ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಎಂ.ಬಿ. ಪಾಟೀಲ್‌ ವಿಶ್ವಾಸ

By Govindaraj S  |  First Published Jun 10, 2022, 10:23 PM IST

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹೇಳಿದರು.


ಕೆ.ಆರ್‌. ನಗರ (ಜೂ.10): ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹೇಳಿದರು. ಮೈಸೂರಿನಿಂದ ಹಾಸನಕ್ಕೆ ತೆರಳುವ ವೇಳೆ ಕೆ.ಆರ್‌. ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಮತ್ತು ಪಕ್ಷದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದು ನಮ್ಮ ಪಕ್ಷಕ್ಕೆ ಅಧಿಕಾರದ ನೀಡಲು ತೀರ್ಮಾನಿಸಿದ್ದಾರೆ ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಜನಾನುರಾಗಿ ನಾಯಕರಾಗಿರುವ ಕಾಂಗ್ರೆಸ್‌ ಪಕ್ಷದ ಯುವ ನೇತಾರ ಡಿ. ರವಿಶಂಕರ್‌ ಗೆಲುವು ಸಾಧಿಸಲಿದ್ದು ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲು ನಾನು 2 ದಿನ ಇಲ್ಲಿಯೇ ಮೊಕ್ಕಾಂ ಮಾಡುತ್ತೇನೆ ಎಂದು ಅವರು ತಿಳಿಸಿದರು. ರಾಜ್ಯಸಭಾ ಚುನಾವಣೆ ಜಾತ್ಯಾತೀತ ಮತ್ತು ಜಾತಿವಾದಿ ಪಕ್ಷದ ನಡುವೆ ನಡೆಯುತ್ತಿದ್ದು, ಶಾಸಕರು ಆತ್ಮಸಾಕ್ಷಿಗೆ ಅನುಗುಣವಾಗಿ ಮತಚಲಾಯಿಸುವರು. ನಮ್ಮ ಎರಡನೇ ಅಭ್ಯರ್ಥಿ ಮನ್ಸೂರ್‌ ಆಲಿಖಾನ್‌ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos

undefined

Ramya vs DKS ಕಾಂಗ್ರೆಸ್‌ ಕಿರಿಯರ ಟ್ವೀಟ್‌ವಾರ್‌, ಹಿರಿಯರ ಒಗ್ಗಟ್ಟು!

ಜೆಡಿಎಸ್‌ ಪಕ್ಷಕ್ಕಿಂತ ಮೊದಲು ನಾವೇ ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಮಾಡಿದ್ದು ಅವರೇ ನಮ್ಮನ್ನು ಕೇಳದೆ ಸ್ಪರ್ಧೆಗೆ ಇಳಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಜಾತ್ಯತೀತ ತತ್ವದಲ್ಲಿ ನಂಬಿಕೆ ಇದ್ದು ಕೋಮುವಾದಿ ಪಕ್ಷವನ್ನು ದೂರಯಿಡುವ ಮನಸಿದ್ದರೆ ಜೆಡಿಎಸ್‌ನವರು ನಮಗೆ ಬೆಂಬಲ ನೀಡಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಅಭ್ಯರ್ಥಿಯ ಗೆಲುವಿನ ಹಾದಿ ಸಲೀಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣಕ್ಕೆ ಆಗಮಿಸಿದ ಎಂ.ಬಿ. ಪಾಟೀಲ್‌ ಅವರನ್ನು ನೂರಾರು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಜಯಕಾರದ ಘೋಷಣೆ ಕೂಗಿ ಸ್ವಾಗತಿಸಿದರು. ಡಿ. ರವಿಶಂಕರ್‌ ನೇತೃತ್ವದಲ್ಲಿ ಅದ್ದೂರಿಯಾಗಿ ಸನ್ಮಾನ ಮಾಡಿ ಬೀಳ್ಕೊಟ್ಟರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌. ಮಹದೇವ್‌, ಉದಯಶಂಕರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಎಂ.ಜೆ. ರಮೇಶ್‌, ಪ್ರಧಾನ ಕಾರ್ಯದರ್ಶಿ ರಾಜೇಗೌಡ, ವಕ್ತಾರ ಸೈಯದ್‌ಜಾಬೀರ್‌, ನಗರ ಯುವ ಕಾಂಗ್ರೆಸ್‌ ಮುಂಜು ಕೆಂಚಿ, ಮಾಜಿ ಅಧ್ಯಕ್ಷ ಬೋಜರಾಜು, ಪುರಸಭೆ ಸದಸ್ಯರಾದ ಶಿವುನಾಯಕ್‌, ಜಾವೀದ್‌ಪಾಷ, ಸೈಯದ್‌ಸಿದ್ದಿಕ್‌, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್‌. ಪ್ರಸನ್ನಕುಮಾರ್‌, ಕೆ.ಎಸ್‌. ಮಹೇಶ್‌, ಕಾಂಗ್ರೆಸ್‌ ಮುಖಂಡರಾದ ಶ್ರೀನಿವಾಸ್‌, ಆನಂದ, ಮಂದೀಪ್‌ ಮತ್ತಿತರರು ಇದ್ದರು.'

ರಮ್ಯಾ ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಲಿ ಎಂದ MLC ಚನ್ನರಾಜ ಹಟ್ಟಿಹೊಳಿ

ಮಧು ಮಾದೇಗೌಡ ಪರವಾಗಿ ಎಂ.ಬಿ. ಪಾಟೀಲ್‌ ಮತಯಾಚನೆ: ದಕ್ಷಿಣ ಪದವೀರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರ ಪರವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ. ಪಾಟೀಲ್‌ ಅವರು ಗುರುವಾರ ಮತಯಾಚಿಸಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಅವರು, ನಂತರ ಹೊಸ ಮಠಕ್ಕೆ ತೆರಳಿ ಶ್ರೀ ಚಿದಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ನಂತರ ನಟರಾಜ ವಿದ್ಯಾಸಂಸ್ಥೆಯಲ್ಲಿ ಪದವೀರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.

click me!