ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರಗೆ ಕ್ಲೀನ್‌ಚಿಟ್ ಸಿಕ್ಕ ಬಗ್ಗೆ ಸಿಟಿ ರವಿ ಸ್ಫೋಟಕ ಹೇಳಿಕೆ!

Published : Nov 26, 2026, 03:12 PM ISTUpdated : Nov 26, 2026, 03:25 PM IST
CT Ravi explosive statement Over B Nagendra clean chit

ಸಾರಾಂಶ

ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ನಾಗೇಂದ್ರಗೆ ಸಿಐಡಿ ಕ್ಲೀನ್‌ಚಿಟ್ ನೀಡಿದೆ ಎಂಬ ವಿಚಾರಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಡಿ ಮತ್ತು ಸಿಐಡಿ ತನಿಖೆಯಲ್ಲಿ ವ್ಯತ್ಯಾಸವಿದ್ದು, ಕಾಂಗ್ರೆಸ್ ಒತ್ತಡದಿಂದ ಈ ಕ್ಲೀನ್‌ಚಿಟ್ ಬಂದಿದೆ ಎಂದು ಆರೋಪಿಸಿದರು.

ಕೋಲಾರ (ನ.26): ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಪಟ್ಟಿ ಸಲ್ಲಿಸಿದ್ದು, ಪ್ರಮುಖ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಪರೋಕ್ಷವಾಗಿ ಕ್ಲೀನ್‌ಚಿಟ್ ನೀಡಲಾಗಿದೆ ಎಂಬ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ವಾಲ್ಮೀಕಿ ನಿಗಮ ಹಗರಣ ವಿಚಾರವಾಗಿ ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಸಿಟಿ ರವಿ ಅವರು, 'ಇದ್ದ ಮೂವರಲ್ಲಿ ಕದ್ದವರು ಯಾರು ಅನ್ನೋ ಉತ್ತರ ಹುಡುಕಿಲ್ಲ. ಇಡಿ ಹಾಗೂ ಸಿಐಡಿ ತನಿಖೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ನಾಗೇಂದ್ರನ ಪಾತ್ರದ ಬಗ್ಗೆ ಇಡಿ ತನಿಖೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾರು ಶೋ ರೂಮ್, ಬಾರ್, ಚಿನ್ನದ ಅಂಗಡಿಗೆ ಹಣ ವರ್ಗಾವಣೆ ಬಗ್ಗೆ ಹೇಳಲಾಗಿದೆ. ಆದರೆ ಇವೆಲ್ಲ ಸಿಐಡಿ ಉಲ್ಲೇಖಿಸಿಲ್ಲ, ಹೀಗಾಗಿ ನಮಗೆ ಸಿಐಡಿ ಮೇಲಿನ ಅಭಿಪ್ರಾಯ ಬದಲಾಗ್ತಿದೆ. ಸಿಐಡಿಗೆ ಕ್ಲೀನ್ ಚಿಟ್ ಕೊಡುವ ಒತ್ತಡ ಹಾಕಿದ್ದಾರೆ ಎಂದು ಅನಿಸುತ್ತಿದೆ. ಕರ್ನಾಟಕದ ವಾಲ್ಮೀಕಿ ನಿಗಮದ ಬಹುಕೋಟಿ ಹಣವನ್ನು ತೆಲಂಗಾಣ ಚುನಾವಣೆಯಲ್ಲಿ ಬಳಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾತ್ರವು ಇರಬಹುದು ಅಂತಾ ನನಗೆ ಅನುಮಾನವಿದೆ ಎಂದರು.

ಮಂತ್ರಿಸ್ಥಾನಕ್ಕಾಗಿ ಬಿ ನಾಗೇಂದ್ರ ಬ್ಲಾಕ್‌ಮೇಲ್?

