ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿಸಲು ಸಂಚು: ಸಚಿವ ಪ್ರಿಯಾಂಕ್ ಖರ್ಗೆ

By Kannadaprabha NewsFirst Published Aug 18, 2024, 2:57 PM IST
Highlights

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಕರ್ನಾಟಕ ರಾಜ್ಯಪಾಲರು ನಿರ್ಧಾರ ಮಾಡಿದ್ದು, ಸಿದ್ದರಾಮಯ್ಯರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರ ನಡೆಸಿರುವ ಸಂಚು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. 

ಕಲಬುರಗಿ (ಆ.18): ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಕರ್ನಾಟಕ ರಾಜ್ಯಪಾಲರು ನಿರ್ಧಾರ ಮಾಡಿದ್ದು, ಸಿದ್ದರಾಮಯ್ಯರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರ ನಡೆಸಿರುವ ಸಂಚು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ದುರ್ಬಲಗೊಳಿಸಲು ರಾಜಭವನವನ್ನು ಬಿಜೆಪಿ ಟೂಲ್ ಆಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರು ತಮ್ಮ ರಾಜಕೀಯ ನಾಯಕರನ್ನು ಸಮಾಧಾನಪಡಿಸಲು ಸಾಂವಿಧಾನಿಕ ಬಿಕ್ಕಟ್ಟನ್ನು ಹುಟ್ಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ತನ್ನ ಎಲ್ಲಾ ಅಸ್ತ್ರ ಪ್ರಯೋಗಿಸುತ್ತಿದೆ. ಆದರೆ ನಮ್ಮ ಪರವಾಗಿರುವ ಸಂವಿಧಾನದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಯೋಜನೆ ಜಾರಿಗೆ ನೀಲಿ ನಕ್ಷೆ: ಜಿಲ್ಲೆಯಲ್ಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಸಲುವಾಗಿ ನೀಲಿ ನಕ್ಷೆ ತಯಾರಿಸಲಾಗುತ್ತಿದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಆಳಂದ ಪುರಸಭೆ ಕೇಂದ್ರ ಪುರಸ್ಕೃತ್ ಅಮೃತ್ 2.0 ಯೋಜನೆಯ ಆಳಂದ ಪಟ್ಟಣಕ್ಕೆ ಅಮರ್ಜಾ ಅಣೆಕಟ್ಟು ಮೂಲದಿಂದ ನೀರು ಸರಬರಾಜು ಅಭಿವೃದ್ಧಿಯ ಯೋಜನೆಯ ಶಂಕುಸ್ಥಾಪನೆ ವೀರಶೈವ ಲಿಂಗಾಯತ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಸಮಾರಂಭದಲ್ಲಿ ಉದ್ಫಾಟಿಸಿ ಮಾತನಾಡಿದರು.

Latest Videos

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ದೊಡ್ಡ ಷಡ್ಯಂತ್ರ: ಸಚಿವ ದಿನೇಶ್‌ ಗುಂಡೂರಾವ್‌

ಆಳಂದ್ ಪಟ್ಟಣ ಹಾಗೂ ತಾಲೂಕಿನ ಅಭಿವೃದ್ದಿಗೆ ಬದ್ಧರಾಗಿದ್ದು ಶಾಸಕ ಬಿ.ಆರ್. ಪಾಟೀಲ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದಾಗಿ ಹೇಳಿ ಅವರು ಬಿ.ಆರ್.ಪಾಟೀಲರ ಸಲಹೆ ಹಾಗೂ ಸಹಕಾರ ನನಗೆ ಬೇಕಿದೆ. ಅವರ ಸಲಹೆಯಂತೆ ಅಭಿವೃದ್ದಿ ಕಾರ್ಯ ಮಾಡುವುದಾಗಿ ಹೇಳಿದರು. ಶಾಸಕ ಎಂ ವೈ ಪಾಟೀಲ ಮಾತನಾಡಿ, ಭೀಮಾ ನದಿಯಿಂದ ಅಫಜಲ್ ಪುರ ಕ್ಷೇತ್ರದ ಪಟ್ಟಣ ಹಾಗೂ ಇತರೆ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ರೂ 300 ಕೋಟಿ ಅನುದಾನ ಒದಗಿಸಿರುವ ಖರ್ಗೆಯವರಿಗೆ ಅಭಿನಂದಿಸಿದರು. ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ ರೂ 350 ಕೋಟಿ ವೆಚ್ಚದಲ್ಲಿ 18 ತಿಂಗಳಲ್ಲಿ ಭೀಮಾ ನದಿಯಿಂದ ಅಮರ್ಜಾ ಆಣೆಕಟ್ಟಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಹೇಳಿದ್ದರು. 

Muda Scam: ಸಿದ್ದರಾಮಯ್ಯ ಕಾನೂನುರೀತ್ಯಾ ಕ್ಲೀನ್‌ ಚಿಟ್‌ ಪಡೆಯಲಿ: ಮಾಜಿ ಡಿಸಿಎಂ ಈಶ್ವರಪ್ಪ

ಆದರೆ, ನಂತರ ಬಂದ ಸರ್ಕಾರ ಆಸಕ್ತಿ ತೋರಿಸದ ಕಾರಣ ಯೋಜನೆ ಮುಗಿಸಲು ವರ್ಷಗಳೇ ಬೇಕಾದವು. ಭೀಮಾ ನದಿಗೆ ಮಹಾರಾಷ್ಟ್ರ ದಲ್ಲಿ ಹಲವು ಕಡೆ ಡ್ಯಾಂ ಕಟ್ಟಿರುವುದರಿಂದ ಹೊರ ಹರಿವು ಕಡಿಮೆಯಾಗಿದೆ. ಹಾಗಾಗಿ ತಾಲೂಕಿನ ಹಲವಾರು ಗ್ರಾಮಗಳಿಗೆ ನೀರಿನ ಕೊರತೆಯಾಗುತ್ತಿತ್ತು. ಸದರಿ ಯೋಜನೆಯ ಮೂಲಕ ಬಹುಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು. ಆಳಂದ ಪಟ್ಟಣಕ್ಕೆ ರೂ 86 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸಿ ಮನೆಮನೆಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆ ಎರಡು ವರ್ಷದಲದಲಿಯೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಯೋಜನೆ ಉದ್ಘಾಟನೆಗೆ ಸಚಿವ ಪ್ರಿಯಾಂಕ್ ಖರ್ಗೆ ಬರಬೇಕು ಎಂದರು.

click me!