* ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭವಿಷ್ಯ
* ಕಾಂಗ್ರೆಸ್ ಆಡಳಿತದಲ್ಲಿ ನೀರಾವರಿಗೆ ಸಾಕಷ್ಟು ಹಣ ನೀಡಿದ ಸಿದ್ದರಾಮಯ್ಯ
* ಒಮಿಕ್ರೋನ್ ಟಾಸ್ಕ್‌ಫೋರ್ಸ್ ರಚಿಸಲು ಪತ್ರ ಬರೆಯುವೆ
ವಿಜಯಪುರ(ಡಿ.20): ವಿಧಾನ ಪರಿಷತ್ ಚುನಾವಣೆ(Vidhan Parishat Election) ಫಲಿತಾಂಶ 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಿದೆ. 2023ರಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ(Sunilgouda Patil) ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್(Congress) ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಸಿದ್ದರಾಮಯ್ಯ(Siddaramaiah) ನೀರಾವರಿಗೆ ಸಾಕಷ್ಟು ಹಣ ನೀಡಿದ್ದಾರೆ. ಅವರಿಂದಾಗಿ ಅವಳಿ ಜಿಲ್ಲೆಯಲ್ಲಿ ಬಹಳಷ್ಟು ನೀರಾವರಿ(Irrigation) ಕೆಲಸಗಳಾಗಿವೆ. ಕಾಂಗ್ರೆಸ್ ಆಡಳಿತದಲ್ಲಿ ಆಗಿರುವಷ್ಟು ನೀರಾವರಿ ಕಾಮಗಾರಿಗಳು ಯಾವ ಸರ್ಕಾರದಲ್ಲೂ ಆಗಿಲ್ಲ. ಬಿಜೆಪಿ ಸರ್ಕಾರ(BJP Government) ನೀರಾವರಿ ಹಾಗೂ ರೈತರಿಗಾಗಿ(Farmers) ಹಣ ಬಿಡುಗಡೆ ಮಾಡುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಂಬಳ ನೀಡಲು ಸಹಿತ ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸರ್ಕಾರದ ವಿರುದ್ಧ ದೂರಿದರು.
Belagavi Violence: ನನಗೆ ಗೃಹ ಖಾತೆ ಕೊಡಿ, ಒಬ್ಬರೆ ಮಗಾ ಸದ್ದು ಮಾಡಿದರೆ ನೋಡಿ: ಯತ್ನಾಳ್
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮೂರೇ ವರ್ಷದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳದ ಬಗ್ಗೆ ಸದನದಲ್ಲಿ ಗಮನ ಸೆಳೆದಿದ್ದೇನೆ. ಪಿಂಚಣಿ ಬಗ್ಗೆ ಪ್ರಸ್ತಾಪಿಸಿದ್ದೇನೆ. ಬಸ್ ಪಾಸ್ ಬಗ್ಗೆಯೂ ಧ್ವನಿ ಎತ್ತಿದ್ದೇನೆ. ಪಿಡಿಒಗಳ ಸಮಸ್ಯೆ ಬಗ್ಗೆಯೂ ಮಾತನಾಡಿದ್ದೇನೆ. ಹೀಗಾಗಿ ಮತದಾರರು ಈ ಬಾರಿ ಇಡೀ ರಾಜ್ಯದಲ್ಲಿಯೇ(Karnataka) ಅತೀ ಹೆಚ್ಚು ಮತ ಪಡೆದ ಮೂರು ಜನರಲ್ಲಿ ಒಬ್ಬನನ್ನಾಗಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ ತುಂಬಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್ ಅಧಿವೇಶನದಲ್ಲಿಯೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಬಗ್ಗೆ ಸದಾ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಸರ್ಕಾರದ ಗಮನ ಸೆಳೆಯುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ತಾವು ಎಲ್ಲ 15 ವಿಧಾನಸಭೆ ಕ್ಷೇತ್ರಗಳಲ್ಲಿ ಸಭೆ ಮಾಡಿ ಶೇ.95 ರಷ್ಟು ಮತದಾರರನ್ನು ತಲುಪಿದ್ದೇನೆ. ವಿಜಯಪುರ-ಬಾಗಲಕೋಟೆಯ ಜಿಲ್ಲೆಯ ಶಾಸಕ, ಮಾಜಿ ಸಚಿವರ, ಮಾಜಿ ಶಾಸಕರು ಮಾಡಿದ ಜನಪರ ಕೆಲಸಗಳಿಂದಾಗಿ ತಮಗೆ ಈ ಚುನಾವಣೆಯಲ್ಲಿ ಉತ್ತಮ ಮತಗಳು ಬಂದಿವೆ ಎಂದು ತಿಳಿಸಿದರು.
