ಗೋಹತ್ಯೆ ನಿಷೇಧ ವಿಧೇಯಕ ಪರಿಷತ್‌ನಲ್ಲಿ ಮಂಡನೆಯೇ ಆಗ್ಲಿಲ್ಲ! ಕಾದು ನೋಡಿ

By Suvarna NewsFirst Published Dec 10, 2020, 11:32 PM IST
Highlights

ಪರಿಷತ್ ನಲ್ಲಿ ಮಂಡನೆಯಾಗದ ಗೋಹತ್ಯೆ ನಿಷೇಧ ವಿಧೇಯಕ/ ಕಲಾಪ ಮುಕ್ತಾಯ/ ಮುಂದಿನ ಸಚಿವ ಸಂಪುಟ ಸಭೆವರೆಗೂ ಕಾಯಿರಿ ಎಂದ ಸಚಿವ ಅಶೋಕ/ ಗೋ ಸಂರಕ್ಷಣೆ ಹೋರಾಟಕ್ಕೆ ಸಿಕ್ಕಿದ್ದು ಅರ್ಧ ಜಯ

ಬೆಂಗಳೂರು(ಡಿ.  10)  ಗೋ ಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಪಾಸ್ ಆಗಿದ್ದು ವಿಧಾನಪರಿಷತ್ ನಲ್ಲಿಯೂ ಪಾಸ್ ಆಗಿ ರಾಜ್ಯಪಾಲರ ಬಳಿ ತೆರಳುತ್ತದೆ ಎಂದು ಭಾವಿಸಿದ್ದವರಿಗೆ ಸಣ್ಣ ಶಾಕ್ ನ್ನು ಸರ್ಕಾರವೇ ನೀಡಿದೆ.

ಗುರುವಾರದ ಪರಿಷತ್ ಕಲಾಪದಲ್ಲಿ  ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯೇ ಆಗಿಲ್ಲ. ಸಭಾಪತಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಇನ್ನು ಏನು ಮಾಡುತ್ತಾರೆ.. ಎಂಬ ಪ್ರಶ್ನೆ ಎದ್ದೇಳುವಂತೆ ಮಾಡಿದೆ.

ಗೋಹತ್ಯೆ ನಿಷೇಧ ಬಿಲ್ ನಲ್ಲಿ ಏನಿದೆ?

ಅಧಿವೇಶನ ಕೊನೆಯಾಗಿದೆ. ಇನ್ನೊಂದು ಕಡೆ  ಸಚಿವ ಅಶೋಕ್  ಗುರುವಾರ ಮಂಡನೆ ಮಾಡಿದ್ದರೆ ವಿಪಕ್ಷಗಳು  ವಿಧೇಯಕ ಬೀಳಿಸುವ ಕೆಲಸ ಮಾಡುವ ಸಾಧ್ಯತೆ ಇತ್ತು ಎಂದು  ಹೇಳಿಕೆ ನೀಡಿದ್ದಾರೆ. ಹಾಗಾಗಿ ಮುಂದಿನ ಸಚಿವ ಸಂಪುಟ ಸಭೆವರೆಗೆ ಕಾದು ನೋಡಿ ಎಂದಿದ್ದಾರೆ.

ಬಹುರ್ಚಿತ ಗೋಹತ್ಯೆ ನಿಷೇಧ  ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿ ಪಾಸ್ ಆಗಿದ್ದರೂ ಪರಿಷತ್ ನಲ್ಲಿ ಮಂಡನೆಯಾಗದೆ  ಉಳಿದುಕೊಂಡಿದೆ. 

click me!