ಎಚ್‌.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್‌

By Kannadaprabha News  |  First Published Nov 1, 2024, 8:29 AM IST

ರಾಜ ವಯಸ್ಸಾದ ಮೇಲೆ ತನ್ನ ಮಗನಿಗೆ ಪಟ್ಟಕಟ್ಟುವ ರೀತಿ ಕುಮಾರಸ್ವಾಮಿ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರಿಗೆ ತಮ್ಮ ಮಗನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಮನಸ್ಸಿದ್ದ ಕಾರಣಕ್ಕೆ ಕೊನೆ ಕ್ಷಣದವರೆಗೆ ಟಿಕೆಟ್ ನೀಡದೇ ಸತಾಯಿಸಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆರೋಪ ಮಾಡಿದರು. 


ಚನ್ನಪಟ್ಟಣ (ನ.01): ರಾಜ ವಯಸ್ಸಾದ ಮೇಲೆ ತನ್ನ ಮಗನಿಗೆ ಪಟ್ಟಕಟ್ಟುವ ರೀತಿ ಕುಮಾರಸ್ವಾಮಿ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರಿಗೆ ತಮ್ಮ ಮಗನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಮನಸ್ಸಿದ್ದ ಕಾರಣಕ್ಕೆ ಕೊನೆ ಕ್ಷಣದವರೆಗೆ ಟಿಕೆಟ್ ನೀಡದೇ ಸತಾಯಿಸಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆರೋಪ ಮಾಡಿದರು. ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, ಲೋಕಸಭಾ ಚುನಾವಣೆಯ ವೇಳೆ ನೀವು ಚುನಾವಣೆಯಲ್ಲಿ ಕೆಲಸ ಮಾಡಿ, ಮುಂದೆ ನಿಮ್ಮನ್ನೇ ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಟಿಕೆಟ್ ನೀಡದ ಕಾರಣ, ಅಂತಿಮವಾಗಿ ನಾನು ನಮ್ಮ ಮೂಲಪಕ್ಷಕ್ಕೆ ಹಿಂದಿರುಗಿ ಅಭ್ಯರ್ಥಿಯಾಗಿದ್ದೇನೆ. ನೀವು ಇಂದಿನ ರಾಜಕೀಯ ಪರಿಸ್ಥಿತಿ ಅರಿತುಕೊಳ್ಳುತ್ತೀರಾ ಎಂಬ ವಿಶ್ವಾಸವಿದೆ ಎಂದರು.

ಅಭಿವೃದ್ಧಿ ಕುಂಠಿತ: ಕುಮಾರಸ್ವಾಮಿ ಕ್ಷೇತ್ರ ಶಾಸಕರಾದ ಮೇಲೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಚಿಂತಿಸಲಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಿಲ್ಲ. ನಾನು ಜನರಿಗಾಗಿ ನೀರಾವರಿ ಯೋಜನೆ ತಂದೆ. ಆದರೆ, ಕುಮಾರಸ್ವಾಮಿ ಆಡಳಿತದಲ್ಲಿ ಅದನ್ನು ಅವರು ಮುಂದುವರಿಸಲೇ ಇಲ್ಲ. ಅವರು ಹೊಸದಾಗಿ ನೀರು ತರುವ ಅವಶ್ಯಕತೆ ಇರಲಿಲ್ಲ. ಇರುವಂತ ವ್ಯವಸ್ಥೆಯನ್ನು ಸರಿಪಡಿಸಬೇಕಿತ್ತು. ಅಧಿಕಾರಿಗಳನ್ನು ತಾಕೀತು ಮಾಡಿ, ತಾಲೂಕಿನ ಅಭಿವೃದ್ಧಿಗೆ ಅವರು ಪ್ರಯತ್ನ ಮಾಡಲೇ ಇಲ್ಲ ಎಂದು ಆರೋಪಿಸಿದರು.

Tap to resize

Latest Videos

undefined

ನಾನು ತಾಲೂಕಿನವನು: ಜನಸಾಮಾನ್ಯರ ಭವಣೆ ಏನು ಎಂದು ಯೋಚಿಸಲ್ಲ. ಒಬ್ಬ ಜನಪ್ರತಿನಿಧಿಯಾಗಿ ಅವರು ಸೋತಿದ್ದಾರೆ. ತಾಲೂಕಿನ ಜನ ಯಾವ ಮಾನದಂಡದ ಮೇಲೆ ಅವರ ಮಗನಿಗೆ ಮತ ನೀಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ನಾನು ಈ ತಾಲೂಕಿನವನು, ಇಲ್ಲೇ ಹುಟ್ಟಿ ಬೆಳೆದವನು, ತಾಲೂಕಿನ ಅಭಿವೃದ್ಧಿಗೆ ನನ್ನ ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಮ್ಮವರೇ ಆದ ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದಾರೆ. ಈ ತಾಲೂಕಿಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಆ ಅಭಿವೃದ್ಧಿಯಲ್ಲಿ ನಾನು ಪಾಲುದಾರರನಾಗಬೇಕು ಎಂದು ಯೋಚಿಸಿ ಕಾಂಗ್ರೆಸ್ ಸೇರಿ, ನಿಮ್ಮ ಮುಂದೆ ಬಂದಿದ್ದೇನೆ. ಈ ಬಾರಿ ನನ್ನು ನನ್ನನ್ನು ಗೆಲ್ಲಿಸಿ. ನಿಮ್ಮ ಹಿತಕ್ಕಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು. ಇದೇ ವೇಳೆ ಅವರು ಕೋಡಂಬಳ್ಳಿ ಜಿಪಂ ವ್ಯಾಪ್ತಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಂಡ್ಯ ಶಾಸಕ ರವಿಕುಮಾರ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಇತರರು ಇದ್ದರು.

ಜ್ಞಾನ, ವಿಜ್ಞಾನದ ಭಾಷೆಯಾಗಿ ಕನ್ನಡ: ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಲೇಖನ

ಸುರೇಶ್ ಸೋಲಿಗೆ ಸಿಪಿವೈ ಪಶ್ಚಾತಾಪ!: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್ ಅವರ ಸೋಲಿಗೆ ನಾನು ಕಾರಣಕರ್ತನಾದೆ ಎಂಬ ಪಶ್ಚಾತಾಪ ನನ್ನನ್ನು ಕಾಡುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಬಲ್ಲಾಪಟ್ಟಣ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಭಾವ ಡಾ.ಮಂಜುನಾಥ್ ಅವರ ಗೆಲುವಿಗೆ ನಾನು ಹಗಲು ರಾತ್ರಿ ಹೋರಾಟ ಮಾಡಿದ್ದೆ. ಆದರೆ, ಈಗ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಪ್ರಾಮಾಣಿಕ ದೈತ್ಯ ಕೆಲಸಗಾರ ಡಿ.ಕೆ.ಸುರೇಶ್ ಅವರ ಸೋಲಿಗೆ ನಾನು ಕಾರಣಕರ್ತನಾದೆನೇನೋ ಎಂಬ ನೋವು ಕಾಡುತ್ತಿದೆ ಎಂದರು. 

click me!