್‌ನ ಕೆಲವರು ವೀರಶೈವ-ಲಿಂಗಾಯತರು ಬೆಂಬಲಿಸುವುದಿಲ್ಲ ಎಂಬ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಮಾಡುತ್ತಾ ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಅಪಪ್ರಚಾರ ಮಾಡುವುದೇ ಕೊನೆಯ ಅಸ್ತ್ರ ಎಂದು ಟೀಕಿಸಿದರು.

ಟಿಕೆಟ್‌ ನೀಡಿಕೆ ಕುರಿತಂತೆ ಬಿ.ಎಸ್‌. ಯಡಿಯೂರಪ್ಪ(BS Yadiyurappa) ಮತ್ತು ಬಿ.ವೈ. ವಿಜಯೇಂದ್ರ(BY Vijayendra) ಬಗ್ಗೆ ಸಿ.ಟಿ.ರವಿ ಅವರು ಟಿಕೆಟ್‌ ನೀಡುವ ವಿಷಯದಲ್ಲಿ ರಾಷ್ಟ್ರೀಯ ಸಮಿತಿ ತೀರ್ಮಾನವೇ ಅಂತಿಮ ಎಂದಿದ್ದಾರೆಯೇ ಹೊರತು ಟೀಕಿಸಿಲ್ಲ ಎಂದು ಉತ್ತರಿಸಿದರು.

ಚಿಕ್ಕಮಗಳೂರು ಅತಿರಥರ ಅಖಾಡ: ಲಿಂಗಾಯತ VS ಒಕ್ಕಲಿಗ ಸ್ಪರ್ಧೆಗೆ ವೇದಿಕೆಯಾಗುತ್ತಾ ಕಾಫಿನಾಡು..?

ಸಿ.ಟಿ.ರವಿ ಅವರು ಅನೌಪಚಾರಿಕವಾಗಿ ಮಾತನಾಡಿದ್ದನ್ನು ಕಾಂಗ್ರೆಸ್ಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚಾರಕ್ಕೆ ಮುಂದಾಗಿರುವುದು ಅವರ ಕೀಳುಮಟ್ಟದ ರಾಜಕೀಯ ತೋರಿಸುತ್ತದೆ. ಇದಕ್ಕೆ ಜನರೇ ಎಲ್ಲದಕ್ಕೂ ಉತ್ತರಿಸುತ್ತಾರೆ ಎಂದರು. ಬಿಜೆಪಿ ಮುಖಂಡ ಜಿಪಂ ಮಾಜಿ ಸದಸ್ಯ ಕೆ.ಆರ್‌.ಮಹೇಶ್‌ ಒಡೆಯರ್‌, ಬೀರೂರು ಹರ್ಷ ಮತ್ತಿತರರು ಇದ್ದರು

click me!