ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 180 ಸ್ಥಾನಗಳನ್ನು ಗಳಿಸುವದರ ಮೂಲಕ ಹೀನಾಯವಾಗಿ ಪರಾಭವಗೊಳ್ಳುತ್ತದೆ. ಈಗಿನ ಪ್ರಧಾನ ಮಂತ್ರಿಗಳು ಈ ಹಿಂದೆ ದೇಶದ ಜನರಿಗೆ ಭರವಸೆ ನೀಡಿರುವದು ಮರೀಚಿಕೆಯಾಗಿದೆ: ಎ.ಎಚ್. ಆಜಾದ್ ಪೇಂಟರ್
ಗಂಗಾವತಿ(ಏ.27): ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 24 ರಿಂದ 26 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡ ಎ.ಎಚ್.ಆಜಾದ್ ಪೇಂಟರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಎ.ಎಚ್.ಆಜಾದ್ ಪೇಂಟರ್ ಅವರು, 1965 ರಿಂದ ದೇಶದ ರಾಜಕೀಯ ಗಮನಿಸುತ್ತಾ ಬಂದಿರುತ್ತೇನೆ. ಕೀಳು ಮಟ್ಟದ ರಾಜಕೀಯಲ್ಲಿ ರಾಜಕೀಯ ಪಕ್ಷಗಳು ಇರುವದು ಕಾಣುತ್ತೇವೆ. ಈಗಿನ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧೀಮಂತ ನಾಯಕರಾಗಿದ್ದಾರೆ. ಇವರು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ಸೇರಿಸಿಕೊಂಡು ಪ್ರಚಾರ ಸಮಿತಿ ಅದ್ಯಕ್ಷರನ್ನಾಗಿ ಮಾಡುವದರ ಜೊತೆಗೆ ಪ್ರಚಾರ ಕೈಗೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಕೊಪ್ಪಳ : ಸಂಗಣ್ಣ ಕರಡಿ ಬೆನ್ನಲ್ಲೇ 50ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ
ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 180 ಸ್ಥಾನಗಳನ್ನು ಗಳಿಸುವದರ ಮೂಲಕ ಹೀನಾಯವಾಗಿ ಪರಾಭವಗೊಳ್ಳುತ್ತದೆ. ಈಗಿನ ಪ್ರಧಾನ ಮಂತ್ರಿಗಳು ಈ ಹಿಂದೆ ದೇಶದ ಜನರಿಗೆ ಭರವಸೆ ನೀಡಿರುವದು ಮರೀಚಿಕೆಯಾಗಿದೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ. ವರ್ಷದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಸುಳ್ಳು ಹೇಳಿ 10 ವರ್ಷ ರಾಜಕೀಯ ಮಾಡಿ ಕಾಲಹರಣ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹೀಗಾಗಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಮತ ಹಾಕಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಬೇಕೆಂದು ಎ.ಎಚ್. ಆಜಾದ್ ಪೇಂಟರ್ ಮನವಿ ಮಾಡಿಕೊಂಡಿದ್ದಾರೆ.