ಬಳ್ಳಾರಿಯಲ್ಲಿ ಮತ್ತೊಮ್ಮೆ ದ್ವೇಷ ರಾಜಕೀಯ, ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ಚಿಂತನೆ

By Suvarna News  |  First Published May 19, 2022, 1:40 PM IST

* ಬಳ್ಳಾರಿಯಲ್ಲಿ ಮತ್ತೊಮ್ಮೆ ದ್ವೇಷದ ರಾಜಕೀಯ
* ರಿಪಬ್ಲಿಕ್ ಆಫ್ ಬಳ್ಳಾರಿ ಆಗಲು ಬಿಡೋದಿಲ್ಲವೆಂದ ಕಾಂಗ್ರೆಸ್ ನಾಯಕರು
* ರಾಜ್ಯಪಾಲರಿಗೆ ದೂರು ಕೊಡಲು ಚಿಂತನೆ ನಡೆಸಿರೋ ಕಾಂಗ್ರೆಸ್


ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಮೇ.19) :
ಸಾರ್ವತ್ರಿಕ ಚುನಾವಣೆ ಇನ್ನೂ ಒಂದು ವರ್ಷ ಬಾಕಿ‌‌ ಇರುವಂತೆ ಬಳ್ಳಾರಿಯಲ್ಲಿ ದ್ವೇಷ ಮತ್ತು ಬೆದರಿಕೆ ರಾಜಕೀಯ ಜೋರಾಗಿದೆ. ಸಾಮಾನ್ಯವಾಗಿ ಯಾವುದೇ ಜಿಲ್ಲೆಯಲ್ಲಿ ಚುನಾವಣೆ ಹತ್ತಿರ ಬಂತು ಅಂದ್ರೇ,  ಪರಸ್ಪರ ಆರೋಪ  ಪ್ರತ್ಯಾರೋಪ ಸಾಮಾನ್ಯವಾಗಿರುತ್ತದೆ. ಆದ್ರೇ ಬಳ್ಳಾರಿಯಲ್ಲಿ ರಾಜಕೀಯ ಸ್ವಲ್ಪ ಭಿನ್ನವಾಗಿದೆ. ಆರೋಪ ಪ್ರತ್ಯಾರೋಪವಲ್ಲ ಆರೋಪದ ಜೊತೆಗೆ ಹಳೇ ಪ್ರಕರಣಕ್ಕೆ ಮರು ಜೀವ ಕೊಡೋದು, ಕೇಸ್ ಗಳನ್ನು ಹಾಕಿಸೋದು ಮತ್ತು ಜೈಲಿಗೆ ಕಳುಹಿಸೋ ಕೆಲಸಗಳು ನಡೆಯುತ್ತವೆ.
 
ರಾಜ್ಯಪಾಲರಿಗೆ ದೂರು ನೀಡಲು ಚಿಂತನೆ
 ಬಿಜೆಪಿ ನಾಯಕರ ಅರಾಜಕತೆಯಿಂದ ಬೇಸತ್ತ ಕಾಂಗ್ರೆಸ್ ಶಾಸಕ ನಾಗೇಂದ್ರ ರಾಜ್ಯಪಾಲರಿಗೆ ದೂರು ಕೊಡೋ ಬಗ್ಗೆ  ಗಂಭೀರವಾಗಿ ಚಿಂತನೆ ನಡೆಸಿದ್ದಾರೆ.  ಅಧಿಕಾರ ಪಡೆಯಲು ಬಿಜೆಪಿ ನಾಯಕರು ಯಾವ ಹಂತಕ್ಕಾದ್ರೂ ಇಳಿಯಲು ಸಿದ್ದವಿದ್ದಾರೆ. ಆದ್ರೇ, ಮತ್ತೊಮ್ಮೆ ರಿಪಬ್ಲಿಕ್ ಆಫ್ ಬಳ್ಳಾರಿ ಅಗೋಕೆ ಬಿಡೋದಿಲ್ಲ ಎನ್ನುತ್ತಿರೋ ಶಾಸಕ ನಾಗೇಂದ್ರ.   ಅವರು ಸಿದ್ಧರಾಮಯ್ಯ ಮತ್ತು  ಡಿ.ಕೆ. ಶಿವಕುಮಾರ ಅವರ  ಜೊತೆಗೆ ಚರ್ಚಿಸಿ ಬಳ್ಳಾರಿಯಲ್ಲಿ ಬಿಜೆಪಿ ನಾಯಕರು ನಡೆಸುತ್ತಿರೋ ದಬ್ಬಳಿಕೆ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡೋ ಬಗ್ಗೆ ಚಿಂತನೆ ನಡೆಸಿರೋದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ  ಸ್ಪಷ್ಟಪಡಿಸಿದ್ದಾರೆ. 

Ballari ರೌಡಿ ಶೀಟರ್ ಹತ್ಯೆ, ಶಾಸಕ ಸೋಮಶೇಖರ ರೆಡ್ಡಿ ನೀಡಿದ್ರಾ ಬೆಂಬಲ?
 