ಗೌರವ ಧನ ಹೆಚ್ಚಳಕ್ಕೆ ಒತ್ತು:
ತಿರಸ್ಕೃತ ಮತಗಳಲ್ಲಿ ಬಹುತೇಕ ಮತಗಳು ನನಗೆ ಬಂದಿವೆ. ಆದರೆ, ತಾಂತ್ರಿಕ ಕಾರಣದಿಂದಾಗಿ ಅವು ತಿರಸ್ಕೃತವಾಗಿವೆ. ಭವಿಷ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ, ಪಿಂಚಣಿ, ಬಸ್ ಪಾಸ್, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ವಸತಿಹೀನರಿಗೆ ಮನೆಗಳ ನಿರ್ಮಾಣ ಮತ್ತು ಹಂಚಿಕೆ ಈಗ ತುರ್ತಾಗಿ ಆಗಬೇಕಿದೆ. ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಕೆಲವು ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ತಾಂತ್ರಿಕವಾಗಿ ಅಷ್ಟೇ ಹಿಂದುಳಿದಿದ್ದೇವೆ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಬೇಕಿದೆ ಎಂದರು.
Karnataka politics: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಯತ್ನಾಳ್, ಜಾರಕಿಹೊಳಿ
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ, ಕಾಂಗ್ರೆಸ್ ಮುಖಂಡರಾದ ವೈಜನಾಥ ಕರ್ಪೂರಮಠ, ಅಬ್ದುಲ್ ಹಮೀದ್ ಮುಫ್, ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ವಿದ್ಯಾರಾಣಿ ತುಂಗಳ, ಜಮೀರ ಅಹ್ಮದ ಭಕ್ಷಿ, ವಸಂತ ಹೊನಮೋಡೆ ಮುಂತಾದವರು ಇದ್ದರು.
ಒಮಿಕ್ರೋನ್ ಟಾಸ್ಕಫೋರ್ಸ್ ರಚಿಸಲು ಪತ್ರ ಬರೆಯುವೆ
ಕೊರೋನಾ(Coronavirus) ಒಮಿಕ್ರೋನ್(Omicron) ಆತಂಕ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹಿಸಿ ವಿಜಯಪುರ(Vijayapura) ಮತ್ತು ಬಾಗಲಕೋಟೆ(Bagalkot) ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಈ ಹಿಂದೆ ಕೊರೋನಾ ತೀವ್ರವಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಟಾಸ್ಕಫೋರ್ಸ್ ರಚಿಸಲಾಗಿತ್ತು. ಆ ಕಾರ್ಯಪಡೆಗಳು ಆರಂಭದಲ್ಲಿಯೇ ಉತ್ತಮ ಕೆಲಸ ಮಾಡಿ ಸೋಂಕು ಹೆಚ್ಚಾಗದಂತೆ ಸಾಕಷ್ಟು ತಡೆದಿವೆ. ಒಮಿಕ್ರೋನ್ ಆಂತಕ ಇರುವ ಹಿನ್ನೆಲೆಯಲ್ಲಿ ಕೂಡಲೇ ಮತ್ತೆ ಟಾಸ್ಕಫೋರ್ಸ್(Task Force) ರಚಿಸಿ ಕಾರ್ಯೋನ್ಮುಖರಾಗಬೇಕು. ಈ ಮೂಲಕ ಆರಂಭದಲ್ಲಿಯೇ ಒಮಿಕ್ರೋನ್ ತಡೆಯಲು ಸಹಾಯವಾಗಲಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.