ರಾಜಕೀಯ ನಿವೃತ್ತಿ ಸುಳಿವು ಕೊಟ್ಟ ಸಹಕಾರ ಸಚಿವ ಕೆ.ಎನ್. ರಾಜಣ್ಣ

By Sathish Kumar KH  |  First Published Jun 23, 2024, 7:11 PM IST

ರಾಜ್ಯದ ಪ್ರಭಲ ಸಮುದಾಯಗಳಿಗೆ ತಕ್ಕಂತೆ ಮೂರು ಉಪಮುಖ್ಯಮಂತ್ರಿಗಳು ಬೇಕು ಎಂದು ಪ್ರತಿಪಾದನೆ ಮಾಡುತ್ತಲೇ ಬಂದಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ.


ಬಾಗಲಕೋಟೆ (ಜೂ.23): ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದ ಪ್ರಭಲ ಸಮುದಾಯಗಳಿಗೆ ತಕ್ಕಂತೆ ಮೂರು ಉಪಮುಖ್ಯಮಂತ್ರಿಗಳು ಬೇಕು ಎಂದು ಪ್ರತಿಪಾದನೆ ಮಾಡುತ್ತಲೇ ಬಂದಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಈಗ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ.

ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ನಾನು ಉಪಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ. ನನ್ನದು ಡಿಸಿಎಂ ಹುದ್ದೆ ಮೇಲೆ ಕಣ್ಣು ಇಲ್ಲವೇ ಇಲ್ಲ. ಮುಖ್ಯವಾಗಿ ಇನ್ನುಮುಂದೆ ಯಾವ ಚುನಾವಣೆಯಲ್ಲಿ ನಿಲ್ಲುವವನೂ ಅಲ್ಲ ಎಂದು ಹೇಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆಯ ಬಗ್ಗೆ ಮಾತನಾಡಿದ್ದಾರೆ. ಆದರೆ, ರಾಜಕೀಯ ನಿವೃತ್ತಿಯ ಬಗ್ಗೆ ಯಾವುದೇ ಖಚಿತ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಈಗ ಸುಳಿವು ನೀಡಿದ್ದು, ಮುಂದಿನ ದಿನಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನು ರಾಜಕೀಯಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬರುತ್ತಿವೆ.

Latest Videos

undefined

ಹಾಸನ ಉಸ್ತುವಾರಿಯಾಗಿ ಸಂತ್ರಸ್ಥರಿಗೆ ಧೈರ್ಯ ಹೇಳಿದ್ಮೇಲೆ ಅಶ್ಲೀಲ ಕೇಸ್ ಹೊರಬರ್ತಿವೆ: ಕೆ.ಎನ್. ರಾಜಣ್ಣ

ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತನಾಡಿ, ಯಾವಾಗಲೂ ಕೂಡ ಅಧಿಕಾರ ಹಂಚಿಕೊಂಡಾಗ ಮಾತ್ರ ಎಲ್ಲ ಸಮುದಾಯಗಳಿಗೂ ಆ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಬರುತ್ತದೆ. ಸುಮ್ನೆ ಯಾರೋ ಕೆಲವೇ ಜನ ಅಧಿಕಾರ ಇಟ್ಕೊಂಡು ಬೇರೆಯವರಿಗೆ ಅಧಿಕಾರ ಇಲ್ದೆ ಇದ್ದಾಗ ಆ ಪಕ್ಷದ ಬಗ್ಗೆ ಪ್ರೀತಿ ಆ ಜನರಲ್ಲಿ ಬರತಕ್ಕಂತದ್ದು ಕಡಿಮೆಯಾಗುತ್ತದೆ. ಆ ದೃಷ್ಟಿಯಿಂದ ‌ನಾನು ಪ್ರತಿಪಾದನೆ ಮಾಡಿದ್ದೇನೆ. ಯಾರೆಲ್ಲ ಲಿಂಗಾಯತ ಸಮುದಾಯ ಇರಬಹುದು, ಎಸ್ ಸಿ ,ಎಸ್ ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯ ಆಗಿರಬಹುದು. ಈ ಸಮುದಾಯಗಳಿಗೆ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದರು.

