Latest Videos

ವಿಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಆಯನೂರು ಮಂಜುನಾಥ್ ವಿಶ್ವಾಸ

By Kannadaprabha NewsFirst Published May 24, 2024, 9:07 PM IST
Highlights

ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಜಾರಿಗೊಳಿಸಿದ್ದು, ಈ ದಿಸೆಯಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ನಿಶ್ಚಿತವಾಗಿ ಜಯಗಳಿಸಲಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು. 

ಶಿಕಾರಿಪುರ (ಮೇ.24): ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಜಾರಿಗೊಳಿಸಿದ್ದು, ಈ ದಿಸೆಯಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ನಿಶ್ಚಿತವಾಗಿ ಜಯಗಳಿಸಲಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಮುದಿಗೌಡರ ಕೇರಿಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನುಡಿದಂತೆ ನಡೆದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 

ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಸರ್ಕಾರ ಘೋಷಿಸಿದ ಎಲ್ಲ ಗ್ಯಾರಂಟಿಗಳನ್ನು ಕಡಿಮೆ ಅವಧಿಯಲ್ಲಿಯೇ ಅನುಷ್ಠಾನಗೊಳಿಸಿದ್ದು ನಿರುದ್ಯೋಗಿ ಪದವೀಧರರಿಗೆ ₹3ಸಾವಿರ ಹಾಗೂ ಡಿಪ್ಲೊಮಾ ಪದವೀಧರರಿಗೆ ₹1.5ಸಾವಿರ ಭತ್ಯೆ ನೀಡಲಾಗುತ್ತಿದೆ. ಈ ದಿಸೆಯಲ್ಲಿ ಕಳೆದ 4 ದಶಕದಿಂದ ಬಿಜೆಪಿ ಸತತ ಜಯಗಳಿಸಿದ್ದ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಖಂಡಿತ ಬದಲಾವಣೆಯಾಗಿ ಕಾಂಗ್ರೆಸ್ ಜಯಗಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಣ, ಹೆಂಡ, ಜಾತಿ ಮೇಲೆ ಮತ ಕೇಳಲ್ಲ: ಆಯನೂರು ಮಂಜುನಾಥ್

2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿವೇಶನದಲ್ಲಿ ತೀವ್ರವಾಗಿ ವಿರೋಧಿಸಿ ಸರ್ಕಾರಿ ನೌಕರರ ₹85 ಕೋಟಿ ವೇತನ ಭತ್ಯೆ ಬಿಡುಗಡೆಗೊಳಿಸಿದ್ದು ಇದರಿಂದಾಗಿ ನೌಕರರು ತಮ್ಮ ಪರವಾಗಿದ್ದಾರೆ ಎಂದರು. ದಸರಾ ಸಂದರ್ಭದಲ್ಲಿ ರಾಜ್ಯದ 300ಕ್ಕೂ ಅಧಿಕ ಮಾವುತರು ವೇತನ ಹೆಚ್ಚಳಕ್ಕೆ ಪ್ರತಿಭಟಿಸಿದಾಗ ಸಚಿವರಾಗಿದ್ದ ಸೋಮಶೇಖರ್ ಡಿಎಫ್ಒ, ಆರ್‌ಎಫ್ಒ ಸೇರಿಕೊಂಡು ದಸರಾ ಆಚರಿಸಲಿ ಎಂದು ಅದೇ ಪಕ್ಷದಲ್ಲಿದ್ದು ಬಹಿರಂಗವಾಗಿ ಪ್ರತಿಭಟಿಸಿ, ಮಾವುತರ ವೇತನ ಹೆಚ್ಚಳಕ್ಕೆ ಸಹಕರಿಸಿದ್ದಾಗಿ ಸ್ಮರಿಸಿಕೊಂಡರು.

ಕೆಪಿಸಿಸಿ ಪ್ರ.ಕಾ ನಾಗರಾಜಗೌಡ ಮಾತನಾಡಿ, ವಿಧಾನ ಪರಿಷತ್‌ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು ವಿಧಾನಸಭೆಯಲ್ಲಿನ ಎಲ್ಲ ವಿಷಯಗಳು ಪರಿಷತ್ತಿನಲ್ಲಿ ಅಂಗೀಕಾರವಾಗಬೇಕಾಗಿದೆ. ಈ ದಿಸೆಯಲ್ಲಿ ಕಾರ್ಯಕರ್ತರು ಇತ್ತೀಚೆಗೆ ಲೋಕಸಭಾ ಚುನಾವಣೆಗಾಗಿ ಹೆಚ್ಚಿನ ಸಮಯ ವ್ಯಯಿಸಿದ್ದಾಗಿ ನಿರ್ಲಕ್ಷಿಸದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ತಿಳಿಸಿ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಪ್ರತಿ ಮತದಾರರ ಮನೆಮನೆಗೆ ತೆರಳಿ ಮನವೊಲಿಸಿ ಗೆಲುವಿನಲ್ಲಿ ಪಾತ್ರ ವಹಿಸುವಂತೆ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ ಶಿರಾಳಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ, ಪುರಸಭಾ ಸದಸ್ಯ ದರ್ಶನ್ ಉಳ್ಳಿ, ರೋಷನ್ ಮುಖಂಡ ಚಂದ್ರಭೂಪಾಲ್, ವೈ.ಎಚ್ ನಾಗರಾಜ್, ಶಿವಶಂಕರಪ್ಪ ಜಂಬೂರು, ಎಚ್.ಎಸ್ ರವೀಂದ್ರ, ಭಂಡಾರಿ ಮಾಲತೇಶ್, ರಾಘು ನಾಯ್ಕ, ಕೃಷ್ಣೋಜಿರಾವ್, ಶಿವ್ಯಾನಾಯ್ಕ, ಉಮೇಶ್ ಮಾರವಳ್ಳಿ ಮತ್ತಿತರರಿದ್ದರು.

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ: ಸಂಸದ ಬಿ.ವೈ.ರಾಘವೇಂದ್ರ

ಮತಯಾಚಿಸಲು ಸಮಯದ ಅಭಾವ: ಶಿವಮೊಗ್ಗ, ಉಡುಪಿ, ಮಂಗಳೂರು, ಕೊಡಗು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕು ಸಹಿತ 6 ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿದ್ದು, ಖುದ್ದು ಎಲ್ಲ ಮತದಾರರನ್ನು ಭೇಟಿಯಾಗಿ ಮತಯಾಚಿಸಲು ಸಮಯದ ಅಭಾವವಿದೆ. ಈ ದಿಸೆಯಲ್ಲಿ ಮುಖಂಡರು ಕಾರ್ಯಕರ್ತರು ಚುನಾವಣೆ ಸವಾಲಾಗಿ ಸ್ವೀಕರಿಸಿ ಮತದಾರರ ಮನವೊಲಿಸಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚಾಗಿದ್ದು, ಕುಟುಂಬ ರಾಜಕಾರಣದಿಂದ ತತ್ತರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಬಹಿರಂಗವಾಗಿ ಬಂಡಾಯವೆದ್ದು ಸ್ಪರ್ಧಿಸಿದ್ದು, ಈ ಬಾರಿ ಅದೇ ಮಾದರಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್‌ರು ಬಿಜೆಪಿ ಸೋಲಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು.

click me!