ಎಎಪಿಯಿಂದ ಭ್ರಷ್ಟಾಚಾರ ಮುಕ್ತ ಆಡಳಿತ ಮುಖ್ಯಮಂತ್ರಿ ಚಂದ್ರು ಹೇಳಿಕೆ

By Kannadaprabha News  |  First Published Feb 26, 2023, 4:15 AM IST

ಕಾಂಗ್ರೆಸ್‌ ಖದೀಮರು, ಸ್ವಾರ್ಥಿಗಳ ಹಾಗೂ ಬಿಜೆಪಿ ಭ್ರಷ್ಟರ ಪಕ್ಷ, ಬಿಜೆಪಿ ರಾಮ ಮಂದಿರದ ಹೆಸರಿನಲ್ಲಿ ಚುನಾವಣೆ, ಮಾ. 4ರಂದು ದಾವಣಗೆರೆಯಲ್ಲಿ ಆಪ್‌ ಬೃಹತ್‌ ಸಮಾವೇಶ: ಮುಖ್ಯಮಂತ್ರಿ ಚಂದ್ರು 


ಕೊಪ್ಪಳ(ಫೆ.26): ಕಾಂಗ್ರೆಸ್‌ ಮತ್ತು ಬಿಜೆಪಿ ಖದೀಮರು, ಸ್ವಾರ್ಥಿಗಳುÜ ಹಾಗು ಭ್ರಷ್ಟರ ಪಕ್ಷವಾಗಿವೆ. ಬಿಜೆಪಿ ರಾಮ ಮಂದಿರದ ಹೆಸರಿನಲ್ಲಿ ಚುನಾವಣೆ ಮಾಡುತ್ತಿದೆ. ರಾಜ್ಯದಲ್ಲಿರುವ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು, ಆಮ್‌ ಆದ್ಮಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡುವ ವಿಶ್ವಾಸವಿದೆ. ನಮಗೆ ಅಧಿಕಾರ ಕೊಡಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲಿದ್ದೇವೆ ಎಂದು ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಹಾಗೂ ಪಂಜಾಬ್‌ನಲ್ಲಿ ಎಎಪಿ ನುಡಿದಂತೆ ನಡೆದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ಆರೋಗ್ಯ,ಶಿಕ್ಷಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ರಾಜ್ಯದಲ್ಲೂ ಮಾದರಿ ಆಡಳಿತ ನಡೆಸಲು ಪ್ರಸಕ್ತ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ. ಹೀಗಾಗಿ ಮತದಾರರ ಬಳಿ ನಮಗೆ ಆಶೀರ್ವಾದ ಮಾಡಲು ಮನವಿ ಮಾಡುತ್ತಿದ್ದೇವೆ. ಮಾ.4ರಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ದಾವಣಗೆರೆಗೆ ಆಗಮಿಸಲಿದ್ದು, ಅಂದು ಸಾವಿರಾರು ಕಾರ್ಯಕರ್ತರು ಪಕ್ಷ ಸೇರ್ಪಡೆಯಾಗಲಿದ್ದಾರೆ. ಈ ಸಮಾವೇಶದಲ್ಲಿ 50 ಸಾವಿರ ಜನರು ಸೇರಲಿದ್ದಾರೆ ಎಂದರು.

Tap to resize

Latest Videos

undefined

ಕೆಕೆಆರ್‌ಡಿಬಿ ಅಂದ್ರೆ ಕಳ್ಳ ಖದೀಮರ ರಿಜಿನಲ್‌ ಡೆವಲಪ್ಮೆಂಟ್‌ ಬೋರ್ಡ್‌: ಮುಖ್ಯಮಂತ್ರಿ ಚಂದ್ರು

ಕ್ರಿಮಿನಲ್‌ ಹಿನ್ನೆಲೆ ಇರೋರು, ಭ್ರಷ್ಟಾಚಾರ ಮಾಡಿದವರಿಗೆ ನಮ್ಮಲ್ಲಿ ಟಿಕೆಟ್‌ ಇಲ್ಲ. ಎಎಪಿ ದೆಲ್ಲಿ ರಾಜ್ಯದ ರೀತಿ ಆಡಳಿತ ನಡೆಸಲಿದೆ ಎಂದರಲ್ಲದೇ, ನನಗೀಗ 70 ವರ್ಷ ನಾನು ಚುನಾವಣೆಗೆ ನಿಲ್ಲಲ್ಲ. ಆದರೆ ರಾಜಕಾರಣದಿಂದ ನಿವೃತ್ತಿ ಆಗಲ್ಲ. ಸಕ್ರಿಯ ರಾಜಕಾರಣದಲ್ಲಿ ಇರುವೆ ಎಂದರು.

ರಾಜ್ಯ ಕಾರ್ಯದರ್ಶಿ ಶಿವಪ್ಪ ಜೋಗಿನ್‌ ಮಾತನಾಡಿ, ರಾಜ್ಯದ ಜನತೆ ಬದಲಾವಣೆಗಾಗಿ ಸಜ್ಜಾಗಿದ್ದಾರೆ. ದೇಶದ ಜನರಲ್ಲಿ ಅರವಿಂದ ಕೇಜ್ರಿವಾಲ್‌ ಹೊಸ ಭರವಸೆ ಮೂಡಿಸಿದ್ದು, ದೆಹಲಿಯಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲೂ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ರಾಜದ್ಯ ಮೂಲೆ ಮೂಲೆಯಿಂದ ದಾವಣಗೆರೆ ಕಾರ್ಯಕ್ರಮಕ್ಕೆ ಮುಂಚೂಣಿ ಕಾರ್ಯಕರ್ತರು ಆಗಮಿಸಲಿದ್ದಾರೆ. 25 ಸಾವಿರ ಕಾರ್ಯಕರ್ತರು ಅಂದು ಪಕ್ಷಕ್ಕಾಗಿ ತನು-ಮನದಿಂದ ದುಡಿವ ಬಗ್ಗೆ ಪ್ರತಿಜ್ಞಾ ವಿಧಿ ಸ್ವಿಕರಿಸಲಿದ್ದಾರೆ. ಕೊಪ್ಪಳ ಜಿಲ್ಲೆಯಿಂದಲೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರುದ್ರಯ್ಯ ನವಲಿಹಿರೇಮಠ, ಲೋಹಿತ್‌, ಹುಸೇನ್‌ಸಾಬ್‌ ಗಂಗನಾಳ ಸೇರಿ ಇತರರಿದ್ದರು.

click me!