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಸಮುದಾಯದ ಓಲೈಕೆಗೆ ಎರಡರಿಂದ ಮೂರು ಉಪಮುಖ್ಯಮಂತ್ರಿಗಳನ್ನು ಮಾಡಿದಂತಹ ಉದಾಹರಣೆಗಳು ಇವೆ. ಇನ್ನು ಡಿಸಿಎಂ ಮಾಡಿದಾಕ್ಷಣ ಹೊಸದಾಗಿ  ಬೇರೆ ಯಾವ ಸೌಲಭ್ಯ ಇರೋದಿಲ್ಲ. ಕ್ಯಾಬಿನೆಟ್ ಮಂತ್ರಿಗೆ ಏನಿರುತ್ತದೊ ಅವರಿಗೂ ಅದೇ ಇರತಕ್ಕಂತದ್ದು. ಆದರೂ ಒಂದು ಸಮುದಾಯದ ಜನರಲ್ಲಿ ಗೌರವಪೂರ್ವ ಮನೋಭಾವನೆ ಬೆಳೆಯುತ್ತದೆ. ನಮ್ಮ‌ ಸಮುದಾಯಕ್ಕೂ ಪ್ರಾತಿನಿದ್ಯ ದೊರೆತಿದೆ ಎಂದು ಭಾವಿಸುತ್ತಾರೆ. ಆ ದೃಷ್ಟಿಯಲ್ಲಿ ನಮಗೂ ಕೂಡ ಹೆಮ್ಮೆ ಎಂಬ ಮನಸ್ಥಿತಿಯಲ್ಲಿ ಇರುತ್ತಾರೆ ಎಂದು ತಿಳಿಸಿದರು.

ಸರ್ಕಾರದ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಸಿಗಬೇಕು: ಸಂಸದ ಬೊಮ್ಮಾಯಿ

ಈಗ ನಮ್ಮ ಸರ್ಕಾರದಲ್ಲಿ ಡಿಸಿಎಂ ಹುದ್ದೆಗಳ್ನು ಹೆಚ್ಚಿಸುವ ಮೂಲಕ ಆಯಾ ಸಮುದಾಯದ ಜನರ ಪ್ರೀತಿ ಗಳಿಸಿಕೊಳ್ಳಬಹುದು. ಅದಕ್ಕಾಗಿ ನಾನು ಕನಿಷ್ಠ ಮೂರು ಡಿಸಿಎಂ ಹುದ್ದೆಗಳನ್ನು ನೀಡಬೇಕು ಎಂದು ಪ್ರತಿಪಾದನೆ ಮಾಡುತ್ತಿದ್ದೇನೆ. ಈ ಬಗ್ಗೆ ಮೊನ್ನೆ ಸಚಿವ ಜಮೀರ್ ಅಹ್ಮದ್ ಖಾನ್, ಮತ್ತೊಬ್ಬ ಸಚಿವ ಸತೀಶ್ ಜಾರಕಿಹೊಳಿ ಕೂಡ ಇದನ್ನೇ ಹೇಳಿದ್ದಾರೆ. ನಾನು ಕೂಡ ಇದನ್ನೇ ಹೇಳಿದ್ದೇನೆ. ಬಹಳಷ್ಟು ಕ್ಯಾಬಿನೆಟ್ ಸಚಿವರ ಸಹಮತವೂ ಡಿಸಿಎಂ ಸ್ಥಾನಗಳನ್ನು ಹೆಚ್ಚಳ ಮಾಡುವುದರ ಬಗ್ಗೆ ಇದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ‌ಬದ್ದರಾಗಿದ್ದೇವೆ ಎಂದು ಹೇಳಿದರು.

click me!