2 ಬಾರಿ ಸೋಲನ್ನು ನೆನೆದು ಕಣ್ಣೀರು ಹಾಕಿದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ

By Kannadaprabha News  |  First Published Nov 1, 2024, 6:29 AM IST

ಮಂಡ್ಯ ಮತ್ತು ರಾಮನಗರ ಎರಡು ಚುನಾ‍ವಣೆಯಲ್ಲಿ ನಾನು ಸೋತ್ತಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆ ಗೊತ್ತಿಲ್ಲ. ಮಾಜಿ ಪ್ರಧಾನಿ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದರು. 


ಚನ್ನಪಟ್ಟಣ (ನ.01): ಮಂಡ್ಯ ಮತ್ತು ರಾಮನಗರ ಎರಡು ಚುನಾ‍ವಣೆಯಲ್ಲಿ ನಾನು ಸೋತ್ತಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆ ಗೊತ್ತಿಲ್ಲ. ಮಾಜಿ ಪ್ರಧಾನಿ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದರು. ಚನ್ನಪಟ್ಟಣದ ಕನ್ನಮಂಗಲ ಗ್ರಾಮದಲ್ಲಿ ಪ್ರಚಾರದ ವೇಳೆ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ನಿಖಿಲ್ ಕುಮಾರಸ್ವಾಮಿ ಭಾವುಕರಾದರು. ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂದುಕೊಂಡಿದ್ದೆ. ಆದರೆ ಸಾಕಷ್ಟು ನೋವುಗಳಿವೆ ಎಂದು ಭಾಷಣದ ವೇಳೆ ಕಣ್ಣೀರು ಹಾಕಿದರು.

ನಾನು ಎರಡು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ. ಜನ ನನ್ನ ಪರವಾಗಿ ಮತ ಹಾಕಿದ್ದಾರೆ. ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ. ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಬಾರಿ ಯುವಕನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಹಿ ಘಟನೆಯನ್ನು ನೆನೆಸಿಕೊಂಡು ನನ್ನ ಮೂಲಕ ಉತ್ತರ ಕೊಡಬೇಕು ಎಂದು ಕಾರ್ಯಕರ್ತರ ಭಾವನೆಯಾಗಿತ್ತು. 

Latest Videos

undefined

ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಏನಾಗಿತ್ತು ಅಂತ ಎಲ್ಲರಿಗೂ ಗೊತ್ತಿದೆ ಎಂದರು. ಆಗ ನಾನು ದೇವೇಗೌಡರಿಗೆ ಸಾಹೇಬರಿಗೆ ಮನವಿ ಮಾಡಿದೆ. ಪ್ರಾದೇಶಿಕ ಪಕ್ಷ ಕಟ್ಟುವುದೇ ಕಷ್ಟ ಇದೆ. ರೈತ ಪರವಾಗಿ ಕಾಳಜಿ ಇಟ್ಟುಕೊಂಡು ಈ ಪಕ್ಷವನ್ನು ಕಟ್ಟಿದ್ದಾರೆ. ನಂತರ ಕುಮಾರಣ್ಣ ಅವರು ಅಧಿಕಾರ ಇರಲಿ ಇಲ್ಲದೆ ಇರಲಿ ರೈತರ ಪರವಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ರೈತರ ಸಾಲ ಮನ್ನಾದಂತಹ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ ಎಂದರು.

ಜ್ಞಾನ, ವಿಜ್ಞಾನದ ಭಾಷೆಯಾಗಿ ಕನ್ನಡ: ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಲೇಖನ

ಕಟ್ಟಕಡೆಯ ಕಾರ್ಯಕರ್ತನನ್ನು ಗುರುತಿಸುತ್ತೇವೆ: ಕಳೆದ ಲೋಕಸಭೆಯಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ರಾಜ್ಯಾಧ್ಯಂತ ಪ್ರವಾಸ ಮಾಡುತ್ತಿದ್ದೇನೆ. ಪಕ್ಷದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಬೇಕೆಂಬುದು ನನ್ನ ಅಭಿಲಾಷೆ. ಪ್ರಾದೇಶಿಕ ಪಕ್ಷ ಕಟ್ಟುವುದು ಕಷ್ಟ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಪಕ್ಷ ರಾಜ್ಯ ದಲ್ಲಿ ಉಳಿದುಕೊಂಡಿದೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ನನ್ನ ಸ್ಪರ್ಧೆ ಅನಿರೀಕ್ಷಿತ ಬೆಳವಣಿಗೆ. ಈ ಚುನಾವಣೆಯಲ್ಲಿ ಕೊನೆ ಹಂತದಲ್ಲಿ ಎರಡು ಪಕ್ಷದ ಮುಖಂಡರ ನಿರ್ಣಯದಿಂದ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ನಿಮ್ಮೇಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

click me!