Vijayapura Election Result 2023: ವಿಜಯಪುರದಲ್ಲಿ ಕಾಂಗ್ರೆಸ್‌ ಸಿಕ್ಸ್‌, ಕಮಲ, ಜೆಡಿಎಸ್‌ ಸಿಂಗಲ್‌ಗೆ ಫಿಕ್ಸ್‌..!

By Kannadaprabha News  |  First Published May 14, 2023, 1:02 PM IST

ಆರು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಆನೆಬಲ ಬಂದಂತಾಗಿದೆ. ಬಿಜೆಪಿ ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡು ತೀರಾ ಸೊರಗಿದೆ. ಜೆಡಿಎಸ್‌ ತನ್ನ ಏಕೈಕ ಸ್ಥಾನ ಉಳಿಸಿಕೊಂಡು ತನಗೆ ಏನೂ ಆಗಿಲ್ಲ ಎಂದು ಬೀಗುತ್ತಿದೆ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂತಾದ ಘಟಾನುಘಟಿಗಳು ಬಂದು ಹೋದರೂ ಬಿಜೆಪಿಗೆ ಮತ ಪರಿವರ್ತನೆ ಆಗಲೇ ಇಲ್ಲ. 


ರುದ್ರಪ್ಪ ಆಸಂಗಿ

ವಿಜಯಪುರ(ಮೇ.14): ಜಿಲ್ಲೆಯ 8 ವಿಧಾನಸಭೆ ಮತ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದ್ದು, 6 ಕಾಂಗ್ರೆಸ್‌, ತಲಾ ಒಂದೊಂದು ಸ್ಥಾನವನ್ನು ಜೆಡಿಎಸ್‌, ಬಿಜೆಪಿ ಸ್ಥಾನ ಪಡೆದುಕೊಂಡಿವೆ. ಕಾಂಗ್ರೆಸ್‌ ಪಕ್ಷ ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆದಿದೆ. ಬಿಜೆಪಿ ಕೇವಲ ಒಂದೇ ಸ್ಥಾನ ಉಳಿಸಿಕೊಂಡು ಹೀನಾಯ ಸೋಲುಂಡಿದೆ.

Tap to resize

Latest Videos

ಆರು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಆನೆಬಲ ಬಂದಂತಾಗಿದೆ. ಬಿಜೆಪಿ ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡು ತೀರಾ ಸೊರಗಿದೆ. ಜೆಡಿಎಸ್‌ ತನ್ನ ಏಕೈಕ ಸ್ಥಾನ ಉಳಿಸಿಕೊಂಡು ತನಗೆ ಏನೂ ಆಗಿಲ್ಲ ಎಂದು ಬೀಗುತ್ತಿದೆ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂತಾದ ಘಟಾನುಘಟಿಗಳು ಬಂದು ಹೋದರೂ ಬಿಜೆಪಿಗೆ ಮತ ಪರಿವರ್ತನೆ ಆಗಲೇ ಇಲ್ಲ. ಜಿಲ್ಲೆಯಲ್ಲಿ ಈ ಸಲ ಮೋದಿ ಮೋಡಿ ನಡೆಯಲಿಲ್ಲ. ಕಾಂಗ್ರೆಸ್‌ ಪಕ್ಷದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂತಾದ ಗಣ್ಯರು ಜಿಲ್ಲೆಗೆ ಆಗಮಿಸಿ ಮತದಾರ ಮನವೊಲಿಸುವಲ್ಲಿ ಯಶಸ್ಸು ಕಂಡಿರುವ ಪರಿಣಾಮ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲು ಸಹಾಯಕಾರಿಯಾಯಿತು.

BAGALKOT ELECTION RESULT 2023: ಬಾಗಲಕೋಟೆಯಲ್ಲಿ ಐದರಲ್ಲಿ ಕಾಂಗ್ರೆಸ್‌, ಎರಡರಲ್ಲಿ ಬಿಜೆಪಿಗೆ ಗೆಲವು

2018ರಲ್ಲಿ ಚುನಾವಣೆಯಲ್ಲಿ ಬಿಜೆಪಿ 4, ಕಾಂಗ್ರೆಸ್‌ 3 ಹಾಗೂ ಜೆಡಿಎಸ್‌ 1 ಸ್ಥಾನ ಪಡೆದುಕೊಂಡಿತ್ತು. ಆದರೆ, ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್‌ 6 ಸ್ಥಾನಗಳನ್ನು ಪಡೆದುಕೊಂಡು ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 2018ರಲ್ಲಿ ನಾಲ್ಕು ಸ್ಥಾನ ಹೊಂದಿದ್ದ ಬಿಜೆಪಿ ಈ ಚುನಾವಣೆಯಲ್ಲಿ 3 ಸ್ಥಾನಗಳನ್ನು ಕಳೆದುಕೊಂಡು ವಿಜಯಪುರ ನಗರ ಮತ ಕ್ಷೇತ್ರದ ಒಂದೇ ಸ್ಥಾನ ಉಳಿಸಿಕೊಂಡಿದೆ. 

ಕಳೆದ ಚುನಾವಣೆಯಲ್ಲಿ ಬಿಜೆಪಿ ವಿಜಯಪುರ, ಮುದ್ದೇಬಿಹಾಳ, ದೇವರಹಿಪ್ಪರಗಿ, ಸಿಂದಗಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ವಿಜಯಪುರ ನಗರ ಮತ ಕ್ಷೇತ್ರ ಹೊರತುಪಡಿಸಿ ಉಳಿದ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ಜೆಡಿಎಸ್‌ ನಾಗಠಾಣ ಮೀಸಲು ಕ್ಷೇತ್ರ ಕಳೆದುಕೊಂಡಿದೆ. ಆದರೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ತನ್ನ 1 ಸ್ಥಾನ ಉಳಿಸಿಕೊಂಡಿದೆ. 

ಈ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ನಷ್ಟವಾಗಿದೆ. ಕಾಂಗ್ರೆಸ್‌ ಬಬಲೇಶ್ವರ, ಬಸವನಬಾಗೇವಾಡಿ, ಇಂಡಿ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜೊತೆಯಲ್ಲಿ ಈ ಸಲದ ಚುನಾವಣೆಯಲ್ಲಿ ಸಿಂದಗಿ, ಮುದ್ದೇಬಿಹಾಳ, ನಾಗಠಾಣ ಮೀಸಲು ಮತಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಜೆಡಿಎಸ್‌ಗೆ ಕಳೆದ ಚುನಾವಣೆಯಲ್ಲಿ ಒಂದೇ ಸ್ಥಾನ ಲಭಿಸಿತ್ತು. ಈ ಚುನಾವಣೆಯಲ್ಲಿಯೂ ಅದು ಒಂದೇ ಕ್ಷೇತ್ರಉಳಿಸಿಕೊಂಡಿದೆ. ನಾಗಠಾಣ ಮೀಸಲು ಕ್ಷೇತ್ರದ ಬದಲು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಜಯ ಗಳಿಸಿದೆ.

click me!