ಈಗ ಕ್ಲಿನ್‌ಚಿಟ್ ಬೆನ್ನಲ್ಲೇ ಮತ್ತೆ ಮಂತ್ರಿಗಿರಿಗೆ ಲಾಬಿ ನಡೆದಿದೆ. ಮಂತ್ರಿಸ್ಥಾನಕ್ಕಾಗಿ ಬಿ ನಾಗೇಂದ್ರನೇ ಈಗ ಬೆದರಿಕೆ ಹಾಕುತ್ತಿದ್ದಾನೆ. ಮಂತ್ರಿ ಸ್ಥಾನ ಕೊಡದಿದ್ರೆ ವಾಲ್ಮೀಕಿ ನಿಗಮ ಹಗರಣದಲ್ಲಿ ಏನೇನಾಗಿದೆ ಎಲ್ಲವನ್ನೂ ಹೇಳ್ತೀನಿ ಅಂತಾ ನಾಗೇಂದ್ರ ಬೆದರಿಕೆ ಹಾಕಿದ್ದರು ಅಂತಾ ಕೆಲವು ಮೂಲಗಳಿಂದ ನನಗೆ ಮಾಹಿತಿ ಬಂದಿದೆ. ಈಗ ನಾಗೇಂದ್ರ ಆ ಸತ್ಯ ಬಾಯಿ ಬಿಡುವ ಭಯದಿಂದಾಗಿ ನಾಗೇಂದ್ರ ಪರವಾಗಿ ಕ್ಲೀನ್‌ಚಿಟ್ ನೀಡುವಂತೆ ಸಿಐಡಿ ಮೇಲೆ ಕಾಂಗ್ರೆಸ್ ಒತ್ತಡ ಹಾಕಿರಬಹುದು ಎಂದು ಸಿಟಿ ರವಿ ಅನುಮಾನ ವ್ಯಕ್ತಪಡಿಸಿದರು.

ಇನ್ನು ಧಾರವಾಡ ಯೋಗೀಶ್ ಗೌಡ ಕೊಲೆ ಪ್ರಕರಣ ವಿಚಾರ ಪ್ರಸ್ತಾಪಿಸಿದ ಸಿಟಿ ರವಿ ಅವರು, ಭಾರತ ಸಂವಿಧಾನದಲ್ಲಿ ತೀರ್ಪು ಕೊಡಬೇಕಾದವರು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು, ನ್ಯಾಯಾಂಗದಲ್ಲಿ ನ್ಯಾಯಾಲಯ. ಇದರ ಬಗ್ಗೆ ಹೆಚ್ಚು ಮಾತನಾಡಲ್ಲ, ನ್ಯಾಯಾಲಯ ತೀರ್ಪು ಗೌರವಿಸಬೇಕು. ಚುನಾವಣೆ ವ್ಯವಸ್ಥೆ ಎಲ್ಲರಿಗೂ ಅನ್ವಯಿಸುವಂತೆ ಇವರಿಗೂ ಅನ್ವಯಿಸುತ್ತೆ.

ಚುನಾವಣೆ ವ್ಯವಸ್ಥೆ ಎಲ್ಲರಿಗೂ ಅನ್ವಯಿಸುವಂತೆ, ಇವರಿಗೂ ಅನ್ವಯಿಸುತ್ತೆ. ಆ ಕುರಿತು ಹೆಚ್ಚಿಗೆ ಮಾತನಾಡೋಕೆ ಹೋಗಲ್ಲ ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿತ್ತು ಸಿಎಂ ನೆನಪಿಸಿಕೊಳ್ಳಲಿ:

ಇನ್ನು ಆಶಾ ಕಾರ್ಯಕರ್ತೆಯರ ಹೋರಾಟ ಕುರಿತಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಸಿಟಿ ರವಿ ಅವರು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದರು ಎಂಬುದನ್ನ ಸಿಎಂ ನೆನಪು ಮಾಡಿಕೊಳ್ಳಲಿ ಎಂದು ತಿವಿದರು.

