ಉಪಚುನಾವಣೆ: ಅತ್ಯಾಚಾರದ ಆರೋಪಿಗೆ ಟಿಕೆಟ್ ವಿರೋಧಿಸಿದ ಮಹಿಳಾ ಕಾರ್ಯಕರ್ತೆ ಮೇಲೆ ಹಲ್ಲೆ

By Suvarna NewsFirst Published Oct 11, 2020, 2:34 PM IST
Highlights

ಉಪಚುನಾವಣೆಗೆ ರೇಪ್ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದನ್ನ ವಿರೋಧಿಸಿದ ಮಹಿಳಾ ಕಾರ್ಯಕರ್ತೆ ಮೇಲೆಯೇ ಕೈ ನಾಯಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಡಿಯೋರಿಯಾ (ಉತ್ತರ ಪ್ರದೇಶ), (ಅ.11​): ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಮಹಿಳಾ ಕಾರ್ಯಕರ್ತೆಗೆ ಸ್ವಪಕ್ಷೀಯರೇ ಥಳಿಸಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. 

ಉತ್ತರ ಪ್ರದೇಶದ ಉಪಚುನಾವಣೆಗೆ ಸ್ಪರ್ಧಿಸಲು ಮುಕುಂದ್ ಭಾಸ್ಕರ್ ಎಂಬಾತನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ ಆತನ ವಿರುದ್ಧ ಅತ್ಯಾಚಾರದ ಆರೋಪವಿದ್ದು, ಟಿಕೆಟ್ ನೀಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತೆ ತಾರಾ ಯಾದವ್ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ತಾರಾ ಯಾದವ್ ಮೇಲೆ ಸ್ವಪಕ್ಷೀಯರೇ ಥಳಿಸಿ ಹಲ್ಲೆ ಮಾಡಿದ್ದಾರೆ.

ಕಾಂಗ್ರೆಸ್ ತೊರೆಯುತ್ತಾರಾ ಎಂ.ಬಿ.ಪಾಟೀಲ್ ..?

ಅತ್ಯಾಚಾರದ ಆರೋಪಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆದಿದೆ. ಈಗ ನಾನು ಪ್ರಿಯಾಂಕಾ ಗಾಂಧಿ ಕ್ರಮ ಕೈಗೊಳ್ಳುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ತಾರಾ ಯಾದವ್ ತಿಳಿಸಿದ್ದಾರೆ. 

ತಾರಾ ಯಾದವ್ ಮೇಲೆ ನಡೆದಿರುವ ಹಲ್ಲೆಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ತಾರಾ ಯಾದವ್ ಮೇಲೆ ನಡೆದ ಹಲ್ಲೆ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದ್ದರೆ, ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆಯನ್ನು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

Empowering Women, the Way . . .

This is how Women are treated in a Party that is owned by Sonia Gandhi, and .

Where is the Outrage from the Lutyens Media and Leftover Liberals? pic.twitter.com/VBB90CPfOb

— C T Ravi 🇮🇳 ಸಿ ಟಿ ರವಿ (@CTRavi_BJP)
click me!