ಕಾರ್ಪೋರೇಟರ್ ಮತ್ತು ಕಾರ್ಯಕರ್ತರಿಗೆ ಬೆದರಿಕೆ
 ಇನ್ನೂ ಕಳೆದ ವಾರ ನಡೆದ ಮೇಯರ್ ಸ್ಥಾನಕ್ಕೆ ಮೂರುವರೆ ಕೋಟಿ ಡೀಲ್ ‌ಪ್ರಕರಣದಲ್ಲೂ ಬಿಜೆಪಿ ಕೈವಾಡವಿದೆ. ಈ ಬಗ್ಗೆ ರಾಜ್ಯ ನಾಯಕರಿಗೆ ಸ್ಥಳೀಯರ ಕಾಂಗ್ರೆಸ್ ನಾಯಕರು ವರದಿಯನ್ನು ಸಲ್ಲಿಸಿದ್ದು, ಇದೆಲ್ಲವೂ ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ನಡೆಯುತ್ತಿರೋ ದಬ್ಬಾಳಿಕೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇನ್ನೂ ಬಿಜೆಪಿ ಜೊತೆಗೆ ಸಹಕರಿಸಿ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಬೆದರಿಕೆ ಹಾಕ್ತಿದ್ದಾರೆ. ಸಹರಕರಿಸದೇ ಇದ್ರೇ, ಮುಂದೆ ಐತೆ ಮಾರಿ ಹಬ್ಬ, ನಿಮ್ಮನ್ನು  ನೋಡಿಕೊಳ್ತೇವೆಂದು ಪಾಲಿಕೆ ಸದಸ್ಯರು ಮತ್ತು ಕೆಲ ಕಾಂಗ್ರೆಸ್ ಮುಖಂಡರಿಗೆ ನೇರವಾಗಿ ಧಮ್ಕಿ ಹಾಕಲಾಗಿದೆ.. ಇದಕ್ಕೆ ಸಾಕ್ಷಿ ಎನ್ನುವಂತೆ ಈಗಾಗಲೇ ಪ್ರಕರಣ ವೊಂದರಲ್ಲಿ ಕಾರ್ಪೋರೇಟರ್ ಪತಿಯೊಬ್ಬರನ್ನು ಬಂಧಿಸಲಾಗಿದೆ ಮತ್ತೋರ್ವ ಕಾರ್ಪೋರೇಟರ್ ಜಮೀನು ವಿವಾದ ಹಿನ್ನೆಲೆ ದೂರು ದಾಖಲಿಸಲಾಗಿದೆ. ಇನ್ನೂ ಮೇಯರ್ ಡೀಲ್ ವಿಚಾರದಲ್ಲಿಯೂ ಬಿಜೆಪಿ ಪರೋಕ್ಷವಾಗಿ ಜಗಳ ಹಚ್ಚಿದೆ ಅನ್ನೋದು ಕಾಂಗ್ರೆಸ್ ನಾಯಕರ ಆರೋಪವಾಗಿದೆ.
 
ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಶ್ರೀರಾಮುಲು ಬರುತ್ತಾರೆ..?
 ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 9 ವಾರ್ಡ್ಗಳು ಕೌಲ್ ಬಜಾರ ಎನ್ನುವ  ಬಳ್ಳಾರಿ ಗ್ರಾಮಾಂತರ  ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಅಲ್ಪ ಸಂಖ್ಯಾತ ಮತಗಳು ಹೆಚ್ಚಾಗಿರೋ ಹಿನ್ನೆಲೆ ಇಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. 2008ರಿಂದಲೂ ಈ ಕ್ಷೇತ್ರವನ್ನು ಶ್ರೀರಾಮುಲು ಪ್ರತಿನಿಧಿಸುತ್ತಿದ್ದು, ಬದಲಾದ ಸನ್ನಿವೇಶದಲ್ಲಿ 2018 ರಲ್ಲಿ ಶ್ರೀರಾಮುಲು ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡಿದ್ರು. ಆಗ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಶ್ರೀರಾಮುಲು ಸಹೋದರ ಸಣ್ಣ ಪಕೀರಪ್ಪ ಅವರು ಶಾಸಕ ನಾಗೇಂದ್ರ ವಿರುದ್ಧ ಸೋಲನ್ನು ಅನುಭವಿಸಿದ್ರು. ಇದೀಗ ಶ್ರೀರಾಮುಲು ವಾಪಸ್ ತಮ್ಮ ಕ್ಷೇತ್ರಕ್ಕೆ ವಾಪಸ್ ಬರೋ ಪ್ಲಾನ್ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಅದರಲ್ಲೂ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಒಂದಷ್ಟು ದಬ್ಬಾಳಿಕೆ ನಡೆಯುತ್ತಿದೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪವಾಗಿದೆ. 

Tap to resize

Latest Videos

click me!