ನುಡಿದಂತೆ ನಡೆದಿದ್ದೇವೆ ಎಂದು ಬೆನ್ನುತಟ್ಟಿಕೊಂಡ ಕಾಂಗ್ರೆಸ್‌ನವರು ಎರಡೂ ನಾಲಗೆ ಅವರ ಆಗಬಾರದು. ಸರ್ಕಾರದ ಖಜಾನೆಯಿಂದ ಎಳೆದು ಬಳೆದು ಗ್ಯಾರಂಟಿ ಸಮಿತಿಗೆ ಕೊಡ್ತಿದ್ದೀರಿ. ಆದರೆ ಕಷ್ಟಪಟ್ಟು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡದೆ ಖಜಾನೆ ಖಾಲಿ ಅಂತಾ ತೋರಿಸ್ತೀರಾ? ನಿಮ್ಮ ಕಾರ್ಯಕರ್ತರ ಗಂಜಿ ಕೇಂದ್ರಕ್ಕಾಗಿ ಸರ್ಕಾರದ ಖಜಾನೆ ದುರುಪಯೋಗ ಮಾಡ್ಕೊಳ್ತಿದ್ದೀರಿ. ಆದರೆ ಬಾಯಲ್ಲಿ ಮಾತ್ರ ಮಹಿಳೆಯರ ಪರ ಅಂತಾ ಬೂಟಾಟಿಕೆ ಬೇರೆ. ನಿಮ್ಮ ಯೋಗ್ಯತೆಗೆ ಒಬ್ಬ ಮಹಿಳೆಗೆ ಸಚಿವ ಸ್ಥಾನ ಕೊಡೋಕೆ ಆಗಲಿಲ್ಲ, ನಿಮ್ಮದ್ಯಾವ ಸೀಮೆ ಮಹಿಳಾ ಪರ ಸರ್ಕಾರ? ಮಹಿಳಾ ಮೀಸಲಾತಿ ತಡೆದವರೇ ನೀವೇ ಅಲ್ಲವಾ? ನಿಮ್ಮಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಕಿಡಿಕಾರಿದರು.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿಟಿ ರವಿ ತಿರುಗೇಟು

ಇನ್ನು ಆರೆಸ್ಸೆಸ್ ಕಳಿಸೋ ಸಂದೇಶದಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ ಅವರು, ಆರೆಸ್ಸೆಸ್ ಒಂದು ದೇಶಭಕ್ತಿ ಸಂಘಟನೆ. ಪ್ರಿಯಾಂಕ್ ಖರ್ಗೆ ತಾನು ಮಾಡಬೇಕಾದ ಕೆಲಸ ಬಿಟ್ಟು ಇನ್ನೇನೋ ಮಾಡಲು ಹೊರಟವ್ರೆ. ರಾಜ್ಯದಲ್ಲಿ ಡ್ರಗ್ಸ್ ಜಾಲ ಮಿತಿ ಮೀರುತ್ತಿದೆ. ಹೊರ ರಾಜ್ಯದ ಪೊಲೀಸರು ಬಂದು ಇಲ್ಲಿ ದಾಳಿ ಮಾಡುತ್ತಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಕರ್ನಾಟಕವನ್ನ ಸ್ಲೀಪರ್ ಸೆಲ್ ಮಾಡಿಕೊಳ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಆದ್ಯತೆ ಇಲ್ಲಿ ಯಾವುದು ಇರಬೇಕಿತ್ತು? ಇಷ್ಟೆಲ್ಲ ಆದ್ಮೇಲೂ ನೀವು ಏನು ಮಾಡಲು ಆಯ್ತು? ಆರೆಸ್ಸೆಸ್ ಪಥಸಂಚಲನ ನಿಲ್ಲಿಸಲು ಆಗಲಿಲ್ಲ, ಆ ಕಡೆ ಗೃಹಸಚಿವರಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವೂ ಮಾಡಲಿಲ್ಲ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು: ಬಾಲಚಂದ್ರ ಜಾರಕಿಹೊಳಿ ಹೇಳಿಕೆಯ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಸಚಿವ ಈಶ್ವರ್ ಖಂಡ್ರೆ!
ನಾಗೇಂದ್ರಗೆ ಸಚಿವ ಸ್ಥಾನ ಮರಳಿ ಸಿಗುತ್ತಾ? ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದ ಗೃಹ ಸಚಿವ ಪ್ರಿಯಾಂಕ್ ಖರ್ಗೆ