100 ಕ್ಷೇತ್ರಗಳ ಟಿಕೆಟ್‌ ಫೈನಲ್‌: ಕಾಂಗ್ರೆಸ್‌ ಮಹತ್ವದ ಸಭೆ

By Kannadaprabha NewsFirst Published Jan 29, 2023, 7:58 AM IST
Highlights

ಫೆಬ್ರವರಿ 10ರೊಳಗೆ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಪ ಟ್ಟಿಅಂತಿಮಗೊಳಿಸಲು ಪಕ್ಷವು ಭರ್ಜರಿ ಕಸರತ್ತು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮೂವರು ಮೇರು ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಫೆ. 1ರಂದು ಸಭೆ ಸೇರಲಿದ್ದಾರೆ. 

ಬೆಂಗಳೂರು(ಜ.29): ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲು ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಸಮಯಾವಕಾಶ ನೀಡುವ ಉದ್ದೇಶದಿಂದ ಶೀಘ್ರ ಟಿಕೆಟ್‌ ಅಂತಿಮಗೊಳಿಸಲು ನಿರ್ಧರಿಸಿರುವ ಕಾಂಗ್ರೆಸ್‌ ನಾಯಕತ್ವವು ಫೆ. 1ರಂದು ಮಹತ್ವದ ಸಭೆ ಆಯೋಜಿಸಿದೆ. ಫೆಬ್ರವರಿ 10ರೊಳಗೆ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಪ ಟ್ಟಿಅಂತಿಮಗೊಳಿಸಲು ಪಕ್ಷವು ಭರ್ಜರಿ ಕಸರತ್ತು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮೂವರು ಮೇರು ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಫೆ. 1ರಂದು ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಅಖೈರುಗೊಳಿಸುವ ಸಾಧ್ಯತೆಯಿದೆ.

ಕೆಪಿಸಿಸಿಯ ಪ್ರದೇಶ ಚುನಾವಣಾ ಸಮಿತಿ ಸಭೆ ಫೆ.2ರಂದು ನಡೆಯಲಿದ್ದು, ಈ ಸಭೆಗೆ ಪೂರ್ವಭಾವಿಯಾಗಿ ಸಿದ್ದರಾಮಯ್ಯ, ಶಿವಕುಮಾರ್‌ ಹಾಗೂ ಸುರ್ಜೇವಾಲಾ ಅವರು ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಲು ಫೆ.1ರಂದು ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಟ್ವಿಸ್ಟ್: ರಾಜಕೀಯದ ದಿಕ್ಕು ಬದಲಿಸುತ್ತಾ ಈ ಸುದ್ದಿ?

ಚುನಾವಣಾ ಸಮಿತಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಹೀಗಾಗಿ ಈ ಸಭೆಯಲ್ಲಿ ವಿಸ್ತಾರವಾದ ಚರ್ಚೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯಲ್ಲೇ ಪ್ರತಿಕ್ಷೇತ್ರಕ್ಕೂ ಬಂದಿರುವ ಪ್ಯಾನೆಲ್‌ (ಪ್ರತಿಕ್ಷೇತ್ರಕ್ಕೂ ಎರಡಕ್ಕಿಂತ ಹೆಚ್ಚು ಹೆಸರು ಇರುವ ಪಟ್ಟಿ)ನಲ್ಲಿ ಯಾರಿಗೆ ಟಿಕೆಟ್‌ ಕೊಡಬಹುದು ಎಂಬ ಬಗ್ಗೆ ಮೂವರೂ ನಾಯಕರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ನಿರ್ಧಾರವನ್ನು ಚುನಾವಣಾ ಸಮಿತಿ ಸಭೆಗೆ ತಿಳಿಸಿ ಅಭಿಪ್ರಾಯ ಸಂಗ್ರಹಿಸುತ್ತಾರೆ. ಇದಾದ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ ಅನುಮೋದನೆಗೆ ಕಳುಹಿಸಲಾಗುವುದು. ಈ ಪಟ್ಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ಫೆ. 10ರೊಳಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

click me!