ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೇಲೆ FIR

By Suvarna NewsFirst Published Dec 10, 2020, 5:32 PM IST
Highlights

ಬಿಜೆಪಿ ಯುವ ಘಟಕದ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮೇಲೆ ಎಫ್‌ಐಆರ್/ ಪಶ್ಚಿಮ ಬಂಗಾಳ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ/ ಉಳಿದ ನಾಯಕರ ಮೇಲೆಯೂ ದೂರು ದಾಖಲಿಸಿಕೊಂಡ ಪೊಲೀಸರು

ಸಿಲಿಗುರಿ/ ಪಶ್ಚಿಮ ಬಂಗಾಳ(ಡಿ.  10)   ಬಿಜೆಪಿ ಯುವ ಘಟಕದ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕೈಲಾಶ್ ವಿಜಯ್ ವರ್ಗೀಯ, ದಿಲೀಪ್ ಘೋಷ್ ಮತ್ತು ಇತರ ಹಲವಾರು ಮುಖಂಡರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು  ಎಫ್‌ಐಆರ್ ದಾಖಲಿಸಿದ್ದಾರೆ.

ಡಿಸೆಂಬರ್ 7 ರಂದು ಸಿಲಿಗುರಿಯಲ್ಲಿ ನಡೆದ ಪಕ್ಷದ 'ಉತ್ತರ ಕನ್ಯಾ ಅಭಿಜಾನ್" ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದದ್ದು ಇವರು ಪ್ರೋತ್ಸಾಹ ನೀಡಿದ್ದಾರೆ ಎಂಬ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೆರವಣಿಗೆ ವೇಳೆ ಬಿಜೆಪಿ ಕಾರ್ಯಕರ್ತನ ಹತ್ಯೆ

ನ್ಯೂ ಜಲ್ಪೈಗುರಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ವೀಕ್ಷಕ ಕೈಲಾಶ್ ವಿಜಯವರ್ಗಿಯಾ, ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿರುದ್ಧ ಸು ಮೋಟೋ ಪ್ರಕರಣ ದಾಖಲಾಗಿದೆ. ಸೌಮಿತ್ರಾ ಖಾನ್, ಸಯಂತನ್ ಬೋಸ್, ಸುಕಂತಾ ಮಜುಂದರ್, ನಿಸಿತ್ ಪ್ರಮಣಿಕ್, ರಾಜು ಬಿಸ್ಟಾ, ಜಾನ್ ಬಿರ್ಲಾ, ಖೋಗನ್ ಮುರ್ಮು, ಸಾಂಕು ದೇಬ್ ಪಾಂಡಾ ಮತ್ತು ಪ್ರವೀಣ್ ಅಗರ್ವಾಲ್ ಮತ್ತು ಇತರರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಹಿಂಸಾಚಾರಕ್ಕೆ ಪ್ರೋತ್ಸಾಹಿಸಿದ್ದು,  ಕಾನೂನು ಸುವ್ಯವಸ್ಥೆ ಧಕ್ಕೆ, ಪೊಲೀಸರೊಂದಿಗೆ ಘರ್ಷಣೆ ಮತ್ತು ಸರ್ಕಾರದ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಲು ಮುಂದಾಗಿದ್ದ ಆರೋಪದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ನೀತಿ ವಿರೋಧಿಸಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಈ  ವೇಳೆ ಪೊಲೀಸರು ಅವರನ್ನು ತಡೆದಾಗ ಘರ್ಷಣೆ ಉಂಟಾಗಿತ್ತು. ಸಚಿವಾಲಯದ ಬಳಿ ಎರಡು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯುವ ಯತ್ನ ಮಾಡಲಾಗಿಯಿತು.  ಪೊಲೀಸರು ಅಶ್ರವಾಯು ಸಿಡಿಸಿ, ಜಲಫಿರಂಗಿ ನೆರವಿನಿಂದ ಪರಿಸ್ಥಿತಿ ಹತೋಟಿಗೆ ತಂದಿದ್ದರು. 

 

click me!