Karnataka Politics: ಬರೀ ಲೂಟಿ ಹೊಡೆ​ಯುವ ಬಿಜೆಪಿ ಸರ್ಕಾರ: ರಾಯರೆಡ್ಡಿ

Kannadaprabha News   | Asianet News
Published : Dec 20, 2021, 07:58 AM IST
Karnataka Politics: ಬರೀ ಲೂಟಿ ಹೊಡೆ​ಯುವ ಬಿಜೆಪಿ ಸರ್ಕಾರ: ರಾಯರೆಡ್ಡಿ

ಸಾರಾಂಶ

*  ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಬಡವರಿಗೆ ಉಚಿತ ಮನೆ *  ಬಿಜೆಪಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆಯಿಲ್ಲ *  ಜನರ ಪಾಲಿಗೆ ಇದ್ದೂ ಇಲ್ಲದಂತಾದ ಬಿಜೆಪಿ ಸರ್ಕಾರ 

ಯಲಬುರ್ಗಾ(ಡಿ.20): ಬಿಜೆಪಿ ಸರ್ಕಾರಕ್ಕೆ(BJP Government) ಬಡವರ ಬಗ್ಗೆ ಕಾಳಜಿ ಇಲ್ಲ. ಕೇವಲ ಲೂಟಿ ಹೊಡೆಯುವ ಸರ್ಕಾರ ಇದಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಹೇಳಿದರು.
ಪಟ್ಟಣದ ಕಾಂಗ್ರೆಸ್‌(Congress) ಪಕ್ಷದ ಕಚೇರಿಯಲ್ಲಿ ಭಾನುವಾರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಆಯೋಜಿಸಿದ್ದ ರಾಯಚೂರ-ಕೊಪ್ಪಳ(Raichur-Koppal) ವಿಧಾನ ಪರಿಷತ್‌(Vidhan Parishat) ಸದಸ್ಯರಾಗಿ ಆಯ್ಕೆಯಾದ ಶರಣಗೌಡ ಬಯ್ಯಾಪೂರ(Sharanagouda Bayyapura) ಅವರಿಗೆ ಅಭಿನಂದನಾ ಸಮಾರಂದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆಯಿಲ್ಲ. ಬರೀ ಹಣ ಲೂಟಿ(Loot) ಹೊಡೆಯುವ ಕಾರ್ಯದಲ್ಲೇ ಮಗ್ನರಾಗಿದ್ದಾರೆ. ಇಂತಹ ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದರು.

ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇದುವರೆಗೊ ಬಡವರಿಗೆ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಆದರೆ ಈ ಹಿಂದೆ ಕಾಂಗ್ರೆಸ್‌ ಸರ್ಕಾರ(Congress Government) ಅಧಿಕಾರದಲ್ಲಿದ್ದಾಗ ಸಾಕಷ್ಟು ಮನೆಗಳನ್ನು ನೀಡಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election) ಬಿಜೆಪಿಗೆ ತಕ್ಕ ಪಾಠ ಕಲಿಸಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೆ ಎಲ್ಲಾ ಬಡವರಿಗೆ ಉಚಿತ ಮನೆಗಳನ್ನು ನೀಡುತ್ತೇವೆ ಎಂದು ಹೇಳಿದರು.

Koppal| ನೀರಾವರಿ ಹೆಸರಿನಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಹಗ್ಗ-ಜಗ್ಗಾಟ

ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ರಾಜ್ಯದ ನೂತನ ವಿಪ ಸದಸ್ಯರು ಅಭಿವೃದ್ಧಿ ಪರ ಕಾಳಜಿಯುಳ್ಳವರಾಗಿದ್ದಾರೆ. ಶರಣಗೌಡ ಪಾಟೀಲ ಅವರು ಸಹಕಾರಿ ಧುರೀಣರಾಗಿದ್ದಾರೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆ ಕುರಿತು ವಿಧಾನಸೌಧದಲ್ಲಿ ಧ್ವನಿ ಎತ್ತಲಿದ್ದಾರೆ. ಕುಷ್ಟಗಿ ಯುವ ಮುಖಂಡ ದೊಡ್ಡಬಸವನಗೌಡ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಗ್ರಾಪಂ ಸದಸ್ಯರು ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರು ರಾಜಕೀಯ ಅನುಭವವುಳ್ಳವರು, ಅಭಿವೃದ್ಧಿಯ ರೂವಾರಿಗಳು, ಅವರನ್ನು ನೋಡಿ ನಮ್ಮಂತಹ ರಾಜಕಾರಣಿಗಳು(Politicians) ಸಾಕಷ್ಟು ಕಲಿಯಬೇಕಿದೆ. ಈ ಹಿಂದೆ ನಾನು ಎಂದೂ ರಾಯರೆಡ್ಡಿಯವರ ಪಕ್ಕ ಕುಳಿತಿಲ್ಲ. ಇದೀಗ ಕುಳಿತಿದ್ದೇನೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ, ಹನುಮಂತಗೌಡ ಚೆಂಡೂರು, ಯಂಕಣ್ಣ ಯರಾಶಿ, ಬಿ.ಎಂ. ಶಿರೂರು, ಅಡಿವೆಪ್ಪ ಭಾವಿಮನಿ, ಅಶೋಕ ತೋಟದ, ರಾಮಣ್ಣ ಸಾಲಭಾವಿ, ಮಂಜುನಾಥ ಕಡೇಮನಿ, ರೇವಣೆಪ್ಪ ಸಂಗಟಿ, ಎಂ.ಎಫ್‌. ನದಾಫ್‌, ರಾಜಶೇಖರ ನಿಂಗೋಜಿ, ಬಸವರಾಜ ಪೂಜಾರ, ಸಂಗಣ್ಣ ಟೆಂಗಿನಕಾಯಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸಾವಿತ್ರಿ ಗೊಲ್ಲರ, ಹನುಮಗೌಡ ಪೊಲೀಸ್‌ ಪಾಟೀಲ, ಡಾ. ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಳ್ಳಿ, ಆನಂದ ಉಳ್ಳಾಗಡ್ಡಿ ಮತ್ತಿತರರು ಇದ್ದರು.

'ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರದಲ್ಲಿ ಮುಳುಗಿದೆ'

ಪ್ರಧಾನಿ ಮೋದಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರಿಗೆ ಅರ್ಥಶಾಸ್ತ್ರವೇ(Economics) ಗೊತ್ತಿಲ್ಲ, ಇಂತಹವರಿಂದ ದೇಶ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ. 

ಅರ್ಥಶಾಸ್ತ್ರಜ್ಞ ಡಾ. ಮನಮೋಹನಸಿಂಗ್‌(Manmohan Singh) ಪ್ರಧಾನಿಯಾಗಿದ್ದಾಗ(Prime Minister) ದೇಶ ಸಾಕಷ್ಟು ಆರ್ಥಿಕ ಪ್ರಗತಿ ಸಾಧಿಸಿತ್ತು. ಆದರೆ, ಮೋದಿ ಪ್ರಧಾನಿಯಾದ ಮೇಲೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಜನತೆಗೆ ಮೂಲಸೌಕರ್ಯಗಳನ್ನು ಕಲ್ಪಿಸಿ, ನೆಮ್ಮದಿಯಿಂದ ಬದುಕುವುದಕ್ಕೆ ಅನುಕೂಲ ದೊರೆಕಿಸಿಕೊಡಬೇಕಾದದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಬೇಕು. ಅದು ಬಿಟ್ಟು ಜಾತಿ, ಧರ್ಮಗಳಲ್ಲಿ ಒಡೆದಾಳುವ ಹಿಟ್ಲರ್‌ ನೀತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!